Prophet muhammad biography in kannada trees
The biography of Prophet Muhammad – Month 1
Mahabba Campaign Part-1/365
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಫಾರೂಕ್ ನಈಮಿ ಉಸ್ತಾದರ ಮಹಬ್ಬ ಕ್ಯಾಮ್ಪೈನ್ ಸ್ನೇಹ ಕಾಲಂ ಎನ್ನುವ ಶೀರ್ಷಿಕೆಯಲ್ಲಿ ವಿಶ್ವ ಪ್ರವಾದಿ ﷺ ತಂಙಳವರ ಕುರಿತು ಮಲಯಾಳಂ ಭಾಷೆಯಲ್ಲಿ ಬರೆಯುವ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನವಾಗಿದೆ ಇದು.
ಮಕ್ಕದಲ್ಲಿ (ಸೌದಿಯಾ ಅರೇಬಿಯಾ) ಉನ್ನತವಾದ ಕುಟುಂಬವಾಗಿದೆ ಖುರೈಶ್ ಕುಟುಂಬ.
ಖುರೈಶ್’ಗಳ ನಾಯಕರಾಗಿದ್ದಾರೆ ಅಬ್ದುಲ್ ಮುತ್ತಲಿಬ್. ಅವರ ಹದಿಮೂರು ಗಂಡು ಮಕ್ಕಳಲ್ಲಿ ಒಬ್ಬರಾಗಿದ್ದಾರೆ ಅಬ್ದುಲ್ಲಾಹ್. ಒಳ್ಳೆಯ ವ್ಯಕ್ತಿತ್ವವನ್ನು, ಉತ್ತಮ ಗುಣನಡತೆಯನ್ನು ಹೊಂದಿರುವ ಸುಂದರನಾದ ಯುವಕನಾಗಿದ್ದಾರೆ ಅವರು. ಯಾವಾಗಲೂ ತಮ್ಮ ತಂದೆಯ ಜೊತೆಯಲ್ಲಿಯೇ ಇರುವರು. ತಮ್ಮ ಸ್ವಂತ ಕುಟುಂಬದ ಸದಸ್ಯರ ಹಾಗೆ ಮಕ್ಕದಲ್ಲಿ ಎಲ್ಲರಿಗೂ ಪ್ರಿಯವಾಗಿದ್ದ ವ್ಯಕ್ತಿಯಾಗಿದ್ದರು ಅವರು. ಅನಾವಶ್ಯಕ ಕಾರ್ಯಗಳಲ್ಲಿ ಅಧಿಕವಾಗಿದ್ದ ಮೈಮರೆಯುತ್ತಿದ್ದ ಸಮೂಹದಲ್ಲಿ ಇದೆಲ್ಲದರಿಂದ ಪ್ರತ್ಯೇಕವಾಗಿ ನಿಂತರು.
ಮೂಡ ನಂಬಿಕೆಗಳು ಅಧಿಕವಾಗಿ ಜಲಾಡುತಿದ್ದ ಕಾಲ ಆದರೆ ಇವರಿಗೆ ಅದು ಇಷ್ಟವಿಲ್ಲದ ಕಾರ್ಯವಾಗಿತ್ತು. ಪ್ರಾಮಾಣಿಕವಾಗಿ ಮಕ್ಕದ ಸುಂದರಿಯರಾದ ತರುಣಿಗಳು ಅವರನ್ನು ಇಷ್ಟ ಪಟ್ಟಿದ್ದರು. ಕೆಲವರು ತಮ್ಮ ಮನದ ಆಗ್ರಹಗಳನ್ನು ತಿಳಿಸಿದರು ಇನ್ನು ಕೆಲವರು ನೇರವಾಗಿಯೆ ಬಂದು ತಿಳಿಸಿದರು ಆದರೆ ಅಬ್ದುಲ್ಲಾ ಅದ್ಯಾವುದನ್ನು ಪರಿಗಣಿಸಿರಲಿಲ್ಲ. ಕೆಲವೊಂದು ಆಮೀಷಗಳನ್ನು ಮುಂದೆ ಇಟ್ಟು ಕೆಲವು ಉನ್ನತ ಕುಟುಂಬದ ಶ್ರೀಮಂತ ಮನೆತನದ ಸುಂದರಿ ತರುಣಿಗಳು ತಮ್ಮ ಅಭಿಲಾಷೆಯನ್ನು ವ್ಯಕ್ತ ಪಡಿಸಿದ್ದರು ಆದರೆ ಅದ್ಯಾವುದು ಪ್ರಯೋಜನವಾಗಲಿಲ್ಲ.
ಊರಿನ ಪದ್ದತಿ ಪ್ರಕಾರ ಅಬ್ದುಲ್ಲಾಹ್’ರಿಗೆ ವಿವಾಹ ಪ್ರಾಯ ಹತ್ತಿರವಾದಾಗ ಕುಟುಂಬಸ್ಥರು ಕೂಡ ವಿವಾಹ ಅನ್ವೇಷಣೆ ನಡೆಸಿದರು.
ಅದೋ ಒಳ್ಳೆಯ ಅನ್ವೇಷಣೆ ಸುಂದರಿಯಾದ ಉನ್ನತ ಮನೆತನದ ವಹಾಬಿನ ಮಗಳು ಆಮೀನ. ಕುಟುಂಬಸ್ಥರಿಗೆ ಬಹಳ ಇಷ್ಟವಾಯಿತು, ಯಾವ ರೀತಿಯಲ್ಲಿಯೂ ಅಬ್ದುಲ್ಲಾಹ್’ರಿಗೆ ಹೇಳಿ ಮಾಡಿಸಿದ ಜೋಡಿ ಎನ್ನುವಂತಿತ್ತು. ಮೊದಲ ನೋಟದಲ್ಲಿಯೇ ಪರಸ್ಪರ ಇಬ್ಬರಿಗೂ ಇಷ್ಟವಾಯಿತು.
ಗಮನಾರ್ಹ ವಿವಾಹವಾಗಿತ್ತು ಅದು, ಅತ್ಯುತ್ತಮ ರೀತಿಯಲ್ಲಿ ವಿಭಿನ್ನವಾಗಿ ಸಜ್ಜೀಕರಿಸಲಾಗಿತ್ತು. ವಾದ್ಯೋಪಕರಣಳು ಇನ್ನಿತರ ವಸ್ತುಗಳು ಯಾವುದು ಕೂಡ ಇರಲಿಲ್ಲ, ವಧುವರರ ಕುಟುಂಬಗಳಿಂದ ಪ್ರಮಖರು ಒಟ್ಟು ಸೇರಿದರು.
ಪರಸ್ಪರ ಬಹಳ ಗೌರವ ಆದರದಿಂದಲೇ ವಿವಾಹ ಕಾರ್ಯಗಳು ಪೂರ್ತಿಯಾಯಿತು.
ಅಬ್ದುಲ್ಲಾಹ್ ಹಾಗೂ ಆಮೀನರ ದಾಂಪತ್ಯ ಜೀವನವು ಮಕ್ಕ ಜನತೆಗೆ ಬಹಳ ಕುತೂಹಲ ಮೂಡಿಸಿತ್ತು. ಈ ಜೋಡಿ ಗುಬ್ಬಚ್ಚಿಗಳ ಏಕತೆಯೂ ಯಾರಿಗೂ ಹೊಟ್ಟೆಕಿಚ್ಚು ತರಿಸುವಂತಾಗಿತ್ತು. ದಂಪತಿಗಳ ಜೀವನವು ಬಹಳ ಉತ್ತಮ ರೀತಿಯಲ್ಲಿ ಮುಂದೆ ಸಾಗಿತು ಹೀಗಿರುವಾಗ ಆಮೀನ ಗರ್ಭವತಿಯಾದರು.
ಅಷ್ಟೊತ್ತಿಗೆ ಮಕ್ಕದಿಂದ ವ್ಯಾಪಾರ ಸಂಘವು ವ್ಯಾಪಾರಕ್ಕೆ ತೆರಳುವ ಸಮಯವಾಗಿತ್ತು.
ಪತ್ನಿಯನ್ನು ಬಿಟ್ಟು ಅಬ್ದುಲ್ಲಾಹ್ ವ್ಯಾಪಾರ ಸಂಘದೊಂದಿಗೆ ತೆರಳಿದರು.
ವಿಧಿಗೆ ಕೆಲವು ನಿರ್ಣಯಗಳಿವೆ ಅದನ್ನು ವಿಧಿಸುವವನು (ಸೃಷ್ಟಿಕರ್ತನು) ಅದರಲ್ಲಿ ಸಾರ್ವಭೌಮತ್ವ ಹಾಗೂ ಗುರಿಗಳನ್ನು ಹೊಂದಿರುವನು ಅದನ್ನು ಬದಲಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ. ಹಿಂತಿರುಗಿ ಬರುವಾಗ ಮದೀನದಲ್ಲಿ (ಅವತ್ತಿನ ಯಸ್’ರಿಬ್) ಅಬ್ದುಲ್ಲಾಹ್ ರೋಗ ಪೀಡಿತರಾದರು. ರೋಗ ಉಲ್ಬಣಗೊಂಡು ಅವರು ಇಹಲೋಕ ತ್ಯಜಿಸಿದರು.
ಮರಣ ವಿವರವು ತಿಳಿದ ಪತ್ನಿ ದುಃಖವನ್ನು ಅದುಮಿಟ್ಟುಕೊಂಡು ವಿಧಿಯನ್ನು ಕ್ಷಮಿಸಿದರು. ಅದರೊಂದಿಗೆ ತನ್ನ ಪ್ರಿಯತಮನು ಸಮ್ಮಾನಿಸಿದ ಗರ್ಭವನ್ನು ಬಹಳ ಸೂಕ್ಷ್ಮವಾಗಿ ಕಾಳಜಿವಹಿಸಿದರು.
ಕ್ರಿ. ಶ 571 ಏಪ್ರಿಲ್ 20 ಸೋಮವಾರ (ರಬಿವುಲ್ ಅವ್ವಲ್ 12) ಮುಂಜಾನೆ ಆಮೀನ ಒಂದು ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದರು. ಅವರಾಗಿದ್ದಾರೆ ಲೋಕದ ಪ್ರವಾದಿ ಮುತ್ತು ಮುಹಮ್ಮದ್ ಸಲ್ಲಲಾಹು ಅಲೈಹಿವಸಲ್ಲಮ್..
ಇತಿಹಾಸದ ಕಣ್ಣ ಮುಂದೆ ಹಾದು ಬಂದ ಪುಣ್ಯ ಜನ್ಮ….
(ಮುಂದುವರಿಯುವುದು…)
ಭಾಗ – 02
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮಕ್ಕ ಹಿಂದಿನಿಂದಲೂ ಪಟ್ಟಣ ಪ್ರದೇಶವಾಗಿದೆ.
ಪಟ್ಟಣದಲ್ಲಿ ಜನಿಸುವ ಗಂಡು ಮಕ್ಕಳನ್ನು ಮೊಲೆಹಾಲುಣಿಸಲು ಗ್ರಾಮಗಳಿಗೆ ಕಳುಹಿಸುತ್ತಿದ್ದರು ಅದು ಆ ಊರಿನ ಸಂಪ್ರದಾಯವಾಗಿತ್ತು. ಶುದ್ಧವಾದ ಗಾಳಿ ಸಿಗಲು ಹಾಗೂ ಸಾಂಕ್ರಾಮಿಕ ರೋಗಗಳಿಂದ ಮಗುವನ್ನು ರಕ್ಷಿಸಲು ಅದು ಉಪಯುಕ್ತವಾಗುತ್ತಿತ್ತು, ಮರುಭೂಮಿಯ ಜೀವನ ಶೈಲಿಯು ಅದು ಮಕ್ಕಳಿಗೆ ಬಹಳಷ್ಟು ಒಳಿತುಗಳಿಗೆ ಅವಕಾಶಗಳನ್ನು ನೀಡುತ್ತಿತ್ತು.
ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದರಲ್ಲಿ ಕೆಲವು ಕುಟುಂಬಗಳು ಉತ್ತಮರಾಗಿದ್ದರು, ಅದರಲ್ಲಿ ಪ್ರಸಿದ್ಧರಾಗಿದ್ದವರು ಬನೂ ಸಅದ್ ಜನಾಂಗ.
ಮಕ್ಕದ ಆಗ್ನೇಯ ಭಾಗದಲ್ಲಿ ವಾಸಿಸುತ್ತಿದ್ದ ಹವಾಸಿಲ್ ಕುಲದವರಾಗಿದ್ದರು ಅವರು. ಆಮೀನ ಬೀವಿಯು ಕೂಡ ಮಗನಿಗೆ ಮೊಲೆಹಾಲುಣಿಸಲು ಬನೂ ಸಅದ್ ಜನಾಂಗವನ್ನು ಬಯಸಿದರು, ಸಾಕು ತಾಯಿಗಳು ಮಕ್ಕಳನ್ನು ಹುಡುಕಿ ಮಕ್ಕ ಪಟ್ಟಣಕ್ಕೆ ಬರುವುದನ್ನು ಕಾದು ಕುಳಿತಿದ್ದರು, ತಡವಾಗದೆ ಅವರ ಗುಂಪು ಮಕ್ಕ ಪಟ್ಟಣಕ್ಕೆ ಬರಲು ಆರಂಭಿಸಿತು. ಅವರ ಜೊತೆಯಲ್ಲಿ ಅಬ್ದು ಐಬ್’ನ ಮಗಳಾದ ಹಲೀಮ ಬೀವಿ ಕೂಡ ಇದ್ದರು ಜೊತೆಯಲ್ಲಿ ಅವರ ಪತಿಯಾದ ಹಾರಿಸ್ ಹಾಗೂ ನವಜಾತ ಶಿಶುವಾದ ಅಬ್ದುಲ್ಲಾಹ್ (ಲಂರ) ಎನ್ನುವ ಮಗು ಕೂಡ ಇತ್ತು.
ಹಲೀಮ ಅವರು ತಮ್ಮ ನೆನಪುಗಳ ಅಂಗಳಕ್ಕೆ ಮರಳಿದರು.
ಅದೊಂದು ಅದ್ಭುತವಾಗಿತ್ತು. ಬೀವಿಯವರು ಈ ರೀತಿಯಾಗಿ ವಿವರಿಸುತ್ತಾರೆ. ಅದೊಂದು ಬರಗಾಲ ಸಮಯ ಇರುವ ಸಂಪತ್ತುಗಳೆಲ್ಲವು ಖಾಲಿಯಾಗಿತ್ತು. ಆದಷ್ಟು ಬೇಗ ಮಕ್ಕ ಪಟ್ಟಣಕ್ಕೆ ತೆರಳಬೇಕು, ಎದೆಹಾಲುಣಿಸಲು ಒಂದು ಮಗುವನ್ನು ಪಡೆಯಬೇಕು, ಅದರಿಂದ ಸಿಗುವ ಪ್ರಯೋಜನಗಳಿಂದ ಜೀವನವನ್ನು ಸುಧಾರಿಸಿಕೊಳ್ಳಬೇಕು, ಬೂದು ಬಣ್ಣದ ಹೆಣ್ಣು ಕತ್ತೆ ಹಾಗೂ ಕೆಚ್ಚಲಲ್ಲಿ ಹಾಲು ಕಮ್ಮಿಯಿರುವ ಒಂದು ಒಂಟೆ ಮಾತ್ರವಾಗಿದೆ ನಮ್ಮ ಬಳಿಯಿರುವುದು. ನನ್ನ ಎದೆಯಲ್ಲಿ ಹಾಲಿಲ್ಲದ ಕಾರಣ ಮಗು ಅಳು ನಿಲ್ಲಿಸುತ್ತಲೇ ಇಲ್ಲ, ಏನೇ ಆಗಲಿ ಮಕ್ಕ ಪಟ್ಟಣಕ್ಕೆ ತೆರಳಿದೆವು.
ನಮ್ಮಂತೆಯಿರುವ ಮತ್ತೊಂದು ಗುಂಪಿನೊಂದಿಗೆಯಾಗಿತ್ತು ಪ್ರಯಾಣ ಬೆಳೆಸಿದ್ದು. ಮೆಲ್ಲ ಮೆಲ್ಲ ಹೆಜ್ಜೆ ಇಟ್ಟು ನಡೆಯುವ ನಮ್ಮ ವಾಹನವನ್ನು ಕಾಯುತ್ತ ನಮ್ಮ ಗೆಳೆತಿಯರು ಗೊಂದಲಕ್ಕೆ ಸಿಲಿಕಿದರು, ಮಳೆ ಬಂದಿದ್ದರೆ ಅದೆಷ್ಟೋ ಒಳ್ಳೆದಿತ್ತು ಎಂದು ಬಹಳಷ್ಟು ಆಗ್ರಹಿಸಿದರೂ ಕೂಡ ಮಕ್ಕ ನಗರ ತಲುಪುವವರೆಗೂ ಒಂದು ಹನಿ ಕೂಡ ಮಳೆ ಬರಲೇ ಇಲ್ಲ. ಎಲ್ಲರೂ ಮಕ್ಕಳನ್ನು ಹುಡುಕಿ ಹೊರಟರು. ಆಮೀನ ಬೀವಿ ಅವರ ಮನೆಗೂ ತಲುಪಿದರು ತಂದೆ ಮರಣ ಹೊಂದಿದ ಕಾರಣ ಮಗುವನ್ನು ಯಾರೂ ಕೂಡ ಎತ್ತಿಕೊಳ್ಳಲು ತಯಾರಾಗಿಲ್ಲ.
ಮಗುವಿನ ತಂದೆಯಿಂದ ಸಿಗುವ ಬಹುಮಾನ, ಉಡುಗೊರೆಗಲ್ಲವೇ ಸಾಕು ತಾಯಿಯರ ಭರವಸೆ. ನೇರವಾಗಿ ಕೂಲಿ ಪಡೆಯುವ ವೃತ್ತಿಯಾಗರಲಿಲ್ಲ ಎದೆಹಾಲುಣಿಸುವುದು. ಇದೊಂದು ದೀರ್ಘಾವಧಿಯ ಭವಿಷ್ಯ ಹಾಗೂ ಅದರೊಂದಿಗೆ ಬರುವ ಪ್ರಯೋಜನಗಳೊಂದಿಗಿನ ಸಂಬಂಧವಾಗಿತ್ತು ಹಾಗೂ ಸಾಂಪ್ರದಾಯಿಕವಾಗಿ ಬರುತ್ತಿದ್ದ ಒಂದು ಆಚರಣೆಯ ಭಾಗವಾಗಿತ್ತು ಅಷ್ಟೆ. ಒಂದು ಗ್ರಾಮೀಣ ಕುಟುಂಬ ಹಾಗೂ ಪಟ್ಟಣವಾಸಿಗಳ ನಡುವಿನ ಈ ಸಂಬಂಧಗಳಲ್ಲಿ ಬಹಳ ಆಯಾಮಗಳಿರುತಿತ್ತು, ಪರಸ್ಪರರ ಅವಶ್ಯಕತೆಗಳನ್ನು ಪೂರೈಕೆ ಮಾಡುತಿದ್ದರು.
ಒಂದು ಅನಾಥ ಮಗುವನ್ನು ನೋಡುಕೊಳ್ಳುದರಲ್ಲಿ ವೈಮನಸ್ಸು ಬಂದದ್ದು ಇಲ್ಲಿಯಾಗಿತ್ತು.
ಏನೇ ಆಗಲಿ ಮಗುವನ್ನು ಒಮ್ಮೆ ನೋಡೋಣ ಎಂದು ಅಂದು ಕೊಂಡೆನು ಅಷ್ಟರಲ್ಲಿ ಇತರರು ಮಕ್ಕಳೊಂದಿಗೆ ಮಕ್ಕದಿಂದ ಹೊರಡಲು ತಯಾರಾಗಿದ್ದರು. ಆಮೀನ ಬೀವಿಯವರ ಸುಂದರ ಮಗುವಿನ ಬಳಿ ನಾನು ತಲುಪಿದೆನು. ಈ ಮಗುವನ್ನು ನಾವು ಕೊಂಡಾಗುತ್ತೇನೆ ದೇವನು ನಮ್ಮನ್ನು ಅನುಗ್ರಹಿಸುವನು ಎಂದು ತೀರ್ಮಾನಿಸಿದಾಗ ಇದಕ್ಕೆ ಪತಿಯೂ ಕೂಡ ಸಮ್ಮತಿಸಿದರು. ಮಗುವನ್ನು ಎತ್ತಿ ಎದೆಗೆ ಅಪ್ಪಿಕೊಂಡದ್ದೇ ತಡ ಎದೆಹಾಲು ತುಂಬಿ ಹೋಯಿತು.
ನನ್ನ ಮಗನೂ, ಸಾಕು ಮಗನೂ ಹೊಟ್ಟೆ ತುಂಬಾ ಹಾಲು ಕುಡಿದರು. ಎಂಥಾ ಅದ್ಭುತ.! ಒಂಟೆಯ ಕೆಚ್ಚಲಲ್ಲೂ ಕೂಡ ಹಾಲು ತುಂಬಿತ್ತು, ಕತ್ತೆಯು ಕೂಡ ಆರೋಗ್ಯದಿಂದ ಬಹಳ ಲವಲವಿಕೆಯಿಂದ ಆಟವಾಡುತ್ತಿತ್ತು. ನನ್ನ ಪತಿ ಹೇಳಿದರು ನೀನು ಎತ್ತಿಕೊಂಡ ಮಗು ಒಂದು ಅನುಗ್ರವಲ್ಲವೇ ಎಂದು? ಹೌದು ನನ್ನ ಭರವಸೆಯೂ ಕೂಡ ಅದುವೇ ಆಗಿದೆ ಎಂದು ಉತ್ತರಿಸಿದೆನು ನಂತರ ಅಲ್ಲಿಂದ ಗ್ರಾಮಕ್ಕೆ ಹಿಂತಿರುಗಳು ತೀರ್ಮಾನಿಸಿ ನಾನು ಈ ಹೊಸ ಮಗುವಿನೊಂದಿಗೆ ಕತ್ತೆಯ ಮೇಲೆ ಹತ್ತಿದೆನು.
ವಾಹನವು ಬಹಳ ವೇಗವಾಗಿ ಲವಲವಿಕೆಯಿಂದ ಚಲಿಸುತ್ತಿತ್ತು. ಗೆಳೆತಿಯರು ಎಲ್ಲರೂ ನಮ್ಮಿಂದ ಹಿಂದೆಯೇ ಬಾಕಿಯಾದರು. ಅವರು ನಮ್ಮ ಬಳಿ ಕಾಯಲು ಹೇಳಿದರು. ಇದೆಂಥಾ ಅದ್ಭುತ ಹಲೀಮ ಬಹಳ ಪುಣ್ಯ ಮಾಡಿದ್ದಾಳೆ ಎಂದು ಗೆಳೆತಿಯರು ಹೇಳತೊಡಗಿದರು.
ಹೌದು ಮುತ್ತು ಮುಹಮ್ಮದ್ ನಬಿ ತಂಙಳವರು ಮಕ್ಕ ಪಟ್ಟಣದಿಂದ ಕುಗ್ರಾಮಕ್ಕೆ ಯಾತ್ರೆ ಆರಂಭಿಸಿದರು…..
(ಮುಂದುವರಿಯುವುದು…)
Part-3/365
ಭಾಗ – 03
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಹಲೀಮ ಬೀವಿ ತಮ್ಮ ಮಾತು ಮುಂದುವರೆಸುತ್ತಾರೆ, ನಾವು ಬನೂ ಸಅದ್ ಗ್ರಾಮಕ್ಕೆ ತಲುಪಿದೆವು.
ನಮ್ಮ ಮಗು ನಮ್ಮ ಕುಟೀರವನ್ನು ಪ್ರವೇಶಿಸಿತು. ಏನೋ ಒಂದು ಸಂತೋಷ ಮುಹಮ್ಮದ್ ಮಗನ ಆಗಮನದಿಂದ ಎಲ್ಲರಿಗೂ ಅನುಗ್ರಹಗಳು ಲಭಿಸತೊಡಗಿತು. ಗ್ರಾಮದ ಸಂಪೂರ್ಣ ಛಾಯಾವೇ ಬದಲಾಯಿತು ಒಂದು ಸಣ್ಣ ಗಿಡವು ಕೂಡ ಇಲ್ಲದ ಊರಾಗಿತ್ತು ಅದು ಈಗ ಹಚ್ಚ ಹಸಿರಿನಿಂದ ತುಂಬಿ ತುಳುಕುತ್ತಿದೆ. ಜಾನುವಾರುಗಳು ಹೊಟ್ಟೆ ತುಂಬುವಷ್ಟು ಮೆಯ್ಯಲು ಸಾಕಾಗುವಷ್ಟು ಹುಲ್ಲುಗಳಿವೆ, ಎಲ್ಲಾ ಸಮಯದಲ್ಲೂ ಕೆಚ್ಚಲು ತುಂಬಿ ಇರುತ್ತದೆ, ನೆರೆಹೊರೆಯವರ ಮನೆಯ ಜಾನುವಾರಗಳ ಕೆಚ್ಚಲಲ್ಲಿ ಹಾಲಿಲ್ಲದಿದ್ದರೂ ನಮ್ಮ ಮನೆಯ ಜಾನುವಾರಗಳಲ್ಲಿ ಹಾಲು ಇದ್ದೆ ಇರುತ್ತದೆ, ಕೆಲವರು ಹೇಳುತ್ತಿದ್ದರು ಹಲೀಮ ಬೀವಿಯವರ ಮೇಕೆಗಳನ್ನು ಕಟ್ಟುವ ಸ್ಥಳದಲ್ಲಿಯೇ ನಮ್ಮ ಮೇಕೆಗಳನ್ನು ಮೇಯಿಬೇಕೆಂದು, ಆದರೆ ಅದು ಮಾತ್ರವಾಗಿರಲಿಲ್ಲ ನಮ್ಮ ಮೇಕೆಯಲ್ಲಿ ಯಾವಾಗಲೂ ಹಾಲು ಇರುದಕ್ಕೆ ಕಾರಣ.
ಎರಡು ವಯ್ಯಸಿನ ವರೆಗೂ ನಾನು ಮುಹಮ್ಮದ್ ಮಗನಿಗೆ ಹಾಲುಣಿಸಿದೆನು, ಆಗಲೂ ನಂತರವೂ ಅಸಾಧಾರಣವಾದ ಬೆಳವಣಿಗೆಯಾಗಿತ್ತು ಮಗನಲ್ಲಿ ಕಂಡದ್ದು, ಇದೀಗ ಸ್ವಂತ ತಾಯಿಗೆ ಮಗುವನ್ನು ತಿರುಗಿ ನೀಡುವ ಸಮಯ ಬಂದೆ ಬಿಟ್ಟಿದೆ.
ಬಿಟ್ಟು ಕೊಡಲು ಮನಸ್ಸು ಒಂಚೂರು ಒಪ್ಪುತ್ತಿಲ್ಲ, ಮುದ್ದು ಮಗುವಿನ ಆಗಮನದಿಂದ ನಮಗೆ ಲಭಿಸಿದ ಆನಂದ, ಐಶ್ವರ್ಯವೆಲ್ಲವೂ ವರ್ಣನಾತೀತವಾಗಿದೆ. ತಾಯಿ ಆಮೀನರಲ್ಲಿ ಒಮ್ಮೆ ವಿನಂತಿಸಿ ನೋಡೋಣ ಎಂದು ಅಂದು ಕೊಂಡೆನು. ಆ ಸಮಯದಲ್ಲಿ ಮಕ್ಕ ಪಟ್ಟಣದಲ್ಲಿ ಪ್ಲೇಗ್ ಮಹಾಮಾರಿ ಹರಡುತ್ತಿದ್ದ ಸಮಯವಾಗಿತ್ತು. ನಮ್ಮ ಒತ್ತಾಯಕ್ಕೂ, ಪ್ಲೇಗ್ ಮಹಾಮಾರಿಯ ಕಾರಣದಿಂದಲೂ ಮನಸ್ಸಿಲ್ಲದ ಮನಸ್ಸಿನಲ್ಲಿ ಮತ್ತೊಮ್ಮೆ ನಮ್ಮೊಂದಿಗೆ ಮಗುವನ್ನು ತಾಯಿ ಆಮೀನರು ಬಿಟ್ಟು ಕೊಡಲು ಒಪ್ಪಿದರು, ಬಹಳ ಸಂತೋಷದಿಂದ ಊರಿಗೆ ಪುನಃ ಮರಳಿದೆವು.
ನನ್ನ ಮಗಳು ಶೈಮಾಳಿಗಂತೂ ಅದೇನೋ ಒಂಥರ ಸಂತೋಷವಾಗಿತ್ತು. ಮಗುವಿಗೆ ಲಾಲಿ ಅವಳೇ ಹಾಡುತ್ತಿದ್ದಳು, ಮಗಿವಿನ ಜೊತೆ ಜೊತೆಯಲ್ಲಿಯೇ ಯಾವಾಗಲೂ ಓಡಾಡುತ್ತಿದ್ದಳು, ಹೀಗೆ ಕಾಲವು ಉರುಳಿತು. ಎರಡು ಮಕ್ಕಳು ಕೂಡ ನಮ್ಮ ಮನೆಯ ಹತ್ತಿರದಲ್ಲೇ ಇರುವ ಹುಲ್ಲುಗಾವಲಿನಲ್ಲಿ ಆಟವಾಡುತ್ತಿದ್ದರು, ತಕ್ಷಣವೇ ಲಂರ ಮಗನು ಓಡಿ ಬಂದು ನಡುಗಿತ್ತಾ ಹೇಳಿದನು ನಮ್ಮ ಖುರೈಶಿ ಸಹೋದರನನ್ನು ಯಾರೋ ಇಬ್ಬರು ಬಂದು ಕೊಂಡು ಹೋದರು, ಬಿಳಿ ವಸ್ತ್ರಧಾರಿಗಳಾಗಿದ್ದರು, ಅವರು ಮಗುವನ್ನು ದೂರ ಕೊಂಡೊಗಿ ಮಲಗಿಸಿ ಎದೆ ಸೀಳಿ ಎದೆಯೊಳಗೆ ಕೈಹಾಕಿದರು ಎಂದು ಹೇಳಿದನು.
ನಾನು ನನ್ನ ಪತಿಯು ಭಯದಿಂದ ಕಂಗಾಲಾದೆವು, ತಕ್ಷಣವೇ ನಾವು ಓಡಿ ಹೋಗಿ ನೋಡಿದಾಗ ಅದೋ ಅಲ್ಲಿ ನಿಂತಿರುವನು ಮುಹಮ್ಮದ್ ಮಗನು, ಆದರೆ ಮುಖದಲ್ಲಿ ಏನೋ ಒಂದು ಬದಲಾವಣೆ ಎದ್ದು ಕಾಣುತ್ತಿತ್ತು. ತಕ್ಷಣವೇ ಮಗುವನ್ನು ಎತ್ತಿ ಎದೆಗಪ್ಪಿಕೊಂಡು ಮುದ್ದು ಮಗನೇ ಏನಾಯಿತು? ಎಂದು ಕೇಳಿದಾಗ ಯಾರೋ ಬಿಳಿ ವಸ್ತ್ರಧಾರಿಗಳು ಬಂದು ನನ್ನನ್ನು ಮಲಗಿಸಿ ನನ್ನ ಎದೆಯನ್ನು ಸೀಳಿ ಒಳಗಿನಿಂದ ಏನೋ ಒಂದನ್ನು ಹೊರತೆಗೆದರು ಏನೆಂದು ತಿಳಿಯಲಿಲ್ಲ ಎಂದು ಉತ್ತರಿಸಿದನು.
ನಾನೂ, ನನ್ನ ಪತಿಯು ಸುತ್ತ ಮುತ್ತಲು ಬಹಳಷ್ಟು ನೋಡಿದೆವು ಯಾರನ್ನೂ ಕಾಣಲಿಲ್ಲ, ಶರೀರದಲ್ಲಾದರೆ ಸಣ್ಣ ಗಾಯದ ಗುರುತು ಕೂಡ ಕಾಣುತ್ತಿಲ್ಲ. ಶರೀರವನ್ನು ಸಂಪೂರ್ಣವಾಗಿ ವೀಕ್ಷಿಸಿದಾಗ ಇನ್ನೊಂದು ಅದ್ಭುತವೂ ಕೂಡ ಕಾಣಲು ಸಾಧ್ಯವಾಯಿತು.
ಭುಜದ ಮೇಲೆ ಅದೋ ಆ ಮುದ್ರೆ…
(ಮುಂದುವರಿಯುವುದು….)
Part-4/365
ಭಾಗ – 04
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪ್ರವಾದಿತ್ವದ ಮುದ್ರೆಯಾಗಿತ್ತು ಅದು, “ಖಾತಮುನ್ನುಬುವ್ವ” ಎಂದು ಆಗಿದೆ ಅರಬಿ ಭಾಷೆಯಲ್ಲಿ ಹೇಳುವುದು.
ಜನಿಸಿದ ಅಂದಿನಿಂದಲೂ ಆ ಮುದ್ರೆ ಮುತ್ತು ಪ್ರವಾದಿ ﷺ ತಂಙಳವರ ಭುಜದ ಮೇಲೆ ಇತ್ತು ಈಗ ಸಾಂದರ್ಭಿಕವಾಗಿ ಒಂದು ನೋಟ ಅಲ್ಲಿಗೆ ಹೋಯಿತು ಎಂದು ಮಾತ್ರ ಪಾರಿವಾಳದ ಮೊಟ್ಟೆಯ ರೂಪದಲ್ಲಿರುವ ಶರೀರಕ್ಕೆ ಅಂಟಿಕೊಂಡಿರುವ ಸ್ವಲ್ಪ ರೋಮಗಳಿಂದ ಆವೃತವಾಗಿರುವ ದಪ್ಪವಾದ ಒಂದು ಪದರ ಈ ರೀತಿಯಾಗಿದೆ ಹದೀಸ್’ನಲ್ಲಿ ಉಲ್ಲೇಖಿಸಲಾಗಿರುವುದು.
ಹಲೀಮ ಬೀವಿ ಹಾಗೂ ಅವರ ಪತಿ ಇಬ್ಬರೂ ಬಹಳ ಚಿಂತಿತರಾದರು ಇನ್ನು ಏನು ಮಾಡುವುದು ಎಂದು, ಆದಷ್ಟು ಬೇಗ ಮಕ್ಕ ಪಟ್ಟಣಕ್ಕೆ ತೆರಳಿ ತಾಯಿಗೆ ಮಗನನ್ನು ಮರಳಿಸಿ ನಡೆದ ವಿಷಯಗಳನ್ನು ಎಲ್ಲವನ್ನು ತಿಳಿಸೋಣ ಎಂದು ಅಂದು ಕೊಂಡರು ಇದರ ನಡುವೆ ಇನ್ನೊಂದು ಭಯವೂ ಕೂಡ ಅವರನ್ನು ಆವರಿಸಿತು.
ಅದೇನೆಂದರೆ ಪ್ರವಾದಿತ್ವದ ಮುದ್ರೆ ಇರುವ ಮಗುವಿನ ಕುರಿತು ವೇಧ ಗ್ರಂಥಸ್ತರಿಗೆ ಮಾಹಿತಿ ಸಿಕ್ಕಿತ್ತು ಭವಿಷ್ಯದಲ್ಲಿ ಬರಲಿರುವ ಪ್ರವಾದಿ ಇವರೇ ಎಂದು ಅವರಿಗೆ ಅರ್ಥವಾಯಿತು ಯಹೂದಿಗಳು ಅವರನ್ನು ಶತ್ರುತ್ವದೊಂದಿಗೆಯಾಗಿತ್ತು ಕಾಣುತಿದ್ದದ್ದು. ಹಾಗಾಗಿ ಹಲೀಮ ವೇಗವಾಗಿ ಮಗನನ್ನು ಎತ್ತಿ ಮಕ್ಕ ಪಟ್ಟಣಕ್ಕೆ ತೆರಳಿ ನಡೆದ ಘಟನೆಗಳನ್ನು ಸಣ್ಣ ರೀತಿಯಲ್ಲಿ ವಿವರಿಸಿದಾಗ ಆಮೀನ ಸಂಪೂರ್ಣವಾಗಿ ತಿಳಿಯಲು ಆಗ್ರಹಿಸಿದರು ಹಲೀಮ ವಿಧಿಯಿಲ್ಲದೆ ಎಲ್ಲವನ್ನು ವಿವರಿಸಿಬೇಕಾಯಿತು ವಿಷಯ ತಿಳಿದಾಗ ಆಮೀನರಿಂದ ಚಿಂತಿತರಾಗುವ ಸನ್ನಿವೇಶವೇನು ಉಂಟಾಗಲಿಲ್ಲ ಬದಲಾಗಿ ಅವರೇ ಸಮಾಧಾನ ಪಡಿಸಿದರು.
ಉನ್ನತವಾದ ಪದವಿಗಳು ನನ್ನ ಮಗನಿಗಾಗಿ ಕಾಯುತ್ತಿದೆ ಎಂದು ಹೇಳುತ್ತಾ ತಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ಉಂಟಾದ ಅದ್ಭುತ ಅನುಭವಗಳನ್ನು ಕೂಡ ತಿಳಿಸಿದರು. ಹಾಗಿರುವಾಗ ಮಗನನ್ನು ವಾಪಸು ಕೊಂಡೊಗುತ್ತೇವೆ ಎಂದು ಆಗ್ರಹ ವ್ಯಕ್ತಪಡಿಸಿದಾಗ ತಾಯಿ ಆಮೀನ ಬೀವಿಯವರು ಅದಕ್ಕೆ ಅನುಮತಿ ನೀಡಲಿಲ್ಲ ಯಾತ್ರೆಯ ಶುಭಾಶಯವನ್ನು ತಿಳಿಸಿ ಕಳುಹಿಸಿದರು. ನಂತರದ ಜೀವನ ತಾಯಿ ಮಗನೊಂದಿಗಿನ ಅದ್ಭುತವಾದ ದಿವಸಗಳಾಗಿತ್ತು ಕುಟುಂಬದೊಂದಿಗೆ ಮನೆಯಲ್ಲಿ ಇನ್ನೂ ಬಹಳಷ್ಟು ಜನರು ಸದಸ್ಯರಿದ್ದಾರೆ ತಾತನ ಹಾಗೂ ತಂದೆಯ ಸಹೋದರನ ಸಮಾನ ವಯಸ್ಸಿನ ಮಕ್ಕಳು ಪ್ರತ್ಯೇಕವಾಗಿ ಹಂಝ ಹಾಗೂ ಸ್ವಫೀಯ ಪಿತ ಮಹಾನರಾದ ಅಬ್ದುಲ್ ಮುತ್ತಲಿಬ್’ರ (ತಾತ) ಮಕ್ಕಳಾಗಿದ್ದರು ಅವರು.
ಮೂವರು ಕೂಡ ಬಹಳ ಅನ್ಯೋನ್ಯತೆಯಲ್ಲಿದ್ದರು ಹೀಗೆ ಸುಂದರವಾದ ಮೂರು ವರ್ಷಗಳು ಕಳೆದು ಹೋಯಿತು. ಕಅಬಾದ ಪಕ್ಕದಲ್ಲಿ ತಾತ ಅಬ್ದುಲ್ ಮುತ್ತಲಿಬರು ಕುಳಿತುಕೊಳ್ಳುವ ಸ್ಥಳವಿತ್ತು ಆ ಸ್ಥಳಕ್ಕೆ ಯಾವುದೇ ಮಕ್ಕಳಿಗೂ ಅನುಮತಿಯಿರಲಿಲ್ಲ ಆದರೆ ಮುಹಮ್ಮದ್ ಮಗನಿಗೆ ಮಾತ್ರ ಅಲ್ಲಿಗೆ ಅನುಮತಿ ಇತ್ತು. ಇದರ ಕುರಿತು ಕೆಲವು ಗಣ್ಯರು ತಾತ ಅಬ್ದುಲ್ ಮುತ್ತಲಿಬ್’ರ ಬಳಿ ಕೇಳಿದಾಗ ಈ ಮಗನಲ್ಲಿ ನಾನು ಬಹಳಷ್ಟು ವಿಸ್ಮಯಗಳನ್ನು, ಅದ್ಬುತಗಳನ್ನು ಕಂಡಿದ್ದೇನೆ ಎಂದಾಗಿತ್ತು ಅವರು ಹೇಳುತ್ತಿದ್ದ ಉತ್ತರ.
ಮಗನಿಗೆ ಆರು ವಯಸ್ಸು ಪ್ರಾಯವಾದಾಗ ತಾಯಿ ಆಮೀನಾರಿಗೆ ಯಸ್’ರಿಬ್’ನಲ್ಲಿರುವ ತಮ್ಮ ಸಂಬಂಧಿಗಳನ್ನು ಕಾಣಬೇಕೆಂಬ ಆಗ್ರಹ ಉಂಟಾಯಿತು. ತಡ ಮಾಡದೆ ಒಂದು ವ್ಯಾಪಾರ ಗುಂಪಿನೊಂದಿಗೆ ಎರಡು ಒಂಟೆಯೊಂದಿಗೆ ಯಾತ್ರೆ ತೆರಳಿದರು ಅವರ ಜೊತೆಯಲ್ಲಿ ಸೇವಕಿ ಉಮ್ಮ ಐಮನ್ (ಬರಕ) ಕೂಡ ಇದ್ದರು. ಯಸ್’ರಿಬ್ ತಲುಪಿದ ಬಳಿಕ ಕೆಲವು ದಿವಸಗಳು ಅಲ್ಲಿಯೇ ತಮ್ಮ ಸಂಬಂಧಿಕರೊಂದಿಗೆಯೇ ಕಳೆದರು ಮಗನೊಂದಿಗೆ ತಮ್ಮ ಪ್ರಿಯ ಪತಿ ಅಬ್ದುಲ್ಲಾಹ್ ಅವರ ಖಬರ್ ಕೂಡ ಸಂದರ್ಶಿಸಿದರು ಈ ಘಟನೆಯನ್ನು ನಂತರ ಕಾಲದಲ್ಲಿ ಪ್ರವಾದಿವರ್ಯರು ನೆನೆದು ಹೇಳುತಿದ್ದರು.
ಕಝ್’ರಜ್’ರವರ ಕೊಳದಲ್ಲಿ ಈಜುತ್ತಾ, ಗಾಳಿಪಟ ಹಾರಿಸುತ್ತಾ ಹೀಗೆ ಕೆಲವು ದಿವಸಗಳು ಕಳೆದು ಮಕ್ಕ ಪಟ್ಟಣಕ್ಕೆ ಹಿಂತಿರುಗಲು ತೀರ್ಮಾನಿಸಿದರು. ಯಾತ್ರೆ ಆರಂಭಿಸಿ ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ ಆಮೀನರು ರೋಗ ಪೀಡಿತರಾದರು….
(ಮುಂದುವರೆಯುವುದು….)
Part-5/365
ಭಾಗ – 05
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಇನ್ನೂ ಪ್ರಯಾಣ ಮುಂದುವರಿಸುವುದು ತೊಂದರೆಯಾಗಬಹುದು ಎಲ್ಲಿಯಾದರೂ ಸ್ವಲ್ಪ ವಿಶ್ರಾಂತಿ ಪಡೆಯಬೇಕು ಹಾಗಾಗಿ ಅಬವಾಅ್ ಎನ್ನುವ ಸ್ಥಳದಲ್ಲಿ ಡೇರೆ ಹಾಕಲಾಯಿತು, ಮದೀನಾದಿಂದ ಮಕ್ಕ ಪಟ್ಟಣಕ್ಕೆ ತೆರಳುವ ದಾರಿಯಲ್ಲಿ ಸುಮಾರು 273 ಕಿ ಮೀ ದೂರದಲ್ಲಿರುವ ಸ್ಥಳವಾಗಿದೆ ಈ ಅಬವಾಅ್.
ರೋಗವು ಉಲ್ಬಣಗೊಳ್ಳುತ್ತಲೇ ಇತ್ತು ಹೀಗೆ ಆಮೀನ ಬೀವಿಯವರು (ರಲಿಯಲ್ಲಾಹ್) ಇಹಲೋಕ ತ್ಯಜಿಸಿದರು. ಮುತ್ತು ಪ್ರವಾದಿಯವರನ್ನು ﷺ ತಾಯಿ ಗರ್ಭವತಿಯಾಗಿದ್ದಾಗ ತಂದೆ ಮರಣ ಹೊಂದಿದ್ದರು ಈಗ ತಾಯಿ ಕೂಡ ಇಹಲೋಕ ತ್ಯಜಿಸಿದರು ಪ್ರವಾದಿವರ್ಯರು ﷺ ತಮ್ಮ ಆರನೇ ವಯ್ಯಸಿನಲ್ಲಿ ಸಂಪೂರ್ಣವಾಗಿ ಅನಾಥರಾದರು.
ತಾಯಿ ಕೊನೆಯುಸಿರು ಎಳೆಯುವ ಅಲ್ಪ ಸಮಯದ ಹಿಂದಿನ ತಾಯಿ ಮಗನ ಸಂಭಾಷಣೆಯು ಬಹಳ ಚಿಂತನಾರ್ಹವಾಗಿತ್ತು: ಮಗನೇ ನಾನು ಯಾತ್ರೆಯಾಗುತಿದ್ದೇನೆ ಬಹಳ ಒಳಿತುಗಳನ್ನು ಬಾಕಿಯಾಗಿಸಿಯಾಗಿದೆ ನಾನು ಹೋಗುತ್ತಿರುವುದು ನಾನು ಕಂಡ ಕನಸು ಖಂಡಿತ ಸಾಕ್ಷಾತ್ಕಾರವಾಗಿಯೇ ತೀರುತ್ತದೆ ಹಾಗಿದ್ದರೆ ಮಗನು ಇಡೀ ಮನುಷ್ಯ ಕುಲಕ್ಕತೀತವಾದ ಪ್ರವಾದಿಯಾಗಿರುವೆ ಎಂದು ಹೇಳುತ್ತಾ ಬಿಸಿ ಮುತ್ತೊಂದನ್ನು ನೀಡಿದರು, ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಿರಿ ಎಂದು ಹೇಳುತ್ತಾ ಸೇವಕಿ ಬರಕರ ಕೈಗೆ ಮಗನನ್ನು ನೀಡಿದರು.
ಅತೀ ಭಾಗ್ಯವಂತಳಾದ ಸೇವಕಿಯಾಗಿದ್ದರು ಬರಕರವರು, ಉಮ್ಮ ಐಮನ್ ಎಂದಾಗಿತ್ತು ಅವರನ್ನು ಕರೆಯಲ್ಪಡುವುದು, ಮುತ್ತು ಪ್ರವಾದಿಯವರ ﷺ ಪೋಷಣೆಯ ಜವಾಬ್ದಾರಿ ವಹಿಸಿಕೊಂಡ ಭಾಗ್ಯಶಾಲಿ, ಪ್ರವಾದಿವರ್ಯರ ಶೈಶವ, ಬಾಲ್ಯ, ಯವ್ವನ ಎಲ್ಲವನ್ನು ನೇರವಾಗಿ ಕಂಡ ಯುವತಿ, ಪ್ರಬೋಧನೆಯನ್ನೂ, ನಿರ್ಗಮನವನ್ನೂ (ಹಿಜ್’ರ) ನೇರವಾಗಿ ಕಂಡು ಅನುಭವಿಸಿದ ಯುವತಿ, ಆರಂಭದಲ್ಲಿಯೇ ವಿಶ್ವಾಸಿನಿಯಾಗಿದ್ದರು, ನಂತರದ ದಿನಗಳಲ್ಲಿ ಪ್ರವಾದಿವರ್ಯರ ﷺ ಮಕ್ಕಳನ್ನೂ, ಮೊಮ್ಮಕ್ಕಳನ್ನು ಕೂಡ ಅವರೇ ಆಗಿತ್ತು ಪೋಷಣೆ ಮಾಡಿದ್ದು ಕೂಡ.
ನಿರ್ಗಮನ (ಹಿಜ್’ರ) ಸಂದರ್ಭದಲ್ಲಿ ಯುವತಿಗೆ ಲಭಿಸಿದ ಅನುಗ್ರಹದ ಕುರಿತು ಹದೀಸ್’ಗಳಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ ಮದೀನಕ್ಕೆ ತೆರಳುತ್ತಿದ್ದ ಯಾತ್ರೆಯಲ್ಲಿ ಯುವತಿಯು ಗುಂಪಿನಿಂದ ಬೇರ್ಪಟ್ಟು ಒಬ್ಬಂಟಿಯಾದಾಗ ಕುಡಿಯಲು ಒಂದು ತೊಟ್ಟು ನೀರಿಲ್ಲದೆ ಮರುಭೂಮಿಯಲ್ಲಿ ಕಂಗಳಾಗಿದ್ದರು, ಅಚಾನಕ್ಕಾಗಿ ಅದೋ ಆಕಾಶದಿಂದ ಒಂದು ನೀರಿನ ಬಕೆಟ್ ಅವರ ಹತ್ತಿರಕ್ಕೆ ಬಂದಿತು ಅದರಿಂದ ದಾಹ ತೀರಿಸಲು ನೀರನ್ನು ಕುಡಿದರು ನಂತರದ ಜೀವನದಲ್ಲಿ ಒಮ್ಮೆಯೂ ಕೂಡ ಅವರಿಗೆ ಬಾಯಾರಿಕೆ ಆಗಲೇ ಇಲ್ಲ ಎಂದು.
ಪ್ರವಾದಿವರ್ಯರಿಂದ ﷺ ನೇರವಾಗಿ ಸ್ವರ್ಗ ಪ್ರವೇಶದ ಸಂತೋಷ ವಾರ್ತೆ ಲಭಿಸಿದ್ದ ಯುವತಿಯವರು ಮುತ್ತು ಪ್ರವಾದಿವರ್ಯರ ﷺ ಸೇವಕರಾಗಿದ್ದ ಝೈದ್’ರವರ (ರಲಿಯಲ್ಲಾಹ್) ಪತ್ನಿಯಾಗಿದ್ದರು, ಅದೇ ರೀತಿ ಪ್ರವಾದಿಯವರ ﷺ ಆತ್ಮೀಯರಾದ ಉಸಾಮರವರ ತಾಯಿಯೂ ಕೂಡ, ಹೀಗೆ ಹಲವಾರು ವಿಶೇಷತೆಯನ್ನು ಹೊಂದಿರುವ ಯುವತಿಯಾಗಿರುವರು.
ತಾಯಿ ಆಮೀನ ಬೀವಿಯವರನ್ನು ದುಃಖದ ಹೃದಯದೊಂದಿಗೆ, ಹರಿಯುವ ಕಂಬನಿಯೊಂದಿಗೆ (ರಲಿಯಲ್ಲಾಹ್) ಅಬವಾಅ್ ಎನ್ನುವ ಸ್ಥಳದಲ್ಲಿಯೇ ಸಮಾಧಿ ಮಾಡಲಾಯಿತು.
ಆರನೇ ವಯಸ್ಸಿನಲ್ಲಿ ಅನುಭವಿಸಿದ ಆ ವಿರಹದ ವೇದನೆಯು ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿತು ಅರುವತ್ತು ವಯಸ್ಸು ದಾಟಿದರೂ ತಮ್ಮ ಅನುಯಾಯಿಗಳೊಂದಿಗೆ ಆ ಸ್ಥಳಕ್ಕೆ ಭೇಟಿ ನೀಡಿದಾಗಲೂ ಕೂಡ ನೋವಿನ ಕಟ್ಟೆ ಹೊಡೆದು ಕಂಬನಿ ಹರಿಯುತ್ತಲೇ ಇತ್ತು.
ಸೇವಕಿ ಬರಕ ಹಾಗೂ ಮುಹಮ್ಮದ್ ﷺ ಮಗನು ಮಕ್ಕ ಪಟ್ಣಣಕ್ಕೆ ಯಾತ್ರೆ ಮುಂದುವರಿಸಿದರು, ಇದರ ನಡುವೆ ತಾತ ಅಬ್ದುಲ್ ಮುತ್ತಲಿಬರಿಗೂ ವಿಷಯ ತಿಳಿಯಿತು ಪ್ರೀತಿಯ ಮೊಮ್ಮಗನಿಗಾಗಿ ಕಾದು ಕುಳಿತು ಬಹಳ ಪ್ರೀತಿಯಿಂದಲೇ ಮೊಮ್ಮಗನ್ನು ಸ್ವೀಕರಿಸಿದರು.
ತಂದೆ ತಾಯಿ ಇಲ್ಲದ ನೋವು ಯಾವತ್ತೂ ಬರಬಾರದು ಎನ್ನುವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ತೀರ್ಮಾನಿಸಿ ಎಲ್ಲಾ ಸಮಯದಲ್ಲೂ ಜೊತೆಯಲ್ಲಿಯೇ ಇರ ತೊಡಗಿದರು, ಪ್ರತಿ ಕ್ಷಣವೂ ಕೂಡ ಮೊಮ್ಮಗನಲ್ಲಿ ಕಾಣುತ್ತಿದ್ದ ಅದ್ಭುತ ವಿಸ್ಮಯಗಳನ್ನು ಗುರುತಿಸುತ್ತಿದ್ದರು, ಇದರ ಕುರಿತು ಇತರರಲ್ಲಿ ಚರ್ಚಿಸುತ್ತಾ ಅದರ ಬಗ್ಗೆ ಬಹಳಷ್ಟು ಗರ್ವ ಪಡುತ್ತಿದ್ದರು, ಜೊತೆಯಲ್ಲಿಯೇ ಆಗಿತ್ತು ಆಹಾರ ಸೇವನೆಯೂ ಕೂಡ. ತಮ್ಮ ಮಕ್ಕಳು, ಇತರ ಮೊಮ್ಮಕ್ಕಳು ಯಾರಿದ್ದರೂ ಕೂಡ ಮುಹಮ್ಮದ್ ﷺ ಮಗನು ಬರುವವರೆಗೂ ಸಮಾಧಾನವಾಗುತ್ತಿರಲಿಲ್ಲ, ನಡು ನಡುವೆ ಉಮ್ಮು ಐಮನ್ ಅವರನ್ನು ಕರೆದು ಈ ರೀತಿ ಹೇಳುತ್ತಿದ್ದರು “ಉಮ್ಮು ಐಮನ್ ನನ್ನ ಮುದ್ದು ಮಗನನ್ನು ನೀವು ಗಮನಿಸುತ್ತಿದ್ದೀರಿ ಅಲ್ಲವೇ.!
ಇತರ ಮಕ್ಕಳೊಂದಿಗೆ ಸಿದ್’ರ ಮರದ ಬಳಿ ನಾನು ಕಂಡೆನು” ಒಟ್ಟಾರೆ ಹೇಳುದಾದರೆ ತಾತ ಅಬ್ದುಲ್ ಮುತ್ತಲಿಬರು ಮೊಮ್ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಬಹಳ ಕಾಳಜಿಯಿಂದಲೇ ನೋಡುತ್ತಿರುವಾಗ ಪ್ರವಾದಿಯವರು ಕೂಡ ಆ ಪ್ರೀತಿಯನ್ನು ಚೆನ್ನಾಗಿಯೇ ಅನುಭವಿಸಿದರು ಹೀಗೆ ದಿವಸಗಳು ಕಳೆದು ಹೋಯಿತು….
(ಮುಂದುವರಿಯುತ್ತದೆ..)
Part-6/365
ಭಾಗ – 06
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಬ್ದುಲ್ ಮುತ್ತಲಿಬರು ಮಕ್ಕ ಪಟ್ಟಣದ ಪ್ರಮುಖ ನಾಯಕರಿಗೂ ನಾಯಕರಾಗಿದ್ದರು, ಇವರನ್ನು ಭೇಟಿಯಾಗಲು ವಿದೇಶದಿಂದಲೂ ಜನರು ಬರುತ್ತಿದ್ದರು, ಆ ಗುಂಪಿನಲ್ಲಿ ಪುರೋಹಿತರು, ವೇದಜ್ಞಾನಿಗಳು ಇರುತ್ತಿದ್ದರು.
ಅವರು ಬಹಳ ಪ್ರೀತಿಯಿಂದ ಕಾಳಜಿ ವಹಿಸುತ್ತಿದ್ದ ಮೊಮ್ಮಗನ್ನು ಕಂಡಾಗ ಭವಿಷ್ಯದಲ್ಲಿ ಬರಲಿರುವ ಅಂತ್ಯ ಪ್ರವಾದಿ(ﷺ)ರವರ ಕುರಿತು ವಿವರಿಸತೊಡಗಿದರು, ಅಷ್ಟೇ ಅಲ್ಲದೆ ಮುಹಮ್ಮದ್ ﷺ ಮಗನಲ್ಲಿ ಕಾಣುವ ಲಕ್ಷಣಗಳನ್ನು ಕೂಡ ವಿವರಿಸುತ್ತಿದ್ದರು, ಆ ಸಂದರ್ಭಗಳಲ್ಲಿ ತಾತ ಅಬ್ದುಲ್ ಮುತ್ತಲಿಬರು ತಮ್ಮ ಮೊಮ್ಮಗನ ಕುರಿತು ಬಹಳ ಹೆಮ್ಮೆ ಪಡುತ್ತಿದ್ದರು.
ಒಮ್ಮೆ ನಜ್’ರಾನ್’ನಿಂದ ವೇದಗಾರರ ಒಂದು ಗುಂಪು ಬಂದಿತ್ತು ಜೊತೆಯಲ್ಲಿ ಪುರೋಹಿತರು ಕೂಡ ಇದ್ದರು.
ಮಕ್ಕ ಪಟ್ಟಣದ ನಾಯಕನ ಜೊತೆಯಲ್ಲಿ ಬಹಳಷ್ಟು ಮಾತು ಕಥೆ ನಡೆಸಿದರು ಪ್ರತ್ಯೇಕವಾಗಿ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ﷺ ಕುರಿತು ಕೂಡ ಪ್ರಸ್ತಾಪಿಸಿದರು, ಇಸ್ಮಾಯಿಲ್ ಪ್ರವಾದಿಯವರ (ಅಲೈಹಿ ಸಲಾಂ) ಪರಂಪರೆಯಲ್ಲಿ ಆಗಿದೆ ಅವರ ಜನನ, ವೇದಗಳಲ್ಲಿ ಉಲ್ಲೇಖಿಸಿದ ಹಾಗೆ ಅವರ ನಿಯೋಗದ ಸಮಯ ಹತ್ತಿರವಾಗಿದೆ ಹೀಗೆ ಮಾತು ಕಥೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಮುಹಮ್ಮದ್ ﷺ ಮಗನು ಅವರ ಮುಂದೆ ಹಾದು ಹೋದಾಗ ಸ್ವಾಭಾವಿಕವಾಗಿ ಪುರೋಹಿತರ ಶ್ರದ್ಧೆ ಮಗನ ಮೇಲೆ ಬಿದ್ದಿತು, ಅವರು ಬಹಳ ಗಂಭೀರವಾಗಿಯೇ ವೀಕ್ಷಿಸ ತೊಡಗಿದರು, ಕಣ್ಣು, ಕೈ, ಕಾಲು ಭುಜ ಹೀಗೆ ಸಂಪೂರ್ಣವಾಗಿ ಆಳವಾದ ಪರಿಶೋಧನೆಯ ನಂತರ ಅವರು ಉಚ್ಛ ಸ್ವರದೊಂದಿಗೆ ಕೂಗಿ ಹೇಳಿದರು “ಇವರಾಗಿದ್ದಾರೆ ಆ ವ್ಯೆಕ್ತಿ” ನಂತರ ಮಾತು ಮುಂದುವರೆಸಿ ನೀವು ಈ ಮಗುವಿಗೆ ನೀವು ಏನಾಗಬೇಕು.?
ಎಂದು ಕೇಳಿದರು. ಇದು ನನ್ನ ಮಗನಾಗಿರುವನು ಎಂದು ಅಬ್ದುಲ್ ಮುತ್ತಲಿಬರು ಉತ್ತರಿಸಿದಾಗ ನೀವು ಈ ಮಗುವಿನ ತಂದೆಯೇ.? ಹಾಗೆ ಆಗಲು ಸಾಧ್ಯವೇ ಇಲ್ಲ ಎಂದು ಪುರೋಹಿತರು ಹೇಳಿದರು ಇದು ನನ್ನ ಮಗನ ಮಗುವಾಗಿದೆ ಎಂದು ಮತ್ತೊಮ್ಮೆ ವ್ಯೆಕ್ತಪಡಿಸಿದಾಗ ಹೌದು ಅದು ಆಗಿರಬಹುದು ಎಂದು ಅವರು ಪ್ರತಿಕ್ರಿಯೆ ನೀಡಿದರು, ಅಷ್ಟೇ ಅಲ್ಲದೆ ಈ ಮಗನನ್ನು ಬಹಳ ಶ್ರದ್ಧೆಯಿಂದಲೇ ನೋಡಿಕೊಳ್ಳಬೇಕು ಎಂದು ಕೂಡ ಅವರು ಉಪದೇಶ ನೀಡಿದರು. ಅಬ್ದುಲ್ ಮುತ್ತಲಿಬರು ತಮ್ಮ ಎಲ್ಲಾ ಮಕ್ಕಳನ್ನು ಕರೆದು ಪುರೋಹಿತರು ಹೇಳಿದ ಸಂಪೂರ್ಣ ವಿಷಯಗಳನ್ನು ವಿವರಿಸಿ ನೀವು “ಈ ಮುದ್ದು ಮಗನ ಕಡೆಗೆ ಬಹಳಷ್ಟು ಗಮನ ಹರಿಸಬೇಕು, ಎಲ್ಲಾ ಸಮಯದಲ್ಲಿಯೂ ಕೂಡ ಬಹಳಷ್ಟು ಶ್ರದೆ ವಹಿಸಬೇಕು” ಎಂದು ಹೇಳಿದರು.
ಮತ್ತೊಂದು ದಿವಸ ಮುಹಮ್ಮದ್ ﷺ ಮಗನು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಮಯದಲ್ಲಿ ಬನೂ ಮುದ್’ಲಜ್ ಜನಾಂಗದ ಕೆಲವು ಜ್ಞಾನಿಗಳು ಮುಹಮ್ಮದ್ ﷺ ಮಗನನ್ನು ನಿರೀಕ್ಷಿಸುತ್ತಿದ್ದರು, ಸ್ವಲ್ಪ ಸಮಯದ ನಂತರ ಮಗನನ್ನು ಅವರು ಹತ್ತಿರಕ್ಕೆ ಕರೆದು ಕಾಲ್ಪಾದಗಳನ್ನು ಇತರ ಗುರುತುಗಳನ್ನು ಪರೀಕ್ಷಿಸಿದ ನಂತರ ಈ ಮಗನ ಕಡೆಗೆ ನೀವು ಬಹಳಷ್ಟು ಗಮನ ಹರಿಸಿಕೊಂಡೇ ಇರಬೇಕು, ಪ್ರವಾದಿ ಇಬ್ರಾಹಿಂ (ಅಲೈಹಿ ಸಲಾಂ) ರವರ ಪಾದಗಳಿಗೆ ಅತೀ ಹೆಚ್ಚು ಸಾಮೀಪ್ಯ ಇರುವ ಹಾಗೆ ಕಾಣುತ್ತಿದೆ ಎಂದು ತಾತ ಅಬ್ದುಲ್ ಮುತ್ತಲಿಬರಲ್ಲಿ ಹೇಳಿದರು.
ಈ ರೀತಿಯಾದ ಹಲವಾರು ಭವಿಷ್ಯವಾಣಿಗಳಿಗೆ ತಾತ ಅಬ್ದುಲ್ ಮುತ್ತಲಿಬರು ಸಾಕ್ಷಿಯಾದರು, ಖುರೈಶಿ ನಾಯಕರಿಗೆ ಯಮನಿನ ರಾಜನಿಂದ ಔತಣಕೂಟವನ್ನು ಏರ್ಪಡಿಸಲಾಗಿತ್ತು, ಔತಣಕೂಟದ ನಂತರ ರಾಜನು ಅಬ್ದುಲ್ ಮುತ್ತಲಿಬರನ್ನು ಭೇಟಿಯಾಗಲು ತಮ್ಮ ಕೋಣೆಗೆ ಕರೆಸಿಕೊಂಡರು.
ತಾವು ಕಾಯುತ್ತಿದ್ದ ಪ್ರವಾದಿಯವರ ﷺ ಪಿತಮಹರಾಗಿದ್ದಾರೆ ಎನ್ನುವ ನಿಟ್ಟಿನಲ್ಲಿ ಬಹಳ ಗೌರವದಿಂದಲೇ ಅವರನ್ನು ಕಾಣಲಾಯಿತು. ಸೈಫ್ ಬಿನ್ ಝೀಯಸನ್ ಎಂದಾಗಿತ್ತು ಆ ರಾಜನ ಹೆಸರು.
ಮೊಮ್ಮಗನ ಅತ್ಯನ್ನತ ಸ್ಥಾನದ ಕುರಿತು ತಾತ ಅಬ್ದುಲ್ ಮುತ್ತಲಿಬರಿಗೆ ಸಂಪೂರ್ಣವಾಗಿ ಅರ್ಥವಾಯಿತು, ಪ್ರೀತಿ, ಮಮತೆ, ವಾತ್ಸಲ್ಯ ಮನ ತುಂಬಿ ನೀಡತೊಡಗಿದರು. ಹೀಗಿರುವಾಗ ಮಕ್ಕ ಪಟ್ಟಣದಲ್ಲಿ ಬರಗಾಲ ಆರಂಭವಾಯಿತು, ಮಕ್ಕಾ ನಿವಾಸಿಗಳು ಈ ಬರಗಾಲದಿಂದ ಬಹಳಷ್ಟು ತತ್ತರಿಸಿ ಹೋಗಿದ್ದರು, ಅವರು ಮಳೆಗಾಗಿ ಬಹಳಷ್ಟು ಪ್ರಾರ್ಥನೆ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ, ಇದರ ನಡುವೆ ರುಖೈವ ಎನ್ನುವ ಯುವತಿಗೆ ಒಂದು ಕನಸು ಬಿತ್ತು ಅಂತ್ಯ ಪ್ರವಾದಿಯವರು ಮಕ್ಕಾದಲ್ಲಿ ಜನಿಸಿದ್ದಾರೆ ಎನ್ನುತ್ತಾ ಪ್ರವಾದಿಯವರ ﷺ ಹಾಗೂ ಅವರ ಸಂರಕ್ಷಕರ ವಿಶೇಷತೆಗಳನ್ನು ಆ ಕನಸಿನಲ್ಲಿಯೇ ವಿವರಿಸಲಾಗಿತ್ತು.
ಅವರೊಂದಿಗೆ ಸೇರಿ ಪ್ರಾರ್ಥಿಸಿರಿ ಎಂದು ಹೇಳುತ್ತಾ ಪ್ರಾರ್ಥನೆಯ ರೀತಿ ನೀತಿ ಎಲ್ಲವನ್ನೂ ಕೂಡ ಕನಸಿನಲ್ಲಿಯೇ ತೋರಿಸಿ ಕೊಡಲಾಗಿತ್ತು.
ಬೆಳ್ಳಗಿನಜಾವ ರುಖೈವ ಭಯ ಬೀತಾರಾಗಿ ಎಚ್ಚರವಾದರು, ಕೊನೆಗೆ ಅವರು ಕಂಡ ಕನಸನ್ನು ಎಲ್ಲರಿಗೂ ತಿಳಿಸಲಾಯಿತು…
(ಮುಂದುವರಿಯುತ್ತದೆ…)
Part-7/365
ಭಾಗ – 07
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಕವಯಿತ್ರಿಯೂ ಕೂಡ ಆಗಿದ್ದ ರುಖೈಖರವರು ಆದಷ್ಟೂ ಬೇಗ ಸ್ನಾನ ಮುಗಿಸಿ ಕಅಬಾದ ಪ್ರದಕ್ಷಿಣೆಯನ್ನು ಪೂರ್ತಿ ಗೊಳಿಸಿದರು, ಅಷ್ಟೊತ್ತಿಗೆ ಅಬ್ದುಲ್ ಮುತ್ತಲಿಬ್, ಅವರ ಮಕ್ಕಳು ಹಾಗೂ ಮಕ್ಕಾದ ಇತರ ಪ್ರಮುಖ ನೇತಾರರು ಅಲ್ಲಿಗೆ ತಲುಪಿದರು, ಕನಸಿನಲ್ಲಿ ತಿಳಿಸಲ್ಪಟ್ಟ ನೇತಾರ ಅಬ್ದುಲ್ ಮುತ್ತಲಿಬ್ ಆಗಿರುವರೆಂದು ಎಲ್ಲರಿಗೂ ಅರ್ಥವಾಯಿತು, ನಂತರ ಎಲ್ಲರೂ ಒಂದು ಸಂಘವಾಗಿ ಅಬೂ ಖುಬೈಸ್ ಬೆಟ್ಟದ ಮೇಲೆ ಹತ್ತಿದರು.
ಬೆಟ್ಟದ ಮೇಲೆ ತಲುಪಿದ ನಂತರ ತಾತ ಅಬ್ದುಲ್ ಮುತ್ತಲಿಬರು ತಮ್ಮ ಏಳು ವಯಸ್ಸು ಪ್ರಾಯವಿರುವ ಮುಹಮ್ಮದ್ ﷺ ಮಗನನ್ನು ಕರೆದು ಮಡಿಲಿನಲ್ಲಿ ಕೂರಿಸಿ (ಅಥವಾ ಪವಿತ್ರ ವ್ಯೆಕ್ತಿಯನ್ನು ಮುಂದೆ ನಿಲ್ಲಿಸಿ) ಪ್ರಾರ್ಥನೆ ಆರಂಭಿಸಿದರು. ಓ ಅಲ್ಲಾಹನೇ ನಾವು ನಿನ್ನ ದಾಸರಾಗಿದ್ದೇವೆ, ನಿನ್ನ ದಾಸರ ಮಕ್ಕಳಾದ ನಾವು ಈಗ ಸಂಕಷ್ಟದಲ್ಲಿ ಸಿಲುಕಿದ್ದೇವೆ, ಬಹಳ ದಿನಗಳಿಂದ ನಾವು ಬರಗಾಲ ಅನುಭವಿಸುತ್ತಿದ್ದೇವೆ. ಅಲ್ಲಾಹನೇ… ಪರಿಮಿತಿಗಳನ್ನು ಪರಿಹರಿಸುವವನೇ… ಸಂಕಷ್ಟಗಳನ್ನು ನಿವಾರಿಸುವವನೇ..
ನಿನ್ನ ಪವಿತ್ರ ಕಅಬಾದ ಪರಿಸರದಲ್ಲಿ ನಾವು ಬರಗಾಲದಲ್ಲಿ ಸಿಲುಕಿದ್ದೇವೆ, ನಾವು ನಿನ್ನಲ್ಲಿ ದೂರು ಸಲ್ಲಿಸುತ್ತಿದ್ದೇವೆ ಒಡೆಯಾ… ನಮಗೆ ಮಳೆ ನೀಡಿ ಅನುಗ್ರಹಿಸು… ಸುಖ ಸಮೃದ್ಧಿಯನ್ನು ಒದಗಿಸುವ ಮಳೆ… ಎಲ್ಲರಿಗೂ ಹಿತವನ್ನು ಬಯಸುವ ಅನುಗ್ರಹವಾದ ಮಳೆ…
ರುಖೈಖ ಮುಂದುವರೆಸಿದರು.. ಅಬ್ದುಲ್ ಮುತ್ತಲಿಬರ ಪ್ರಾರ್ಥನೆ ಮುಗಿದದ್ದೇ ತಡ ಅನುಗ್ರಹಿತವಾದ ವರ್ಷಧಾರೆಯಾಗಳು ಆರಂಭಿಸಿತು, ಕಣಿವೆಗಳು ತುಂಬಿಕೊಂಡವು, ಎಲ್ಲರೂ ಬಹಳಷ್ಟು ಆನಂದಿಸಿದರು, ಮಕ್ಕಾ ನಿವಾಸಿಗಳು ಒಗ್ಗಟ್ಟಾಗಿ ಅಬ್ದುಲ್ ಮುತ್ತಲಿಬರಿಗೆ ಧನ್ಯವಾದ ಸಲ್ಲಿಸಿದರು.
ಅವರು ಮಾಡಿದ ಒಳಿತನ್ನು ಬಹಳಷ್ಟು ಪ್ರಶಂಸಿಸಿದರು. ಈ ಘಟನೆಯನ್ನು ಸ್ಮರಿಸಿ ರುಖೈಖ ಒಂದು ಕವಿತಾ ಹೇಳಲು ಆರಂಭಿಸಿದರು. ಶೈಬತುಲ್ ಹಂದ್ (ಅಬ್ದುಲ್ ಮುತ್ತಲಿಬರ ಹೆಸರು) ಮೂಲಕ ಅಲ್ಲಾಹು ನಮಗೆ ಮಳೆಯನ್ನು ನೀಡಿದನು, ಬಹಳ ಸಮಯದ ನಂತರ ಒಂದು ಅನುಗ್ರಹ ವರ್ಷಧಾರೆ, ವನ್ಯಜೀವಿಗಳೂ, ಸಸ್ಯವರ್ಗಗಳೂ ಮೊಳಕೆಯೊಡೆತ್ತಲಿದೆ, ಬತ್ತಿ ಹೋದ ಕಣಿವೆಗಳು ಹಚ್ಚ ಹಸಿರಾಗುತ್ತಿದೆ, ವೈಭವಗಳು ಕೂಡಲೆಂದು ಅಲ್ಲಾಹನು ನೀಡಿದ ಮಳೆಯಾಗಿದೆ.
“ಮುಳರ್ ಜನಾಂಗದಿಂದ ಉದಯಿಸಲಿರುವ ಸನ್ಮಾರ್ಗ ಬೋಧಕನ (ದೇವ ದೂತರು) ನಿಮಿತ್ತವಾಗಿ ಲಭಿಸಿದ ಮಳೆಯಾಗಿದೆ, ಆ ಪುಣ್ಯ ವ್ಯಕ್ತಿಯ ಕಾರಣದಿಂದಾಗಿದೆ ಇಂದು ಪ್ರಾರ್ಥನೆ ಸ್ವೀಕರಿಸಲ್ಪಟ್ಟದ್ದು. ಮನುಷ್ಯ ಕುಲದಲ್ಲೇ ಅತ್ಯುತ್ತಮ ವ್ಯೆಕ್ತಿತ್ವವಾಗಿದ್ದಾರೆ”
ಹೀಗೆ ಒಂದೊಂದು ಘಟನೆಗಳೂ ಮುಹಮ್ಮದ್ ﷺ ಮಗನ ಅಸಾಧಾರಣ ವ್ಯೆಕ್ತಿತ್ವವನ್ನು ಗುರುತಿಸುತ್ತಲೇ ಇತ್ತು, ಇದರ ನಡುವೆ ಮುತ್ತು ಪ್ರವಾದಿಯವರ ﷺ ಒಂದು ಕಣ್ಣಿಗೆ ರೋಗ ಬಾಧಿಸಿತು ಪಿತಾಮಹಾನರು ಹಲವಾರು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಕೊನೆಗೆ ಉಕ್ಕಾಲ್ ಮಾರುಕಟ್ಟೆಯಲ್ಲಿ ಒಬ್ಬರು ವೈದ್ಯರ ಕುರಿತು ಮಾಹಿತಿ ಲಭಿಸಿತು ಅವರೊಬ್ಬ ವೇಧ ಪಂಡಿತರು ಕೂಡ ಆಗಿದ್ದರು.
ತಾತ ಅಬ್ದುಲ್ ಮುತ್ತಲಿಬರು ಮೊಮ್ಮಗನ್ನು ವೈದ್ಯರ ಬಳಿ ಕೊಂಡೊದರು. ಅವರು ಪರಿಶೀಲಿಸಿದ ನಂತರ ಈ ರೀತಿ ಹೇಳಿದರು ಇದೊಂದು ಸಾಧಾರಣ ಮಗುವಲ್ಲ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯಾಗಿದ್ದಾರೆ ﷺ ವೇದ ಪಂಡಿತರು ಈ ಮಗುವನ್ನು ಹಿಂಬಾಲಿಸುವರು, ಯಾವಾಗಲೂ ಬಹಳ ಶ್ರದ್ಧೆಯಿಂದಲೇ ಇರಬೇಕು ಎಂದು ಹೇಳಿ ಚಿಕಿತ್ಸೆಯನ್ನು ನೀಡಿದ ನಂತರ ಇಬ್ಬರೂ ಅಲ್ಲಿಂದ ಯಾತ್ರೆಯಾದರು.
ಈಗ ಮುತ್ತು ಪ್ರವಾದಿಯವರಿಗೆ ﷺ ಎಂಟು ವರ್ಷ ಪ್ರಾಯ ಕಳೆಯಿತು, ವಯ್ಯಸ್ಸಾಗಿದ್ದ ಕಾರಣ ತಾತ ಅಬ್ದುಲ್ ಮುತ್ತಲಿಬರಿಗೆ ದಣಿವಾಗತೊಡಗಿತು….
(ಮುಂದುವರಿಯುತ್ತದೆ..)
Part-8/365
ಭಾಗ – 08
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಬ್ದುಲ್ ಮುತ್ತಲಿಬರಿಗೆ ಈಗ 120 ವಯಸ್ಸು ಪ್ರಾಯವಾಯಿತು, (ಚರಿತ್ರೆಯಲ್ಲಿ 82,95,140,144 ಎನ್ನುವ ಅಭಿಪ್ರಾಯಗಳೂ ಇವೆ) ನಾನು ಈ ಲೋಕದಿಂದ ಯಾತ್ರೆಯಾಗುವ ಸಮಯ ಹತ್ತಿರವಾಯಿತೆಂದು ಅವರಿಗೆಯೇ ಅನಿಸತೊಡಗಿತು.
ಆ ಸಂದರ್ಭದಲ್ಲಿ ಅವರ ಮನದಲ್ಲಿ ನನ್ನ ವಿಯೋಗದ ನಂತರ ಹಾಡಲಿರುವ ವಿರಹ ಕಾವ್ಯವನ್ನು ಕೇಳಬೇಕೆಂಬ ಅತ್ಯಾಗ್ರಹ ಉಂಟಾಯಿತು. ಸಾಮಾನ್ಯವಾಗಿ ಮರಣ ಹೊಂದಿದ ನಂತರ ಅವರ ಒಳ್ಳೆತನವನ್ನು ಎತ್ತಿ ಹಿಡಿದು ಹಾಡುವ ಕಾವ್ಯಕ್ಕೆ ಅಲ್ಲವೇ ವಿರಹ ಕಾವ್ಯವೆಂದು ಹೇಳುವುದು. ಅವರು ತಮ್ಮ ಕವಯಿತ್ರಿಗಳಾದ ಆರು ಹೆಣ್ಣು ಮಕ್ಕಳನ್ನು ಕರೆದರು, ಸ್ವಫೀಯ, ಬರ್’ರ, ಆತ್ವಿಕ, ಉಮ್ಮು ಹಕೀಮ್, ಉಮೈಮ, ಅರ್’ವ ಎನ್ನುವುದಾಗಿದೆ ಅವರ ಹೆಸರುಗಳು.
ತಮ್ಮ ಮನದ ಆಗ್ರಹವನ್ನು ಮಕ್ಕಳಲ್ಲಿ ವ್ಯಕ್ತಪಡಿಸಿದರು, ಹಿರಿಯ ಮಗಳಾದ ಸ್ವಫೀಯರವರ ದೀರ್ಫಾವಾದ ಕಾವ್ಯವು ಅವರನ್ನು ಬಹಳಷ್ಟು ಸಂತೋಷಗೊಳಿಸಿತು, ಮರಣದ ಮುಂಚೆ ವಿರಹಕಾವ್ಯ ಕೇಳಿದ ವ್ಯಕ್ತಿ ಎನ್ನುವ ವಾರ್ತೆಯೂ ಹರಡಿತು. ಹೀಗೆ ಮಹಾಮನಿಷಿ ಅಬ್ದುಲ್ ಮುತ್ತಲಿಬರು ಇಹಲೋಕ ತ್ಯಜಿಸಿದರು.
ಪ್ರೀತಿಯ ತಾತ ಅಬ್ದುಲ್ ಮುತ್ತಲಿಬರ ವಿಯೋಗವೂ ಎಂಟು ವರ್ಷ ಪ್ರಾಯವಿರುವ ಮುಹಮ್ಮದ್ ﷺ ಮಗನ ಮನಸ್ಸನ್ನು ಆಳವಾಗಿ ಘಾಸಿಗೊಳಿಸಿತು. ತಂದೆಯನ್ನು ಒಂದು ಬಾರಿಯೂ ಕಾಣದ ಮಗನಿಗೆ ತಂದೆಯೂ, ತಾತವೂ ಕೂಡ ಅವರೇ ಆಗಿದ್ದರು.
ತಾಯಿಯ ವಿಯೋಗದ ನಂತರ ಎಲ್ಲವೂ ತಾತ ಮಾತ್ರವಾಗಿದ್ದರು. ಅನಾಥನೆಂಬ ನೋವು ಮತ್ತೊಂದು ಬಾರಿಯೂ ಕೂಡ ಪ್ರವಾದಿಯವರಿಗೆ ﷺ ಸಹಿಸಬೇಕಾಯಿತು, ಅವರ ಕಣ್ಣುಗಳು ತೇವಗೊಂಡಿದ್ದವು. ಸಾಕು ತಾಯಿಯಾದ ಉಮ್ಮು ಐಮನ್ ಆ ಸಂದರ್ಭವನ್ನು ಈ ರೀತಿ ವಿವರಿಸುತ್ತಾರೆ, ಅಬ್ದುಲ್ ಮುತ್ತಲಿಬರು ಮರಣ ಹೊಂದಿದಾಗ ಪ್ರವಾದಿಯವರಿಗೆ ﷺ ಎಂಟು ವಯಸ್ಸು ಪ್ರಾಯವಾಗಿತ್ತು, ಪಿತಾಮಹಾನರ ಪಾರ್ಥಿವ ಶರೀರವನ್ನು ಮಲಗಿಸಿದ ಮಂಚದ ಹಿಂದೆ ನಿಂತು ಬಹಳ ದುಃಖದಿಂದ ಅಳುತ್ತಿರುದನ್ನು ನಾನು ಕಂಡೆನು.
ವಿರಹ ವೇದನೆಯನ್ನು ಸಹಿಸೂದನ್ನು ಕಲಿತು, ಇನ್ನೊಬ್ಬರಿಗೆ ಕಲಿಸುವ ಸಂದರ್ಭವಾಗಿತ್ತು ಅದು.
ಅಬ್ದುಲ್ ಮುತ್ತಲಿಬರು ಕೂಡ ತಮ್ಮ ಮೊಮ್ಮಗನ ಕುರಿತು ಬಹಳಷ್ಟು ಚಿಂತಿತರಾಗುತ್ತಿದ್ದರು ಹಾಗಾಗಿ ಮಕ್ಕಳಲ್ಲಿ ಪ್ರತ್ಯೇಕವಾಗಿ ಕೆಲವು ವಿಷಯಗಳನ್ನು ಹೇಳಿದ್ದರು, ಪುಣ್ಯ ಪ್ರವಾದಿಯವರ ﷺ ಜವಾಬ್ದಾರಿಯನ್ನು ಅಬೂತ್ವಾಲಿಬರಿಗೆ ವಹಿಸಿಕೊಡಲಾಯಿತು. ಅವರು ತಂದೆ ಅಬ್ದುಲ್ಲಾಹ್’ರವರ ಸ್ವಂತ ಸಹೋದರನಾಗಿದ್ದರು. ಈ ವಿಷಯದಲ್ಲಿ ಒಂದು ಅಭಿಪ್ರಾಯ ಈ ರೀತಿಯೂ ಇದೆ ಅದೇನೆಂದರೆ ಅಬ್ದುಲ್ ಮುತ್ತಲಿಬರ ನಂತರ ಮುಹಮ್ಮದ್ ﷺ ಮಗನ ಸಂರಕ್ಷಣೆಯನ್ನು ಝುಬೈರ್ ಆಗ್ರಹಿಸಿದ್ದರು ಸಹೋದರನಾದ ಅಬೂತ್ವಾಲಿಬರೊಂದಿಗೆ ಸ್ಪರ್ಧೆ ನಡೆಯಿತು ಕೊನೆಗೆ ಚೀಟಿ ಹಾಕಲು ತೀರ್ಮಾನಿಸಿದರು, ಚೀಟಿಯಲ್ಲಿ ಅಬೂತ್ವಾಲಿಬರ ಹೆಸರು ಬಂದಿತು.
ಪುಣ್ಯ ಪ್ರವಾದಿಯವರಿಗೂ ﷺ ಕೂಡ ಅಬೂತ್ವಾಲಿಬರ ಜೊತೆಯಲ್ಲಿ ಹೋಗುವುದೇ ಇಷ್ಟವಾಗಿತ್ತು. ಹಾಗಿದ್ದರೂ ಝುಬೈರ್ ಪ್ರವಾದಿವರ್ಯರನ್ನು ﷺ ಬಹಳಷ್ಟು ಕಾಳಜಿ ವಹಿಸುತ್ತಿದ್ದರು ಪ್ರವಾದಿಯವರ ﷺ 14 ನೇ ವಯಸ್ಸಿನಲ್ಲಿ ಅವರೂ ಕೂಡ ಇಹಲೋಕ ತ್ಯಜಿಸಿದರು. ನಂತರ ಮುಹಮ್ಮದ್ ﷺ ಮಗನ ಸಂಪೂರ್ಣ ಜವಾಬ್ದಾರಿ ಅಬೂತ್ವಾಲಿಬರಿಗೆ ಸೇರಿತು.
ಕ್ರಿ. ಶ 579 ರಲ್ಲಾಗಿತ್ತು ಅಬ್ದುಲ್ ಮುತ್ತಲಿಬರು ಮರಣ ಹೊಂದಿದ್ದು ಮಕ್ಕ ಪಟ್ಟಣದ ಅಲ್ ಹಜೂನ್ ಪ್ರಾಂತ್ಯದಲ್ಲಿ ಮುತ್ತಾತ ಖುಸಯ್ಯ್ ಅವರ ಪಕ್ಕದಲ್ಲೇ ತಾತ ಅಬ್ದುಲ್ ಮುತ್ತಲಿಬರನ್ನು ಕೂಡ ಸಮಾಧಿ ಮಾಡಲಾಯಿತು.
ತಂದೆಯ ಹಾಗೆ ಅಬೂತ್ವಾಲಿಬರಿಗೂ ಮಕ್ಕಾದ ನಾಯಕತ್ವ ಲಭಿಸಿತಾದರೂ ಅವರ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ, ಅತೀ ಹೆಚ್ಚು ಸದಸ್ಯರಿರುವ ತಮ್ಮ ಕುಟುಂಬದ ಖರ್ಚುಗಳನ್ನೇ ನಿಭಾಯಿಸಲು ಬಹಳ ಕಷ್ಟಪಡುತ್ತಿದ್ದರು.
ಆದರೆ ಪುಣ್ಯ ಪ್ರವಾದಿಯವರ ﷺ ಆಗಮನವು ಅವರಿಗೊಂದು ಆಶ್ವಾಸನೆಯಾಯಿತು ಪ್ರವಾದಿಯವರು ﷺ ಜೊತೆಯಲ್ಲಿರುವಾಗ ಸ್ವಲ್ಪ ಆಹಾರವೂ ಕೂಡ ಎಲ್ಲರ ಹಸಿವನ್ನು ನೀಗಿಸುತ್ತಿತ್ತು. ಪ್ರೀತಿಯ ಮುದ್ದು ಮಗನು ಬರುವವರೆಗೂ ಅಬೂ ತ್ವಾಲಿಬರು ಕಾಯಲು ಹೇಳುತ್ತಿದ್ದರು, ಹಾಲು ಕುಡಿಯುವಾಗಲು ಅಷ್ಟೇ ಮೊದಲು ಪ್ರವಾದಿಯವರಿಂದಲೇ ﷺ ಆರಂಭ, ನಂತರವೇ ಮಕ್ಕಳಿಗೆ ನೀಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಮುದ್ದು ಮಗನ ಕಾರಣದಿಂದ ಲಭಿಸಿದ ಅನುಗ್ರಹವನ್ನು ಹೇಳುತ್ತಾ ಪ್ರಶಂಸಿಸುತಿದ್ದರು.
ಮುದ್ದು ಮಗುವಿನ ಪ್ರತೀ ಚಲನೆ ವಲನೆಗಳನ್ನೂ ವೀಕ್ಷಿಸುತ್ತಾ ಯಾವುದೇ ಕಾರಣಕ್ಕೂ ತಬ್ಬಲಿತನದ ನೋವು ಕಾಡಬಾರದೆಂದು ಜೊತೆಯಲ್ಲಿಯೇ ಇರಿಸುತ್ತಿದ್ದರು.
ಏನೇ ಆದರೂ ಬಹುಶಃ ಅನಾಥನೆಂಬೂದು ದುರದೃಷ್ಟವಲ್ಲವೇ ಎನ್ನುವ ಸಂಶಯ ಬರಲೂಬಹುದು…
(ಮುಂದುವರಿಯುತ್ತದೆ…)
Part-9/365
ಭಾಗ – 09
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಬಹಳಷ್ಟು ಜನರು ತಬ್ಬಲಿತನವನ್ನು ಒಂದು ದುರಾದೃಷ್ಟವಾಗಿ ಕಾಣುವರು, ಬಹಳಷ್ಟು ಬಾರಿ ಅನಾಥರಿಗೆ ಕೆಲವೊಂದು ಅವಶ್ಯಕ ವಸ್ತುಗಳು ಲಭಿಸದೆ ಹೋಗುತ್ತದೆ ಪ್ರತ್ಯೇಕವಾಗಿ ಸರಿಯಾದ ಶಿಕ್ಷಣವೂ ಕೂಡ ಲಭಿಸಬೇಕೆಂದಿಲ್ಲ.
ಆದರೆ ಇದು ಯಾವುದೂ ಕೂಡ ಪುಣ್ಯ ಪ್ರವಾದಿಯವರಿಗೆ ﷺ ಅನ್ವಯವಾಗಲಿಲ್ಲ ಅಷ್ಟೇ ಅಲ್ಲ ಪುಣ್ಯ ಪ್ರವಾದಿಯವರ ﷺ ತಬ್ಬಲಿತನವು ಕೆಲವು ರಹಸ್ಯಗಳೊನ್ನಳಗೊಂಡಿತ್ತು. ಈ ವಿಷಯದಲ್ಲಿ ಆಳವಾಗಿ ಅಧ್ಯಯನ ನಡೆಸಿದವರು ಅದರ ಕುರಿತು ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಪ್ರವಾದಿ ಕುಟುಂಬ ಪರಂಪರೆಯಲ್ಲಿ ಬರುವ ಅತ್ಯುತ್ತಮ ಇಮಾಮಾರಾಗಿದ್ದ ಜಅ್’ಫರ್ ಸ್ವಾದಿಕ್’ರವರು (ರ) ಈ ರೀತಿಯಾಗಿ ವಿವರಿಸುತ್ತಾರೆ ಪ್ರವಾದಿವರ್ಯರು ﷺ ತಬ್ಬಲಿಯಾಗಿ ಬೆಳೆಯಲಿರುವ ಕಾರಣ ಯಾರೊಂದಿಗೂ ಯಾವುದೇ ಬಾಧ್ಯತೆಯಿಲ್ಲದ ರೀತಿಯಲ್ಲಿ ಬೆಳೆಯುವ ಉದ್ದೇಶದಿಂದಾಗಿತ್ತು.
ಯಾಕೆಂದರೆ ತಂದೆ ತಾಯಿಯರೊಂದಿಗಿನ ಬಾಧ್ಯತೆಗಳನ್ನು ಯಾವುದೇ ಪ್ರತ್ಯುಪಕಾರದಿಂದ ಮುಗಿಸಲು ಸಾಧ್ಯವಿಲ್ಲ ಅಲ್ಲವೇ.?
ಮತ್ತೊಂದು ವಿವರಣೆಯ ಪ್ರಕಾರ ಪ್ರವಾದಿವರ್ಯರ ﷺ ಸಂಪೂರ್ಣ ಮಹತ್ವವು ನೇರವಾಗಿ ಅಲ್ಲಾಹನಿಂದಲೇ ಲಭಿಸಿದ್ದಾಗಿದೆ ಎಂದು ತಿಳಿಸಬೇಕಿತ್ತು. ಅಲ್ಲಾಹನಾಗಿರುವನು ಪ್ರವಾದಿಯವರಿಗೆ ಶಿಕ್ಷಣ ನೀಡಿದ್ದು, ಅದು ಅತ್ಯುತ್ತಮ ಶಿಕ್ಷಣವಾಗಿತ್ತೆಂದು ಪುಣ್ಯ ಪ್ರವಾದಿಯವರೇ ತಿಳಿಸಿದ್ದೂ ಗ್ರಂಥಗಳಲ್ಲಿ ಕಾಣಬಹುದು.
ಅಲ್ಲಾಹನು ಒಬ್ಬರಿಗೆ ಮಹತ್ವ ನೀಡಿದರೆ ಯಾರೂ ಬೇಕಾದರೂ ಉನ್ನತ ಸ್ಥಾನಕ್ಕೆ ತಲುಪುವರು, ಅದಕ್ಕೆ ತಬ್ಬಲಿತನವು ಅಡಚಣೆಯೇ ಅಲ್ಲ.
ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಿದ ವ್ಯಕ್ತಿಗೆ ಬಡವರ ನೋವನ್ನು ಅತೀ ವೇಗವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಭವಿಷ್ಯದಲ್ಲಿ ಬರುವ ಎಲ್ಲಾ ಅನಾಥರಿಗೂ ನನ್ನ ಪ್ರವಾದಿ ﷺ ಶ್ರೇಷ್ಠರು ಅನಾಥರಾಗಿದ್ದರಲ್ಲವೇ ಎನ್ನುವ ಮಾತು ಸಮಾಧಾನ ಪಡಿಸಲು ಕಾರಣವಾಗುತ್ತದೆ. ಪ್ರವಾದಿವರ್ಯರ ﷺ ಎಲ್ಲಾ ಸಾಮರ್ಥ್ಯವೂ ಸೃಷ್ಟಿಕರ್ತನಿಂದ ಲಭಿಸಿದ್ದಾಗಿದೆ ಅಲ್ಲದೆ ಯಾರಿಂದಲೂ ಸಿಕ್ಕಿದ್ದಲ್ಲ ಹೀಗೆ ಹಲವಾರು ರಹಸ್ಯಗಳು ಆ ತಬ್ಬಲಿತನದಲ್ಲಿ ಅಡಗಿರುತ್ತದೆ.
ಜಗದೊಡೆಯನು ಎಲ್ಲಾ ರೀತಿಯಲ್ಲೂ ಅವನ ಮುತ್ತು ಹಬೀಬರನ್ನು ﷺ ಖುದ್ದಾಗಿ ಅವನ ನಿರೀಕ್ಷಣೆಯಲ್ಲಿಯೇ ಬೆಳೆಸಲು ತೀರ್ಮಾನಿಸಿದನು. ಅದೊಂದು ಪದವಿ, ಭಾಗ್ಯ ಆಗಿತ್ತೋ ವಿನಃ ಪರಿಮಿತಿಯೋ, ಕಾಳಜಿಯೋ ಆಗಿರಲಿಲ್ಲ. ಈ ವಿಚಾರವು ಖುರ್’ಆನಿನ ತೊಂಬತ್ತಮೂರನೆಯ ಅಧ್ಯಾಯದಲ್ಲಿ ಕಾಣಬಹುದು.
ಪುಣ್ಯ ಪ್ರವಾದಿಯವರು ﷺ ಅಬೂತ್ವಾಲಿಬರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿರುವಾಗ ಪ್ರವಾದಿವರ್ಯರ ﷺ ಲವಲವಿಕೆಯು ಬಹಳಷ್ಟು ಗಮನಾರ್ಹವಾಗಿತ್ತು.
ಆ ಕಾಲದ ಜೀವನ ಅನುಭವಗಳಲ್ಲಿ ಈ ರೀತಿಯ ಒಂದು ಉಲ್ಲೇಖವಿತ್ತು. ಅದೇನೆಂದರೆ ಮುಂಜಾನೆ ಗಾಢ ನಿದ್ರೆಯಿಂದ ಎದ್ದೇಳುವಾಗ ಆಲಸ್ಯ, ಉದಾಸೀನತೆಯಿಂದಾಗಿತ್ತು ಎದ್ದೇಳುತ್ತಿದ್ದದ್ದು ಆದರೆ ಪ್ರವಾದಿಯವರಲ್ಲಿ ಅಂತಹ ಒಂದು ಆಲಸ್ಯವೋ, ಉದಾಸೀನತೆಯೋ ಕಾಣುತ್ತಿರಲಿಲ್ಲ. ಎಲ್ಲಾ ಸಮಯದಲ್ಲೂ ಅವರಲ್ಲಿ ಶುಚಿತ್ವವು ಹಾಗೇ ಇರುತ್ತಿತ್ತು ತಲೆ ಕೂದಲು ಯಾವಾಗಲೂ ಎಣ್ಣೆ ಸವರಿದ ರೀತಿಯಲ್ಲಿ ಬಹಳ ಅಚ್ಚುಕಟ್ಟಾಗಿ ಕಾಣುತಿತ್ತು. ನಿದ್ರೆಯಲ್ಲೂ, ಎಚ್ಚರದಲ್ಲೂ ಜೊತೆಯಲ್ಲಿಯೇ ಇರುತ್ತಿದ್ದ ಅಬೂತ್ವಾಲಿಬರು ತಮಗಾದ ಅನುಭವವನ್ನು ಈ ರೀತಿಯಾಗಿ ವಿವರಿಸುತ್ತಾರೆ.
ಬಾಲ್ಯದಲ್ಲಿ ಮುಹಮ್ಮದ್ ﷺ ಮಗನು ನಮ್ಮ ಜೊತೆ ಬೆಳೆಯುತ್ತಿದ್ದ ಸಂದರ್ಭದಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿಯೇ ಇರುತ್ತಿದ್ದರು. ಒಂದು ದಿನ ರಾತ್ರಿ ನಿದ್ರೆ ಮಾಡಲು ಹೋಗುತ್ತಿರುವಾಗ ಮುದ್ದು ಮಗನೇ ಕತ್ತಲಿರುವ ರಾತ್ರಿಯಲ್ಲವೇ ಹಾಗಾಗಿ ವಸ್ತ್ರ ತೆಗೆದಿಟ್ಟು ನಿದ್ರೆ ಮಾಡಬಹುದಲ್ಲವೇ.? ಎಂದು ಹೇಳಿದೆನು (ಜನರು ವಿವಸ್ತ್ರವಾಗಿ ಕಅಬಾದ ಪ್ರದಕ್ಷಿಣೆ ಹಾಕುತ್ತಿದ್ದ ಕಾಲವಾಗಿತ್ತು ಅದು) ಆ ಸಮಯದಲ್ಲಿ ಮಗನ ಮುಖದಲ್ಲಿ ಸಂಕೋಚದ ಭಾವನೆ ಎದ್ದು ಕಾಣುತ್ತಿತ್ತು.
ಯಾಕೆಂದರೆ ನನ್ನನ್ನು ಅನುಸರಿಸಲೂ ಬೇಕು ಅದೇ ರೀತಿ ಅದನ್ನು ನಿರಾಕರಿಸಲು ಆಗುದಿಲ್ಲ ಅಲ್ಲವೇ ಹಾಗಾಗಿ ನನ್ನಲ್ಲಿ ಈ ರೀತಿ ಹೇಳಿದರು, ನೀವು ನನ್ನ ಕಡೆ ನೋಡದೆ ಬೇರೆ ಕಡೆ ನೋಡಿರಿ ಯಾಕೆಂದರೆ ನನ್ನ ನಗ್ನತೆ ಯಾರೂ ನೋಡುವುದು ನನಗೆ ಇಷ್ಟವಿಲ್ಲ ನಾನು ತಿರುಗಿದ ನಂತರ ಬಟ್ಟೆ ಬದಲಾಯಿಸಿ ಹಾಸಿಗೆಯಲ್ಲಿ ಬಂದು ಮಲಗಿದರು. ನನಗೆ ಅರ್ಧ ರಾತ್ರಿ ನಿದ್ರೆಯಿಂದ ಎಚ್ಚರವಾಗಿ ಮಗನನ್ನು ಒಮ್ಮೆ ನೋಡಿದಾಗ ಒಮ್ಮೆಲೇ ಆಶ್ಚರ್ಯವಾಯಿತು ಈ ಹಿಂದೆ ಯಾವತ್ತೂ ಕಾಣದ ಉನ್ನತವಾದ ವಸ್ತ್ರಗಳನ್ನು ಧರಿಸಿದ ರೀತಿಯಲ್ಲಾಗಿತ್ತು ಮಗನು ನಿದ್ರಿಸುತ್ತಿದ್ದದ್ದು.
ಅತ್ಯುತ್ತಮವಾದ ಕಸ್ತೂರಿಯ ಪರಿಮಳವೂ ಕೋಣೆಯಲ್ಲಿ ತುಂಬಿ ತುಳುಕುತ್ತಿತ್ತು.
ಅಷ್ಟೇ ಅಲ್ಲ ಹಲವಾರು ರಾತ್ರಿಗಳಲ್ಲಿ ಇದೆ ರೀತಿ ಅರ್ಧ ರಾತ್ರಿಯಲ್ಲಿ ಎಚ್ಚರವಾಗಿ ಮಗನನ್ನು ನೋಡುವಾಗ ಕೋಣೆಯಲ್ಲಿ ಮಗನನ್ನು ಕಾಣುತ್ತಿರಲಿಲ್ಲ ನಾನು ಬಹಳಷ್ಟು ಚಿಂತೆಯಿಂದ ಮಗನೇ ಎಂದು ಕೂಗುವಾಗ ತಕ್ಷಣ ಪ್ರತ್ಯಕ್ಷವಾಗಿ ನಾನು ಇಲ್ಲಿಯೇ ಇದ್ದೇನೆ ಎಂದು ಉತ್ತರಿಸುತಿದ್ದರು, ಕೆಲವು ರಾತ್ರಿಗಳಲ್ಲಿ ನನಗೆ ಪರಿಚಯವೇ ಇಲ್ಲದ ಭಾಷೆಗಳಲ್ಲಿ ಸಂಭಾಷಣೆ ಕೇಳಿಸುತ್ತಿತ್ತು, ಆಹಾರ ಸೇವಿಸುವ ಮುಂಚೆ “ಬಿಸ್ಮಿಲ್ಲಾಹ್” ಎಂದು ಹೇಳುತಿದ್ದರು ಸೇವಿಸಿದ ನಂತರ “ಅಲ್ ಹಂದುಲಿಲ್ಲಾಹ್” ಎಂದು ಹೇಳುತಿದ್ದರು ಹೀಗೆ ನಮಗೆ ಪರಿಚಯವೇ ಇಲ್ಲದ ಒಂದು ಅಭ್ಯಾಸವೂ ರೂಢಿಗೊಳಿಸಿದ್ದರು.
ಬಾಲ್ಯದಲ್ಲೇ ಮುಹಮ್ಮದ್ ಮಗನಲ್ಲಿ ಕಂಡ ಅದ್ಭುತ ವಿಸ್ಮಯಗಳನ್ನು ಅಬೂತ್ವಾಲಿಬರು ಗುರುತಿಸ ತೊಡಗಿದರು.
ಅವರಿಗೆ ಇದೊಂದು ಅಸಾಧಾರಣ ವ್ಯೆಕ್ತಿಯಾಗಿರುವರೆಂಬ ಅರಿವಿತ್ತು.
ಕೆಲವು ಬಿಕ್ಕಟ್ಟಿನ ಸಂದರ್ಭದಲ್ಲಿ ಮುಹಮ್ಮದ್ ﷺ ಮಗನ ಕಾರಣದಿಂದ ಪರಿಹಾರ ಲಭಿಸಿದ್ದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುತ್ತದೆ..)
Part-10/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 10
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪುಣ್ಯ ಪ್ರವಾದಿಯವರ ﷺ ವಿಶೇಷತೆಗಳನ್ನು ಚೆನ್ನಾಗಿ ಅರಿತಿದ್ದ ವ್ಯಕ್ತಿಯಾಗಿದ್ದರಲ್ಲವೇ ಅಬೂತ್ವಾಲಿಬ್.
ಸಂಕಷ್ಟದ ಸಂದರ್ಭದಲ್ಲಿ ಅದು ನಮಗೆ ಅನುಗ್ರಹವಾಗಬಹುದು ಎಂದು ಅವರಿಗೆ ಅರ್ಥವಾಯಿತು. ಜಲ್’ಹಮತು ಬಿನ್ ಅರ್’ಫತ್ವ ಎನ್ನುವವರು ಕಠಿಣವಾದ ಬರಗಾಲದ ಸಂದರ್ಭದಲ್ಲಿ ಮಕ್ಕ ಪಟ್ಟಣಕ್ಕೆ ತೆರಳಿದ್ದಾಗ ಅಲ್ಲಿ ಖುರೈಶಿಗಳು ಅಬೂತ್ವಾಲಿಬರಲ್ಲಿ ವಿನಂತಿಸೂದನ್ನು ಈ ರೀತಿ ವಿವರಿಸುತ್ತಾರೆ. ಅಬೂತ್ವಾಲಿಬ್’ರವರೇ ಕಣಿವೆಗಳು ಬತ್ತಿ ಹೋಗಿದೆ, ನಮ್ಮ ಕುಟುಂಬವೂ ಹಸಿವಿನಿಂದ ನರಳುತ್ತಿದೆ, ತಾವೊಮ್ಮೆ ಮುಂದೆ ನಿಂತು ಮಳೆಗಾಗಿ ಪ್ರಾರ್ಥಿಸಿದರೆ ಬಹಳ ಉತ್ತಮವಾಗಿತ್ತು ಎಂದು.
ಅಬೂತ್ವಾಲಿಬರು ಪ್ರಾರ್ಥಿಸಲು ತಯಾರಾದರು ಅವರ ಜೊತೆಯಲ್ಲಿ ಬಹಳ ಸುಂದರನಾದ ಒಬ್ಬ ಬಾಲಕನಿದ್ದರು , ಕಗ್ಗತ್ತಲು ತುಂಬಿದ ವಾತಾವರಣದಲ್ಲಿ ಬಾನಿನ ಅಂದವನ್ನು ಹೆಚ್ಚಿಸುವ ಪೂರ್ಣ ಚಂದಿರನ ಹಾಗೆ ಆ ಮಗನ ಮುಖವು ಹೊಳೆಯುತ್ತಿತ್ತು. ಯಾರನ್ನೂ ಆಕರ್ಷಿಸುವ ನೋಟವಾಗಿತ್ತು ಅದು. ಅವರ ಜೊತೆಯಲ್ಲಿ ಸುತ್ತಲೂ ಯುವಕರಿದ್ದರು.
ಅಬೂತ್ವಾಲಿಬ್ ಆ ಮಗನನ್ನು ತನ್ನ ಭುಜದಲ್ಲಿ ಕುಳ್ಳಿರಿಸಿ ಕಅಬಾದ ಸಮೀಪ ತಲುಪಿದರು, ಕಅಬಾದ ಗೋಡೆಗೆ ಮಗನನ್ನು ತಾಗಿಸುವ ಹಾಗೆ ಮಗನನ್ನು ಎತ್ತಿ ಹಿಡಿದರು.
ಆ ಸಂದರ್ಭದಲ್ಲಿ ಬಾನಿನಲ್ಲಿ ಸ್ವಲ್ಪವೂ ಕೂಡ ಮೋಡವಿರಲಿಲ್ಲ ಆದರೆ ಏನದ್ಭುತ ನಿಮಿಷಗಳೊಳಗೆ ಎಲ್ಲಾ ಕಡೆಗಳಲ್ಲೂ ಕಾರ್ಮೋಡ ಕವಿಯಿತು. ಅನುಗ್ರಹಿತವಾದ ವರ್ಷಧಾರೆಯಾಯಿತು ಮಕ್ಕಾ ಜನತೆಯು ಸಂತೋಷದಿಂದ ಕುಣಿದರು, ಕಣಿವೆಗಳು ತುಂಬಿ ತುಳುಕತೊಡಗಿತು. ಈ ಘಟನೆಯನ್ನು ಸ್ಮರಿಸಿ ನಂತರದ ದಿನಗಳಲ್ಲಿ ಅಬೂತ್ವಾಲಿಬರು ಸುಂದರವಾದ ಕವಿತೆ ಹೇಳಿದ್ದರು ಅದನ್ನು ಕೇಳುವುದು ಕೂಡ ಪ್ರವಾದಿಯವರಿಗೆ ﷺ ತುಂಬಾ ಇಷ್ಟವಾಗಿತ್ತು.
ಹದಿನೆಂಟು ವರ್ಷದ ನಂತರ ಮದೀನದಲ್ಲಿ ಬರಗಾಲ ಉಂಟಾಗಿತ್ತು ಆ ಸಂದರ್ಭದಲ್ಲಿ ಪ್ರವಾದಿವರ್ಯರು ﷺ ಮಳೆಗಾಗಿ ಪ್ರಾರ್ಥಿಸಿದ್ದರು ತಕ್ಷಣವೇ ಬಂದ ಅನುಗ್ರಹಿತ ವರ್ಷಧಾರೆಯಿಂದ ಮದೀನ ಜನತೆಯೂ ಸಂತೋಷದಿಂದ ಆಹ್ಲಾದಿಸಿದರು.
ಆ ಸಂತೋಷದ ನಡುವಿನಲ್ಲೂ ಪುಣ್ಯ ಪ್ರವಾದಿಯವರು ﷺ ಕಂಬನಿ ವರೆಸುತ್ತಾ ಅಬೂತ್ವಾಲಿಬರು ಈ ಸಂದರ್ಭದಲ್ಲಿ ಬದುಕಿರುತಿದ್ದರೆ ಬಹಳಷ್ಟು ಸಂತೋಷ ಪಡುತ್ತಿದ್ದರು ಎಂದು ಹೇಳಿತ್ತಾ ಜೊತೆಯಲ್ಲಿದ್ದ ಗುಂಪಿನೊಂದಿಗೆ ಅಬೂತ್ವಾಲಿಬರು ಹಾಡಿದ್ದ ಆ ಕವಿತೆ ಯಾರಿಗಾದರೂ ನೆನಪಿದೆಯಾ? ಎಂದು ಕೇಳಿದರು. ಆ ಸ್ಥಳದಲ್ಲಿ ಅಬೂತ್ವಾಲಿಬರ ಮಗನಾದ ಅಲಿಯವರು (ರ) ಉಪಸ್ಥಿತರಿದ್ದರು ತಕ್ಷಣವೇ ಆ ಕವಿತೆಯನ್ನು ಅವರು ಹಾಡಿದಾಗ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಯಿತು.
ಅಬೂತ್ವಾಲಿಬರಿಗೆ ಉಂಟಾದ ಜೀವನ ಅನುಭವಗಳು ಅಲ್ಲಿಗೆ ಕೊನೆಯಾಗಿರಲಿಲ್ಲ ಅಬೂತ್ವಾಲೀಬರಿಂದ ಅಂರ್ ಬಿನ್ ಸಈದ್ ಎನ್ನುವವರು ಈ ರೀತಿ ವಿವರಿಸುತ್ತಾರೆ.
ನಾನು ಸಹೋದರನ ಮಗನಾದ ಮುಹಮ್ಮದ್ ﷺ ಮಗನೊಂದಿಗೆ ದುಲ್ ಮಜಾಲಿಸ್ ಎನ್ನುವ ಸ್ಥಳದಲ್ಲಿದ್ದೆ ನನಗೆ ತೀವ್ರವಾದ ಹಸಿವು, ದಾಹವುಂಟಾಯಿತು. ಮಗನೇ ಬಹಳಷ್ಟು ಬಾಯಾರಿಕೆ ಆಗುತ್ತಿದೆ ಅಲ್ಲವೇ ಎಂದು ಮಗನಲ್ಲಿ ಕೇಳಿದಾಗ, ಅಪ್ಪ ನಿಮಗೆ ಬಹಳಷ್ಟು ಬಾಯಾರಿಕೆಯಾಗುತ್ತಿದೆ ಅಲ್ಲವೇ ಎಂದು ತಿರುಗಿ ನನ್ನಲ್ಲಿಯೇ ಕೇಳಿದರು ಹೌದು ಮಗನೇ ಎಂದು ಪುನಃ ಉತ್ತರಿಸಿದೆನು. ತಕ್ಷಣವೇ ಮುಹಮ್ಮದ್ ﷺ ಮಗನು ಪಕ್ಕದಲ್ಲೇ ಇದ್ದ ಬಂಡೆಯ ಮೇಲೆ ಸಣ್ಣದಾಗಿ ಒಮ್ಮೆ ಹೆಜ್ಜೆಯಿಟ್ಟರು ಏನದ್ಭುತ ಶುದ್ಧವಾದ ಹೊಳೆಯುವ ನೀರು ಬಂಡೆಯಿಂದ ಹರಿಯತೊಡಗಿತು.
ನನ್ನ ದಾಹ ತೀರುವವರೆಗೂ ಕುಡಿದ ನಂತರ ಮುಹಮ್ಮದ್ ಮಗನು ಅಪ್ಪ ನಿಮ್ಮ ಬಾಯಾರಿಕೆ ಮುಗಿಯಿತೇ.? ಎಂದು ಪುನಃ ಕೇಳಿದಾಗ ಹೌದು ಮುಗಿಯಿತು ಎಂದು ಉತ್ತರಿಸಿದನು. ಆ ಸಂದರ್ಭದಲ್ಲಿ ಮಗನು ಅದೇ ಬಂಡೆಯ ಮೇಲೆ ಮತ್ತೊಮ್ಮೆ ಹೆಜ್ಜೆ ಇಟ್ಟಾಗ ಆ ಬಂಡೆಯು ಹಿಂದಿನ ಅದೇ ಅವಸ್ಥೆಗೆ ಬದಲಾಯಿತು. ನೀರು ಹರಿಯುವುದು ಕೂಡ ಸಂಪೂರ್ಣವಾಗಿ ನಿಂತಿತು. ಈ ಘಟನೆಯನ್ನು ಇಮಾಮ್ ಇಬ್’ನು ಸಅದ್’ರವರು (ರ) ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
ಜನ ಸಾಮಾನ್ಯರ ಮುಂದೆ ಮುಹಮ್ಮದ್ ﷺ ಮಗನ ವಿಸ್ಮಯಗಳು ಕಾಣತೊಡಗಿದ ನಂತರ ಅಬೂತ್ವಾಲಿಬರು ಮಗನ ಕುರಿತು ಬಹಳಷ್ಟು ಜಾಗರೂಕರಾಗಿದ್ದರು.
ವೇದ ಪಂಡಿತರ, ಜೋತಿಷ್ಯರ ವಂಚನೆಯಲ್ಲಿ ಬೀಳದೆ ಬಹಳಷ್ಟು ಕಾಳಜಿ ವಹಿಸತೊಡಗಿದರು. ಒಂದು ದಿನ ಅಸದ್ ಶನುಅ ಜನಾಂಗದ ತಜ್ಞ ಜ್ಯೋತಿಷಿಯೊಬ್ಬರು ಮಕ್ಕಾ ಪಟ್ಟಣಕ್ಕೆ ಬಂದಿದ್ದರು ಮುಖ ಲಕ್ಷಣಗಳನ್ನು ನೋಡಿ ಹೇಳುತ್ತಿದ್ದ ವಿಷಯಗಳಲ್ಲಿ ಕೆಲವೊಂದು ನಿಜವಾಗುತ್ತಿತ್ತು. ಲಹಬ್ ಬಿನ್ ಅಹ್’ಜನ್ ಎಂದಾಗಿತ್ತು ಅವರ ಹೆಸರು. ಮೂಢನಂಬಿಕೆಗಳಲ್ಲಿ ಅಧಿಕ ವಿಶ್ವಾಸವಿರಿಸುತ್ತಿದ್ದ ಅವತ್ತಿನ ಮಕ್ಕಾ ನಿವಾಸಿಗಳು ತಮ್ಮ ಮಕ್ಕಳನ್ನು ಅವರ ಬಳಿ ಕರೆದುಕೊಂಡು ಹೋಗುತ್ತಿದ್ದರು.
ಅವರು ಅಬೂತ್ವಾಲಿಬರನ್ನು ಕಂಡ ತಕ್ಷಣವೇ ಅವರ ಜೊತೆಯಲ್ಲಿದ್ದ ಮುಹಮ್ಮದ್ ﷺ ಮಗನನ್ನು ನೋಡತೊಡಗಿದರು ಆ ನೋಟವನ್ನು ಕಂಡ ಅಬೂತ್ವಾಲಿಬರಿಗೆ ಯಾಕೋ ಕಸಿವಿಸಿಯಾಯಿತು ತಕ್ಷಣ ಅಬೂತ್ವಾಲಿಬರು ಅವರ ಗಮನವನ್ನು ಬೇರೆ ಕಡೆ ಬದಲಾಯಿಸಿ ಅದರ ನಡುವೆ ಮಗನನ್ನು ಅಲ್ಲಿಂದ ಅಡಗಿಸಿದರು. ನಂತರ ಲಹಬ್ ಆ ಮಗುವೆಲ್ಲಿ? ನಾನೀಗ ಕಂಡ ಆ ಮಗುವನ್ನು ಮತ್ತೊಮ್ಮೆ ಕಾಣಲೇನು! ಆ ಮಗುವಿಗೆ ಉಜ್ವಲ ಭವಿಷ್ಯವಿದೆ ಎಂದು ಬಹಳಷ್ಟು ಬಾರಿ ಹೇಳುತ್ತಲೇ ಇದ್ದರು.
ಜವಾಬ್ದಾರಿಯಿರುವ ಪೋಷಕರು ಹಾಗೆ ಸಂಪೂರ್ಣ ಕಾಳಜಿಯೊಂದಿಗೆ ನೆರಳಿನ ಹಾಗೆ ಅಬೂತ್ವಾಲಿಬರು ಯಾವಾಗಲೂ ಜೊತೆಯಲ್ಲಿಯೇ ಇರುತ್ತಿದ್ದರು.
ಸುದೀರ್ಘವಾದ ಯಾತ್ರೆಯಾದರೂ ಕೂಡ ಜೊತೆಗೆ ಕೊಂಡೊಗುತಿದ್ದರು. ಅಂತಹ ಸಂದರ್ಭಗಳಲ್ಲೂ ವಿಸ್ಮಯಕಾರಿ ಅದ್ಭುತ ಅನುಭವಗಳನ್ನು ಅವರು ಕಾಣುತಿದ್ದರು.
(ಮುಂದುವರೆಯುವುದು…)
Part-11/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 11
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮುದ್ದು ಮಗನನ್ನೂ, ಮಕ್ಕಾ ಪಟ್ಟಣವನ್ನೂ ಬಿಟ್ಟು ಹೋಗಲು ಅಬೂತ್ವಾಲೀಬರಿಗೆ ಒಂದಿಷ್ಟು ಇಷ್ಟವಿರಲಿಲ್ಲ ಆದರೆ ಕುಟುಂಬದ ಸಂಕಷ್ಟದ ಕಾರಣ ವ್ಯಾಪಾರಕ್ಕೆ ತೆರಳದೆ ಬೇರೆ ದಾರಿಯೂ ಇಲ್ಲ.
ಮಕ್ಕ ನಿವಾಸಿಗಳ ಮೂಲ ಕಸುಬು ವ್ಯಾಪಾರವಾಗಿತ್ತು ಅದೂ ಕೂಡ ನಿರ್ದಿಷ್ಟ ಕಾಲಾವಧಿಯ ವ್ಯಾಪಾರಗಳಾಗಿತ್ತು ಅವರ ಅವಶ್ಯಕತೆಗಳನ್ನು ಪೂರೈಕೆ ಮಾಡುತ್ತಿದ್ದದ್ದು.
ಸದ್ಯಕ್ಕೆ ಮಗನನ್ನು ಇನ್ನೊಬ್ಬರಿಗೆ ಜವಾಬ್ದಾರಿ ವಹಿಸಿ ಹೋಗೋಣ ಎಂದು ತೀರ್ಮಾನಿಸಿ ತಮ್ಮ ಯಾತ್ರೆಗಳಿಗೆ ಬೇಕಾದ ಸಂಪೂರ್ಣ ತಯಾರಿ ನಡೆಸಿದರು. ಆಗಲೇ ಮುಹಮ್ಮದ್ ﷺ ಮಗನ ಮುಖದ ಭಾವನೆ ಬದಲಾಗ ತೊಡಗಿತು. ಅಬೂತ್ವಾಲಿಬರ ಒಂಟೆಯ ಲಗಾಮು ಹಿಡಿದು ಅಪ್ಪ ನನ್ನನ್ನು ಒಬ್ಬನನ್ನು ಬಿಟ್ಟು ಹೋಗುತಿದ್ದೀರಾ.?
ತಂದೆ, ತಾಯಿ ಇಬ್ಬರೂ ಇಲ್ಲದ ನಾನು ಇಲ್ಲಿ ಒಬ್ಬಂಟಿಯಾಗುದಿಲ್ಲವೇ.? ನನ್ನನ್ನು ಕೂಡ ಜೊತೆಯಲ್ಲಿ ಕರೆದುಕೊಂಡು ಹೋಗಿರಿ. ಎಂದು ಅಳುವ ಮುಖದೊಂದಿಗೆ ಮುಹಮ್ಮದ್ ﷺ ಮಗನು ಕೇಳಿದಾಗ.
ತನ್ನನ್ನು ಬಿಟ್ಟಿರಲು ಮುಹಮ್ಮದ್ ﷺ ಮಗನಿಗೂ ಸಾಧ್ಯವೇ ಇಲ್ಲ ಎನ್ನುವ ಸತ್ಯ ಅಬೂತ್ವಾಲಿಬರಿಗೂ ಅರ್ಥವಾಯಿತು. ಮಗನ ಮೇಲೆ ಅನುಕಂಪ, ಪ್ರೀತಿ, ವಾತ್ಸಲ್ಯ ಉಕ್ಕಿ ಹರಿಯಿತು. ಮಗನನ್ನು ತಬ್ಬಿಕೊಂಡು ಮುದ್ದು ಮಗನೇ “ಅಲ್ಲಾಹನಾಣೆ ನಾನು ಖಂಡಿತ ನನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವೆನು ಮಗನನ್ನು ಬಿಟ್ಟಿರಲು ನನ್ನಿಂದಲೂ ಸಾಧ್ಯವಿಲ್ಲ ” ಎಂದು ಹೇಳಿದರು.
ನಾಲ್ಕು ವರ್ಷದ ಬೇರ್ಪಡಿಸಲಾಗದ ಅನುಬಂಧವಾಗಿತ್ತು ಅದು.
12 ವರ್ಷ ಪ್ರಾಯವಿರುವ ಮುಹಮ್ಮದ್ ﷺ ಮಗನೂ ಕೂಡ ತಮ್ಮ ದೊಡ್ಡಪ್ಪರೊಂದಿಗೆ ಯಾತ್ರೆಯಲ್ಲಿ ಸೇರಿದರು. ಶಾಮ್ (ಇವತ್ತಿನ ಸಿರಿಯಾ) ನಗರಕ್ಕೆ ಯಾತ್ರೆ ಮುಂದುವರಿಸಿದರು.
ಸಾಮಾನ್ಯವಾಗಿ ಯಾತ್ರೆಯ ಮದ್ಯೆ ವಿಶ್ರಾಂತಿ ಕೇಂದ್ರಗಳಲ್ಲಿ ವಿಶ್ರಾಂತಿ ಪಡೆದು ಯಾತ್ರೆ ಮುಂದುವರಿಸುವುದಾಗಿತ್ತು ವಾಡಿಕೆ. ಯಾತ್ರಾ ಸಂಘವು ಬುಸ್’ರ (ಇವತ್ತಿನ ಸಿರಿಯಾದ ಹೌರಾನ್) ಪಟ್ಟಣಕ್ಕೆ ತಲುಪಿತು, ಸಾಮಾನ್ಯವಾಗಿ ಯಾವಾಗಲೂ ಖುರೈಶಿಗಳ ವ್ಯಾಪಾರ ಸಂಘ ಡೇರೆ ಹಾಕುವ ಸ್ಥಳದಲ್ಲಿಯೇ ಈ ಬಾರಿಯೂ ಕೂಡ ಡೇರೆ ಹಾಕಿದರು.
ಅದರ ಪಕ್ಕದಲ್ಲೇ ಜರ್’ಜಿಸ್ ಎನ್ನುವ ಒಬ್ಬರು ವೇದ ಪಂಡಿತರ ಆಶ್ರಮವಿತ್ತು.
ಆ ಕಾಲದ ವೇದ ಜ್ಞಾನಿಗಳಲ್ಲಿ ಪ್ರಮುಖರಾಗಿದ್ದರು ಅವರು. ಆಧ್ಯಾತ್ಮಿಕ ಗುರುವಿನ ಪರಂಪರೆಯಲ್ಲಿ ಪ್ರವಾದಿ ಈಸರವರ (ಅಲೈಹಿಸಲಾಂ) ನಂತರ ಆರನೇ ವ್ಯಕ್ತಿಯಾಗಿದ್ದರು ಜರ್ಜಿಸ್. ಅವರ ಪರಂಪರೆಯು ಈ ರೀತಿಯಾಗಿದೆ. ಪ್ರವಾದಿ ಈಸ (ಅ) – ಪವಾದಿ ಯಹ್ಯಾ (ಅ) – ಪ್ರವಾದಿ ದಾನಿಯೆಲ್ (ಅ) – ಪಂಡಿತ ದಸೀಖ – ಪಂಡಿತ ನಸ್ವ್’ತುರಸ್ – ಅವರ ಮಗ ಮೌಈದ್ – ಜರ್ಜಿಸ್. ಎಂದು ಅಬ್ದುಲ್ಲಾಹ್ ಅಲ್ ಇಸ್ವ್’ಬಹಾನಿ ಉಲ್ಲೇಖಿಸಿದ್ದಾರೆ.
ಬಹೀರ ಎನ್ನುವ ಹೆಸರಿನಿಂದಾಗಿತ್ತು ಅವರನ್ನು ಕರೆಯುತ್ತಿದ್ದದ್ದು. ಬಹಳ ಆಳವಾದ ಜ್ಞಾನವಿರುವ ವೇದ ಪಂಡಿತ ಎಂದಾಗಿದೆ ಬಹೀರ ಎನ್ನುವ ಹೆಸರಿನ ಅರ್ಥ. ಇವರು ಯಹೂದಿಗಳೋ ಅಥವಾ ಕ್ರೈಸ್ತರೋ ಎನ್ನುವುದರಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ. ಮೊದಲು ಮೂಸ ಪ್ರವಾದಿಯವರ (ಅ) ದಾರಿಯಲ್ಲಿಯೂ ನಂತರ ಈಸ ಪ್ರವಾದಿಯವರ (ಅ) ದಾರಿಯಲ್ಲಿಯೂ ಎನ್ನುವ ಅಭಿಪ್ರಾಯಗಳೂ ಕೂಡ ಉಲ್ಲೇಖಿಸಲಾಗಿದೆ. ಏನೇ ಇರಲಿ ಜರ್ಜಿಸ್ ಖುರೈಶ್ ಯಾತ್ರೆ ಸಂಘವನ್ನು ನಿರೀಕ್ಷಿಸುತ್ತಿದ್ದರು ಅದರಲ್ಲಿ ಕೆಲವೊಂದು ವೈಶಿಷ್ಟ್ಯತೆಗಳು ಅವರ ಗಮನಕ್ಕೆ ಬಂದಿತು.
ಬಹೀರ ಆಲೋಚಿಸ ತೊಡಗಿದರು ಯಾರಿಗಾಗಿರಬಹುದು ಈ ಮೊಡವು ಇವರೊಂದಿಗೆ ಚಲಿಸುತ್ತಿರುವುದು, ಮೋಡ ನೆರಳು ನೀಡುತ್ತಿರುವ ಆ ವ್ಯಕ್ತಿಯನ್ನು ಹೇಗೆ ಭೇಟಿಯಾಗುವುದು, ಸಾಮಾನ್ಯವಾಗಿ ನಾನು ಹೊರಗೆ ಹೋಗುವುದೂ ಇಲ್ಲ, ಯಾತ್ರೆಯ ಗುಂಪುಗಳು ಕೂಡ ಬಹಳಷ್ಟು ಹೋಗುತ್ತಲೇ ಇರುತ್ತದೆ ನಾನು ಗಮನಿಸುವುದು ಇಲ್ಲ.
ಕೊನೆಗೆ ಒಂದು ಉಪಾಯ ಹೊಳೆಯಿತು ಒಂದು ಔತಣ ಆಯೋಜಿಸಿ ಅವರನ್ನು ಆಮಂತ್ರಿಸಿದರೆ ಹೇಗೆ.? ಯಾತ್ರಾ ಸಂಘವು ಕೂಡ ಅವರ ಆಮಂತ್ರಣ ಸ್ವೀಕರಿಸಿ ಔತಣಕ್ಕೆ ತಲುಪಿದರು ಎಲ್ಲರನ್ನೂ ಬಹಳ ಗೌರವದಿಂದಲೇ ಸ್ವೀಕರಿಸಲಾಯಿತು. ಬಂದ ಅತಿಥಿಗಳಿಗೂ ಬಹಳ ಸಂತೋಷವಾಗಿತ್ತು ಯಾಕೆಂದರೆ ಬುಸ್’ರ ಪಟ್ಟಣದ ಮಹಾ ಪಂಡಿತರಲ್ಲವೇ ಔತಣಕ್ಕೆ ಆಮಂತ್ರಿಸಿದ್ದು. ಬಹಳ ಗಾಂಭೀರ್ಯತೆ ತುಂಬಿರುವ ಪ್ರೌಢಿಯಾದ ಮುಖ, ಅವರ ಅತ್ಯುತ್ತಮ ನಡವಳಿಕೆ ಕಂಡು ಬಂದ ಅಥಿತಿಗಳಿಗೂ ಒಂದು ಕ್ಷಣ ಆಶ್ಚರ್ಯವಾಯಿತು.
ಆದರೆ ಬಹೀರರ ನೋಟ ಮಾತ್ರ ಏನನ್ನೋ ಹುಡುಕುತ್ತಿತ್ತು.
ಮೋಡ ನೆರಳು ನೀಡಿದ್ದ ಆ ಯಾತ್ರಿಕ ಎಲ್ಲಿ.? ಔತಣಕ್ಕೆ ಬಂದವರಲ್ಲಿ ಅವರನ್ನು ಕಾಣುತ್ತಿಲ್ಲವಲ್ಲ.? ಆ ಪಂಡಿತರು ಯಾತ್ರಾ ಗುಂಪಿನೊಂದಿಗೆ ಕೇಳಿಯೇ ಬಿಟ್ಟರು ನಾನು ನಿಮ್ಮ ಗುಂಪಿನಲ್ಲಿರುವ ಎಲ್ಲಾರನ್ನಾಗಿತ್ತು ಔತಣಕ್ಕೆ ಆಮಂತ್ರಿಸಿದ್ದು, ಯಾರೊಬ್ಬರೂ ಬಾಕಿಯಾಗದೆ ಬಂದ್ದಿದ್ದೀರಿ ಅಲ್ಲವೇ.? ಅದರ ನಡುವೆ ಒಬ್ಬರು ಕೇಳಿಯೇ ಬಿಟ್ಟರು. ನಾವು ಬಹಳಷ್ಟು ಬಾರಿ ಇದೇ ದಾರಿಯಲ್ಲಿ ಸಂಚರಿಸಿದ್ದೇವೆ ಆದರೆ ಇಷ್ಟು ದಿನ ಇಲ್ಲದ ಈ ಒಂದು ಔತಣ ಈಗ ಯಾಕೆ.?
ಹೌದು ನೀವು ಅಥಿತಿಗಳಲ್ಲವೇ ಹಾಗಾಗಿ ಒಮ್ಮೆ ಔತಣಕ್ಕೆ ಆಮಂತ್ರಣ ನೀಡಿದ್ದು ಎಂದು ಮಾತ್ರ, ಹಾಗಾದರೆ ಇನ್ನೂ ಕೂಡ ಯಾರೋ ಬರಲು ಬಾಕಿರುವವರು ಅಲ್ಲವೇ.?
(ಮುಂದುವರಿಯುವುದು…)
Part-12/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 12
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಹೌದು ನಮ್ಮ ಜೊತೆಯಲ್ಲಿ ಬಹಳ ಕಿರಿಯ ವಯ್ಯಸಿನ ವ್ಯಕ್ತಿಯೊಬ್ಬರು ತಮ್ಮ ವ್ಯಾಪಾರ ಸಾಮಾಗ್ರಿಗೊಳೊಂದಿಗೆ ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹಿರಿಯರು ಎಲ್ಲರೂ ಬಂದಿದ್ದೇವೆ ಎಂದು ಗುಂಪಿನಲ್ಲಿದ್ದ ಒಂದು ವ್ಯಕ್ತಿ ಹೇಳಿದರು. ಅದಕ್ಕೆ ಅದು ಸರಿಯಲ್ಲ ಅವರನ್ನೂ ಕೂಡ ಕರೆಯಿರಿ ಎಂದು ಪುನಃ ಬಹೀರ ಹೇಳಿದಾಗ. ಅಬ್ದುಲ್ಲಾಹ್ (ರ) ಅವರ ಮಗ ಮುಹಮ್ಮದರನ್ನು ﷺ ಬಿಟ್ಟು ಬಂದದ್ದು ಸರಿಯಲ್ಲ ಎಂದು ಜೊತೆಯಲ್ಲಿದ್ದ ಮತ್ತೊಂದು ವ್ಯಕ್ತಿ ಹೇಳಿದರು. ಇದನ್ನು ಕೇಳಿದಾಗ ಬಹೀರರ ಮನಸ್ಸು ಒಮ್ಮೆಲೆ ಮಂದಹಾಸ ಬೀರಿತು ಮುಹಮ್ಮದ್ ﷺ ಎನ್ನುವ ಹೆಸರು ಕೇಳಿದ್ದೆ ತಡ ಬಹೀರರಿಗೆ ಅದೇನೋ ಒಂದು ಸಂತೋಷ ಲಭಿಸಿದ ಹಾಗೆ.
ತೌರಾತ್’ನಲ್ಲಿ ಹೇಳಿದ ಅಹ್ಮದ್ ಎನ್ನುವ ಹೆಸರಿಗೆ ಸಮಾನವಾದ ಹೆಸರಲ್ಲವೇ ಇದು. ತಡಮಾಡದೆ ಗುಂಪಿನಲ್ಲಿದ್ದ ಒಂದು ವ್ಯಕ್ತಿ ಹೋಗಿ ಮುಹಮ್ಮದ್ ﷺ ಮಗನನ್ನು ಕರೆದುಕೊಂಡು ಬಂದರು. ತಮ್ಮ ದೊಡ್ಡಪ್ಪನ ಪಕ್ಕದಲ್ಲೇ ಮುಹಮ್ಮದ್ ﷺ ಮಗನು ಬಂದು ಕುಳಿತರು. ಮಗನನ್ನು ಕಂಡದ್ದೆ ತಡ ಆ ವೇದ ಪಂಡಿತರ ಆತ್ಮದ ಕಣ್ಣುಗಳು ತೆರೆದುಕೊಂಡಿತು ಮೋಡ ನೆರಳು ನೀಡುತ್ತಾ ಸಂಚರಿಸುತ್ತಿದ್ದ ಚಿತ್ರಗಳು ಅವರ ಕಣ್ಣಿನ ಮುಂದೆ ಹಾದು ಹೋಯಿತು. ನಂತರ ಇಷ್ಟೊಂದು ಕಷ್ಟದಾಯಕವಾದ ಈ ಯಾತ್ರೆಯಲ್ಲಿ ಯಾಕಾಗಿ ಈ ಮಗುವನ್ನು ಜೊತೆಗೆ ಕರೆದುಕೊಂಡು ಬಂದಿದ್ದೀರ.?
ಅಷ್ಟೇ ಅಲ್ಲ ಈ ಮಗುವನ್ನು ಆ ವ್ಯಾಪಾರ ವಸ್ತುಗಳ ಜೊತೆಯಲ್ಲಿ ನಿಲ್ಲಿಸಿದ್ದೀರಲ್ವ.? ಎಂದು ಕೇಳಿದರು.
ಉತ್ತರಕ್ಕೆ ಕಾಯದೆ ಮಗನನ್ನು ಬಹಳ ಸೂಕ್ಷ್ಮವಾಗಿ ಗಮನಿಸ ತೊಡಗಿದರು. ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಎಲ್ಲಾ ಲಕ್ಷಣಗಳು ಕೂಡ ಈ ಮಗುವಿನಲ್ಲಿ ಕಾಣುತ್ತಿದೆ ಅಲ್ಲವೇ.? ಪ್ರವಾದಿತ್ವದ ಮುದ್ರೆಯ ಕುರಿತು ವೇದ ಗ್ರಂಥದಲ್ಲಿ ಬಂದಿದ್ದರೂ ಈಗ ಅಂಗಿ ತೆಗೆದು ಭುಜವನ್ನು ಪರಿಶೀಲಿಸಲು ಹೇಗೆ ಕೇಳಲಿ.? ಹೀಗೆ ಆಲೋಚಿಸುತ್ತಿರುವಾಗ ಖುರೈಶಿಗಳು ತಮ್ಮ ಡೇರೆಗೆ ವಾಪಸು ಹೋಗಲು ತಯಾರಾದರು.
ಅಬೂತ್ವಾಲಿಬರು ಸ್ವಲ್ಪ ತಡ ಮಾಡಿದರು,ಮಗನನ್ನು ಬಹಳ ಹೊತ್ತಿನಿಂದ ಯಾಕೆ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೀರ.?
ಎಂದು ಪಂಡಿತರೊಂದಿಗೆ ಕೇಳಬೇಕು ಎಂದು ಅಂದುಕೊಂಡಾಗ ಪಂಡಿತರೆ ಮಾತಾಡಿದರು, ನಿಮ್ಮ ದೇವರಾದ ಲಾತವನ್ನು, ಉಝ್ಝವನ್ನು ಮುಂದೆ ನಿಲ್ಲಿಸಿ ಕೇಳುತ್ತಿದ್ದೇನೆ ನೀವು ಸತ್ಯವಾಗಿ ಉತ್ತರ ಹೇಳುತ್ತೀರಿ ಅಲ್ವಾ.? ತಕ್ಷಣವೇ ಮುಹಮ್ಮದ್ ﷺ ಮಗನು ಮುಂದೆ ಬಂದು ಲಾತವನ್ನು, ಉಝ್ಝವನ್ನು ಮುಂದೆ ನಿಲ್ಲಿಸಿ ಏನೂ ಕೇಳಬೇಡಿ ಎಂದಾಗ ಸರಿ ಹಾಗಾದರೆ ಅಲ್ಲಾಹನನ್ನು ಮುಂದೆ ನಿಲ್ಲಿಸಿ ಕೇಳಬಹುದೇ.? ಎಂದು ಬಹೀರ ಕೇಳಿದಾಗ.
ಕೇಳಿರಿ ಎಂದು ಮುಹಮ್ಮದ್ ﷺ ಮಗನು ಉತ್ತರಿಸಿದರು. ವೆಯ್ಯುಕ್ತಿಕವಾದ ಕೆಲವೊಂದು ಪ್ರಶ್ನೆಗಳನ್ನು ಬಹೀರ ಕೇಳಿದಾಗ ಸ್ಪಷ್ಟವಾದ ಉತ್ತರವೂ ಕೂಡ ಸಿಕ್ಕಿತು. ಪ್ರವಾದಿತ್ವದ ಮುದ್ರೆಯನ್ನೂ ಪರಿಶೀಲಿಸಿದಾಗ ಬಹೀರರಿಗೆ ಎಲ್ಲವೂ ಅರ್ಥವಾಯಿತು. ಬಹೀರಾರಿಂದ ಆದ ಬದಲಾವಣೆಯನ್ನು ಕಂಡು ಅಬೂತ್ವಾಲಿಬರಿಗೆ ಆಶ್ಚರ್ಯವಾಗಿ ಯಾಕಾಗಿ ನೀವು ಇಷ್ಟು ಗಂಭೀರವಾಗಿ ಪರೀಕ್ಷಿಸುತ್ತಿದ್ದೀರ.? ಎಂದು ಕೇಳಿಯೇ ಬಿಟ್ಟರು.
ಓ ಖುರೈಶಿಗಳೇ ಇದು ಜಗದೊಡೆಯನು ಪ್ರಪಂಚಕ್ಕೆ ಅನುಗ್ರಹವಾಗಿ ನಿಯೋಗಿಸಿದ ಪ್ರವಾದಿಯವರಾಗಿದ್ದಾರೆ ﷺ ಎಂದು ಬಹೀರ ಉತ್ತರಿಸಿದರು.
ಮಾತು ಮುಂದುವರೆಸಿ, ಹೌದು ಅದು ನಿಮಗೆ ಹೇಗೆ ಗೊತ್ತು.? ಎಂದು ಕೇಳಿದಾಗ. ಈ ಸಂಘವು ಬರುತ್ತಿದ್ದದನ್ನು ನಾನು ದೂರ ನಿಂತು ನೋಡುತ್ತಲೇ ಇದ್ದೆ, ಬದಿಯಲ್ಲಿದ್ದ ಕಲ್ಲು ಮರಗಳು ಈ ಮಗುವಿಗೆ ನಮಸ್ಕರಿಸೂದನ್ನು ನಾನು ಗಮನಿಸುತ್ತಲೇ ಇದ್ದೆ. ಅದು ಪ್ರವಾದಿಯರಿಗೆ ಮಾತ್ರ ಹಾಗೆ ಇರುತ್ತದೆ.
ಸಾಲದ್ದಕ್ಕೆ ಭುಜದಲ್ಲಿರುವ ಪ್ರವಾದಿತ್ವದ ಮುದ್ರೆಯನ್ನೂ ನೋಡಿದ್ದೇನೆ. ನಿಮ್ಮ ಬರುತ್ತಿದ್ದ ಗುಂಪಿನಲ್ಲಿ ಮೋಡ ನೆರಳು ನೀಡುತ್ತಿದ್ದದ್ದು ಯಾರಿಗೆ ಎಂದು ಗಮನಿಸಿದ್ದೇನೆ.
ನಂತರ ಮುಂದುವರಿದು ಅಬೂತ್ವಾಲಿಬರನ್ನು ಸಂದರ್ಶನ ನಡೆಸಿದರು.
ಈ ಮಗು ನಿಮಗೆ ಏನಾಗಬೇಕು.?
ನನ್ನ ಮಗ;
ಹಾಗೆ ಆಗಲು ಸಾಧ್ಯವಿಲ್ಲವಲ್ಲ. ಈ ಮಗುವಿನ ತಂದೆ ಬದುಕಿರಲು ಸಾಧ್ಯವೇ ಇಲ್ಲ.
ಹೌದು ಇದು ನನ್ನ ಸಹೋದರನ ಮಗ.
ತಂದೆಯೆಲ್ಲಿದ್ದಾರೆ.?
ಅವರ ಪತ್ನಿ ಗರ್ಭಿಣಿಯಾಗಿದ್ದಾಗಲೇ ಮರಣ ಹೊಂದಿದ್ದಾರೆ.
ಅಲ್ಲಾಹ್!
ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಎಲ್ಲಾ ಲಕ್ಷಣಗಳು ಈ ಮಗುವಿನಲ್ಲಿ ಎದ್ದು ಕಾಣುತ್ತಿದೆ.
ಅಬೂ ತ್ವಾಲಿಬ್’ರವರೇ ನಿಮ್ಮಲ್ಲಿ ಒಂದು ವಿನಂತಿಯಿದೆ ನೀವು ಆದಷ್ಟು ಬೇಗ ಇಲ್ಲಿಂದ ನಿಮ್ಮ ಸಹೋದರನ ಮಗನನ್ನೂ ಕರೆದುಕೊಂಡು ಊರಿಗೆ ಮರಳಿ ಹೋಗಿರಿ ಯಹೂದಿಗಳಿಗೆ ತಿಳಿದರೆ ಅಪಾಯವಾಗುವ ಸಾಧ್ಯತೆಯಿದೆ. ವೇದ ಗ್ರಂಥಗಳಲ್ಲಿ ಮುನ್ಸೂಚನೆ ನೀಡಿರುವ ಈ ಪ್ರವಾದಿಯವರು ಬಹಳ ಉನ್ನತವಾದ ಮಹತ್ವವಿರುವ ವ್ಯಕ್ತಿತ್ವವಾಗಿದ್ದಾರೆ.
ಕಾಲವು ಕಾದು ಕುಳಿತಿದ್ದ ಭವಿಷ್ಯದ ಪ್ರವಾದಿಯವರನ್ನು ಜರ್’ಜಿಸ್ ಗುರುತಿಸಿದ್ದರು, ಆದರೆ ಪ್ರವಾದಿಯವರ ನಿಯೋಗಕ್ಕೂ ಮೊದಲೇ ಇಹಲೋಕ ತ್ಯಜಿಸಿದರು.
ಸತ್ಯ ವಿಶ್ವಾಸದ ಆದರ್ಶದೊಂದಿಗೆ ಪರಲೋಕ ವಿಜಯದ ಭರವಸೆಯೊಂದಿಗೆ ಯಾತ್ರೆಯಾದರು. ಅರ್ಧ ಶತಮಾನದ ಅನ್ವೇಷಣೆಯನ್ನು ಯಶಸ್ವಿ ಗೊಳಿಸಿಯಾಗಿತ್ತು ಅವರು ಯಾತ್ರೆಯಾದದ್ದು. ಪ್ರವಾದಿಯವರ ﷺ ಚರಿತ್ರೆಯಲ್ಲಿ ಶಾಶ್ವತವಾಗಿ ಗುರುತಿಸಲ್ಪಟ್ಟ ಬಹೀರ, ಅಂತ್ಯವಿಲ್ಲದ ಸ್ಮರಣೆಯ ಭಾಗವಾದರು.
(ಮುಂದುವರಿಯುವುದು…)
Part-13/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 13
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವೇದ ಪಂಡಿತ ಬಹೀರರನ್ನು ಭೇಟಿಯಾದ ಘಟನೆಯು ಬಹಳ ಪ್ರಸಿದ್ಧವಾಗಿದೆ ಪ್ರವಾದಿಯವರ ﷺ ಚರಿತ್ರೆಯನ್ನು ಉಲ್ಲೇಖಿಸಿದ ಎಲ್ಲಾ ಚರಿತ್ರೆಕಾರರು ಕೂಡ ಬಹೀರರನ್ನು ಭೇಟಿಯಾದ ಘಟನೆಯನ್ನು ಉಲ್ಲೇಖಿಸಿದ್ದಾರೆ.
ಪ್ರಸ್ತುತ ಘಟನೆಯು ಬಹಳ ಮುಖ್ಯವಾದ ಕೆಲವೊಂದು ವಿವರಣೆಗಳು ನೀಡುತ್ತದೆ ಅದು ಯಾವುದೆಂದರೆ. ಒಂದು, ಒಬ್ಬರು ಪ್ರವಾದಿಯವರ ಆಗಮನಕ್ಕಾಗಿ ಇಡೀ ಜಗತ್ತೇ ಕಾಯುತ್ತಿತ್ತು ಎಂದು, ಇನ್ನೊಂದು ಭವಿಷ್ಯದಲ್ಲಿ ನಿಯೋಗಿಸಲ್ಪಡುವ ಪ್ರವಾದಿಯವರ ಕುರಿತು ವೇದಗಳಲ್ಲಿಯೂ ಉಲ್ಲೇಖಿಸಲಾಗಿತ್ತು ಎಂದು, ಮತ್ತೊಂದು ಅದರ ಕುರಿತು ಸ್ಪಷ್ಟವಾದ ಜ್ಞಾನವಿರುವ ವೇದ ಪಂಡಿತರು ಆ ಕಾಲದಲ್ಲಿ ಬದುಕಿದ್ದರು ಎಂದು, ಮಗದೊಂದು ವೇದಗಳಲ್ಲಿ ಉಲ್ಲೇಖಿಸಲಾದ ವಿಶೇಷತೆಗಳು ಮುಹಮ್ಮದ್ ﷺ ಮಗನಲ್ಲಿ ಕಾಣಲು ಸಾಧ್ಯವಾಗಿತ್ತು ಹಾಗೂ ಅದನ್ನು ಅರಿತು ಮುಹಮ್ಮದ್ ﷺ ಮಗನನ್ನು ಬಹಳಷ್ಟು ಗೌರವಿಸಿದರು ಎಂದು.
ನಂತರದ ಕಾಲಘಟ್ಟದಲ್ಲಿ ವೇದಗಳಲ್ಲಿ ನಡೆದ ಕೆಲವೊಂದು ಪರಿವರ್ತನೆಗಳಿಂದ ಇವುಗಳಲ್ಲಿ ಕೆಲವೊಂದು ಘಟನೆಗಳನ್ನು ಬದಲಾವಣೆ ಮಾಡಲಾಗಿದೆ.
ಆದರೆ ಮುಹಮ್ಮದ್ ﷺ ಮಗನಿಗೆ ಸಂಬಂಧಿಸಿದ ಬಹಳಷ್ಟು ವಿಶೇಷತೆಗಳು ಇವತ್ತಿಗೂ ಬೈಬಲ್’ನಲ್ಲೂ ಇತರ ಗ್ರಂಥಗಳಲ್ಲೂ ಕಾಣಲು ಸಾಧ್ಯವಿದೆ. ಅವುಗಳ ಬಗ್ಗೆ ನಡೆಸಿದ ಅಧ್ಯಯನಗಳೂ ಕೂಡ ಲಭ್ಯವಿದೆ. ಪವಿತ್ರ ಖುರ್’ಆನ್ ವೇದ ಪಂಡಿತರ ಕುರಿತು ಈ ರೀತಿ ವಿವರಿಸುತ್ತದೆ ಅವರ ಬಳಿಯಿರುವ ವೇದ ಗ್ರಂಥಗಳನ್ನು ದೃಢೀಕರಿಸುವ ಮೂಲಕ ಅಲ್ಲಾಹನಿಂದ ಒಂದು ಗ್ರಂಥವನ್ನು (ಖುರ್’ಆನ್) ಅವತರಿಸಲಾಯಿತು, (ಅವರು ಅಂಗೀಕರಿಸಲಿಲ್ಲ) ಈ ಹಿಂದೆ ಅವರು ಸತ್ಯನಿಷೇದಿಗಳ ವಿರುದ್ಧ (ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರನ್ನು ಸಾಕ್ಷಿಯಾಗಿಸಿ) ಸಹಾಯ ಕೋರಿದ್ದರು ಆದರೆ ಅವರಿಗೆ ಸ್ಪಷ್ಟವಾಗಿ ತಿಳಿದಿದ್ದ ಗ್ರಂಥ ಬಂದಾಗ ಅವರು ಅದನ್ನು ನಿಷೇದಿಸಿದರು (2:89) ಎಂದು.
ಅಂತ್ಯ ಪ್ರವಾದಿಯವರ ﷺ ಕುರಿತು ಇರುವ ಚರ್ಚೆಗಳು ಯಹೂದಿ ಹಾಗೂ ಕ್ರೈಸ್ತರ ನಡುವೆ ಬಹಳ ಸ್ಪಷ್ಟವಾಗಿಯೆ ನಡೆದಿತ್ತು.
ಅದರ ಕುರಿತು ಖುರ್’ಆನ್ ಈ ರೀತಿ ಹೇಳುತ್ತದೆ ಅವರಿಗೆ ಅವರ ಸ್ವಂತ ಮಕ್ಕಳ ಕುರಿತು ಅರಿವಿರುವ ಹಾಗೆ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ﷺ ಕುರಿತೂ ಅರಿವಿತ್ತು. ಬಹು ದೈವರಾಧಕರು ಅದರ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭಗಳಲ್ಲಿ ಅವರೇ ಅದನ್ನು ಖುದ್ದಾಗಿ ಹೇಳಿದ್ದರು. ಅಂತ್ಯ ಪ್ರವಾದಿಯವರು ﷺ ಬರುವರು ಆ ಪ್ರವಾದಿಯವರೊಂದಿಗೆ ﷺ ನಾವು ಖಂಡಿತ ಸೇರುತ್ತೇವೆ ಆ ಮೂಲಕ ನಾವು ವಿಜಯಶಾಲಿ ಆಗಲಿದ್ದೇವೆ ಎಂದು. ನಿರಂತರವಾಗಿ ವೇದಗ್ರಂಥಸ್ಥರು ಬಹಳಷ್ಟು ಭರವಸೆಯಿಂದ ನಿರೀಕ್ಷಿಸುತ್ತಿದ್ದ ವಾಸ್ತವವಾಗಿತ್ತು ಅದು.
ಆದರೆ ಅರಬಿಗಳ ಮಧ್ಯದಿಂದ ಪ್ರವಾದಿಯವರು ಜನಿಸಿದ್ದಾರೆ ಎನ್ನುವ ಸತ್ಯವು ಅವರಿಗೆ ತಿಳಿದಾಗ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕೆಲವೊಂದು ಸ್ವಾರ್ಥ ಮನೋಭಾವವಾಗಿತ್ತು ಅವರನ್ನು ತಡೆದದ್ದು. ಭೌತಿಕ ನಷ್ಟದ ಆಧಾರದ ಮೇಲೆಯಾಗಿತ್ತು ಅವರು ಪುಣ್ಯ ಪ್ರವಾದಿಯವರನ್ನು ﷺ ತಿರಸ್ಕರಿಸಿದ್ದು.
ಅಬೂತ್ವಾಲಿಬರೊಂದಿಗೆ ಸಿರಿಯಾ ಪಟ್ಟಣಕ್ಕೆ ತೆರಳುತ್ತಿದ್ದ ಯಾತ್ರೆಯ ಕುರಿತಾಗಿತ್ತಲ್ಲವೇ ಹೇಳುತ್ತಿದ್ದದ್ದು. ಪ್ರವಾದಿವರ್ಯರ ﷺ 20 ನೇ ವಯಸ್ಸಿನಲ್ಲಿ ಅಬೂಬಕ್ಕರ್’ರವರ (ರ) ಜೊತೆಯಲ್ಲಿ ನಡೆಸಿದ್ದ ಶಾಮ್ ಯಾತ್ರೆಯ ಕುರಿತು ಕೆಲವೊಂದು ಚರಿತ್ರೆಕಾರರು ಈ ರೀತಿ ಬರೆದಿದ್ದಾರೆ.
ಅದೇನೆಂದರೆ ಅಬೂಬಕ್ಕರ್’ರವರು (ರ) ತಮ್ಮ 18 ನೇ ವಯಸ್ಸಿನಲ್ಲಿ ಮುಹಮ್ಮದ್ ﷺ ರೊಂದಿಗೆ ಶಾಮ್ ಪಟ್ಟಣಕ್ಕೆ ತೆರಳಿದರು. ವ್ಯಾಪಾರ ಸಾಮಾಗ್ರಿಗಳೊಂದಿಗಿರುವ ಯಾತ್ರೆಯಾಗಿತ್ತು ಅದು. ಯಾತ್ರಾ ಸಂಘವೂ ಸಿರಿಯ ಪಟ್ಟಣದ ಒಂದು ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಪಕ್ಕದಲ್ಲೇ ಇರುವ ಆಶ್ರಮದ ಪಂಡಿತಾರಗಿದ್ದ ಬಹೀರರನ್ನು ಅಬೂಬಕ್ಕರ್’ರವರು (ರ) ಸಂದರ್ಶಿಸಿದರು. ಅವರ ಕೆಲವೊಂದು ವೈಯಕ್ತಿಕ ವಿಷಯಗಳ ಬಗ್ಗೆ ತಿಳಿಯುವ ಉದ್ದೇಶದಿಂದಾಗಿತ್ತು ತೆರಳಿದ್ದು.
ತಕ್ಷಣವೇ ಆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು ಯಾರು? ಎಂದು ಬಹೀರ ಕೇಳಿದರು. ಅದು ಅಬ್ದುಲ್ ಮುತ್ತಲಿಬರ ಮಗನಾದ ಅಬ್ದುಲ್ಲಾಹ್’ರವರ (ರ) ಮಗ ಮುಹಮ್ಮದ್ ﷺ ಎಂದು ಅಬೂಬಕ್ಕರ್’ರವರು ಉತ್ತರಿಸಿದರು. ಅದಕ್ಕೆ ಈ ಸಮೂಹಕ್ಕಿರುವ ಸತ್ಯ ಸಂದೇಶ ವಾಹಕರಾಗಿರುವರು ಅವರು, ಪ್ರವಾದಿ ಈಸರವರ (ಅ) ನಂತರ ಈ ಮರದಡಿಯಲ್ಲಿ ಯಾರೂ ಕೂಡ ವಿಶ್ರಾಂತಿ ಪಡೆದಿರಲಿಲ್ಲ ಎಂದು ಬಹೀರ ಹೇಳಿದರು.
ಈ ಘಟನೆಯನ್ನು ಇಬ್’ನು ಅಬ್ಬಾಸ್’ರವರು (ರ) ಉಲ್ಲೇಖಿಸಿದ್ದಾರೆ. ಈ ಯಾತ್ರೆಯ ಕುರಿತು ಪ್ರಮುಖ ಚರಿತ್ರೆಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿಲ್ಲ ಆದರೆ ಇದನ್ನು ಚರಿತ್ರೆಯ ಭಾಗವಾಗಿ ತಳ್ಳಿಹಾಕಬಾರದು ಎಂಬ ಅಭಿಪ್ರಾಯವನ್ನು ಬಹಳಷ್ಟು ಪ್ರಮುಖ ಪಂಡಿತರು ಹಾಗೂ ಆಧುನಿಕ ವಿದ್ವಾಂಸರು ಕೂಡ ತಿಳಿಸಿದ್ದಾರೆ.
ಅಬೂಬಕ್ಕರ್’ರವರ (ರ) ಯಾತ್ರೆಯಲ್ಲಿ ಒಬ್ಬ ವೇದ ಪಂಡಿತರನ್ನು ಭೇಟಿಯಾಗಿದ್ದರು ಅವರು ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಕುರಿತು ತಿಳಿಸಿದ್ದರು ಎನ್ನುವ ಅಭಿಪ್ರಾಯಗಳು ಕೂಡ ಬೇರೆ ಚರಿತ್ರೆಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ತಂದೆಯ ಸಹೋದರನಾಗಿದ್ದ ಝುಬೈರ್’ರೊಂದಿಗೆ ಪ್ರವಾದಿವರ್ಯರು ﷺ ಯಮನಿಗೆ ಯಾತ್ರೆ ನಡೆಸಿದ ಘಟನೆಯನ್ನು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಆದರೆ ಅದನ್ನು ಉಲ್ಲೇಖಿಸಿದ ಪರಂಪರೆಯು ಅಷ್ಟೊಂದು ಪ್ರಬಲವಾಗಿಲ್ಲ.
ಪುಣ್ಯ ಪ್ರವಾದಿಯವರ ﷺ ಬಾಲ್ಯ, ಯೌವನ ಬಹಳಷ್ಟು ಮಾದರಿ ಯೋಗ್ಯವಾಗಿತ್ತು.
ಸುತ್ತಮುತ್ತಲಿನಲ್ಲಿ ಸಂಪೂರ್ಣವಾಗಿ ಕಲುಷಿತ ವಾತಾವರಣವಿದ್ದರೂ ಕೂಡ ಯಾವುದೇ ಸಣ್ಣ ಮಲಿನತೆಯು ಇಲ್ಲದ ಹಾಗೆ ಜೀವಿಸಿದರು. ಕಷ್ಟ ಪಟ್ಟು ದುಡಿಯಬೇಕಾದ ಸಂದರ್ಭದಲ್ಲಿ ಬಹಳ ಕಷ್ಟದಿಂದಲೇ ದುಡಿದು ಜೀವನ ಸಾಗಿಸಿದರು. ಪುಣ್ಯ ಪ್ರವಾದಿಯವರ ﷺ ದುಡಿಮೆಯ ಜೀವನವನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುತ್ತದೆ…)
Part-14/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 14
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವ್ಯಾಪಾರ ಮಕ್ಕಾ ನಿವಾಸಿಗಳ ಪ್ರಮುಖ ಕಸುಬಾಗಿತ್ತು.
ಅದೇ ರೀತಿ ಇತರ ಉಪಜೀವನದ ಸಾಲಿನಲ್ಲಿ ಪ್ರಮುಖವಾಗಿದ್ದದ್ದು ಪಶುಸಂಗೋಪನೆಯಾಗಿತ್ತು. ಅಂದರೆ ಜಾನುವಾರುಗಳನ್ನು ಮೇಯಿಸುವ ವೃತ್ತಿ. ಅದರಲ್ಲಿಯೂ ಮೇಕೆ ಮೇಯಿಸುವ ವೃತ್ತಿಯು ಬಹಳ ವೈಶಿಷ್ಟ್ಯತೆಯಿಂದ ಕೂಡಿತ್ತು. ತಮ್ಮ ಬಾಲ್ಯದಿಂದಲೇ ಪ್ರವಾದಿವರ್ಯರಿಗೆ ﷺ ಪಶುಪಾಲನೆಯಲ್ಲಿ ಬಹಳಷ್ಟು ಅರಿವಿತ್ತು. ಬನೂಸಅದ್ ಜನಾಂಗದ ಮಕ್ಕಳೊಂದಿಗೆ ಮೇಕೆಯನ್ನು ಮೇಯಿಸಲು ಹೋದ ಘಟನೆಯನ್ನು ಬಹಳಷ್ಟು ಬಾರಿ ಪ್ರವಾದಿವರ್ಯರು ﷺ ನೆನಪಿಸಿದ್ದರು.
ಸಂಬಂಧಿಕರ ಮೇಕೆಯನ್ನು ನಿಶುಲ್ಕವಾಗಿಯೂ, ಇತರರ ಮೇಕೆಯನ್ನು ಸಣ್ಣ ವೇತನ ಪಡೆದುಕೊಂಡು ಮೇಯಿಸುತ್ತಿದ್ದರು. ನಾನು ಮಕ್ಕಾ ನಿವಾಸಿಗಳಿಗಾಗಿ ಚಿಲ್ಲರೆ ನಾಣ್ಯಗಳನ್ನು ಮಾತ್ರ ಪಡೆದುಕೊಂಡು ಮೇಕೆಯನ್ನು ಮೇಯಿಸಿದ್ದೇನೆ ಎಂದು ಪ್ರವಾದಿವರ್ಯರು ﷺ ಹೇಳುತ್ತಿದ್ದರು. ಈ ಘಟನೆಯನ್ನು ನೆನಪಿಸುತ್ತಾ ಜಾಬಿರ್’ರವರು (ರ) ಈ ರೀತಿ ಹೇಳುತ್ತಾರೆ: ನಾವು ಒಮ್ಮೆ ಪುಣ್ಯ ಪ್ರವಾದಿಯವರೊಂದಿಗೆ ﷺ ಅರಾಕ್ ಮರದ ಹಣ್ಣುಗಳನ್ನು ಕೀಳುತ್ತಿದ್ದ ಸಂದರ್ಭದಲ್ಲಿ ತಕ್ಷಣವೇ ಪ್ರವಾದಿವರ್ಯರು ﷺ ಹೇಳಿದರು: ಒಳ್ಳೆಯ ಬಣ್ಣವಿರುವ ಹಣ್ಣುಗಳನ್ನು ತೆಗೆಯಿರಿ ಅದು ತುಂಬಾ ರುಚಿಯಾಗಿವಾಗಿರುತ್ತದೆ ನಾನು ಮೇಕೆ ಮೇಯಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ಕೀಳುತಿದ್ದೆ ಎಂದು.
ಏನು ನೀವು ಮೇಕೆಯನ್ನು ಮೇಯಿಸಿದ್ದೀರ.? ಎಂದು ನಾವು ಕೇಳಿದಾಗ ಹೌದು ಎಲ್ಲಾ ಪ್ರವಾದಿಗಳೂ ಕೂಡ ಮೇಕೆಯನ್ನು ಮೇಯಿಸಿದ್ದಾರಲ್ವಾ ಎಂದು ಪ್ರವಾದಿಯವರು ﷺ ಹೇಳಿದರು. ಮತ್ತೊಮ್ಮೆ ಪ್ರವಾದಿವರ್ಯರು ﷺ ಬಹಳ ಅಭಿಮಾನದಿಂದ ಹೀಗೆ ಹೇಳಿದ್ದರು. ಪ್ರವಾದಿ ಮೂಸ (ಅ) ರವರನ್ನು ಪ್ರವಾದಿಯಾಗಿ ನಿಯೋಗಿಸಿದ್ದು ಅವರು ಮೇಕೆ ಮೇಯಿಸುತ್ತಿದ್ದ ಸಂದರ್ಭದಲ್ಲಾಗಿತ್ತು, ಪ್ರವಾದಿ ದಾವುದ್ (ಅ) ಅವರನ್ನೂ ಕೂಡ ಅದೇ ರೀತಿಯಾಗಿತ್ತು ನಿಯೋಗಿಸಿದ್ದು, ಅಜಿಯಾದ್ ಎನ್ನುವ ಸ್ಥಳದಲ್ಲಿ ನನ್ನ ಸಂಬಂಧಿಕರ ಮೇಕೆಯ ಹಿಂಡನ್ನು ನಾನು ಮೇಯಿಸುತ್ತಿದ್ದ ಸಂದರ್ಭದಲ್ಲಾಗಿತ್ತು ನನ್ನನ್ನು ಪ್ರವಾದಿಯಾಗಿ ನಿಯೋಗಿಸಿದ್ದು ಎಂದು.
ಈ ಘಟನೆಯನ್ನು ಅಬೂಸಈದ್ (ರ) ರವರಾಗಿದ್ದಾರೆ ಉಲ್ಲೇಖಿಸಿದ್ದು.
ಮೇಕೆ (ಆಡು) ಮೇಯಿಸುವ ವೃತ್ತಿಯು ಉಪಜೀವನ ಮಾತ್ರವಲ್ಲದೆ ಅದರಲ್ಲಿ ಬಹಳಷ್ಟು ಒಳಿತುಗಳು ಕೂಡ ಅಡಗಿತ್ತು. ಬಹಳ ವಿಶಾಲವಾದ ಒಂದು ಜನತೆಯನ್ನು ಭವಿಷ್ಯದಲ್ಲಿ ನಿಯಂತ್ರಿಸುವ ಒಬ್ಬ ನಾಯಕನಿಗಿದ್ದ ತರಬೇತಿಯಾಗಿತ್ತು ಅದು. ಮೇಕೆಯ ಹಿಂಡನ್ನು ಮೇಯಿಸುವವರು ಬಹಳಷ್ಟು ಶ್ರದ್ಧೆಯಿಂದಿರಬೇಕಾಗುತ್ತದೆ. ಸಾಮಾನ್ಯವಾಗಿ ಮೇಕೆಗಳು ದುರ್ಬಲವಾಗಿರುವ ಕಾರಣ ಬಹಳಷ್ಟು ಶ್ರದ್ಧೆಯಿಂದಲೇ ಕಾಳಜಿವಹಿಸಬೇಕಾಗುತ್ತದೆ.
ಮೇಕೆಗಳು ಗುಂಪಿನಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಸಾಧ್ಯತೆಯಿರುತ್ತದೆ. ತೋಳದ ವಂಚನೆಯಿಂದಲೂ ರಕ್ಷಿಸಬೇಕಾಗಿತ್ತದೆ. ಕಳ್ಳತನವಾಗದ ಹಾಗೆಯೂ ಕಾಯಬೇಕಾಗುತ್ತದೆ. ಬಹಳ ತಾಳ್ಮೆಯಿಂದಲೇ ಇದನ್ನೆಲ್ಲ ನೋಡಬೇಕಾಗುತ್ತದೆ. ಇಂತಹ ಒಂದು ತರಬೇತಿಯಿಂದ ಸಿಗುವ ಪ್ರಯೋಜ ಲೆಕ್ಕವಿಲ್ಲದಷ್ಟು. ಇದೆಲ್ಲವನ್ನೂ ಕಲಿಯುವ ಅವಕಾಶವಾಗಿತ್ತು ಪುಣ್ಯ ಪ್ರವಾದಿಯವರಿಗೆ ﷺ ಲಭಿಸಿದ್ದು. ಈ ಘಟನೆಗಳನ್ನು ಉದ್ದೇಶಿಸಿ ವಿಶ್ವ ವಿಖ್ಯಾತ ಪಂಡಿತರಾದ ಇಬ್’ನು ಹಜರ್’ರವರು (ರ) ಈ ರೀತಿ ವಿವರಿಸುತ್ತಾರೆ.
ಪುಣ್ಯ ಪ್ರವಾದಿಯವರನ್ನು ﷺ ಲೋಕಕ್ಕೆ ನಾಯಕರಾಗಿ ನಿಯೋಗಿಸಿದ ನಂತರವೂ ಕೂಡ ತಾನು ಬಾಲ್ಯದಲ್ಲಿ ನಿರ್ವಹಿಸಿದ್ದ ಪಶುಪಾಲನೆ ವೃತ್ತಿಯ ಕುರಿತು ಹೇಳುತ್ತಲಿದ್ದರು ಅದು ಪ್ರವಾದಿವರ್ಯರ ﷺ ಅತೀ ದೊಡ್ಡ ವಿನಮ್ರತೆಯಾಗಿತ್ತು ಎಂದು. ಶೂನ್ಯದಿಂದ ಆರಂಭವಾಗಿ ಎಲ್ಲಾ ಅನುಗ್ರಹವೂ ಲಭಿಸಿದ್ದು ಅಲ್ಲಾಹನ ಉದಾರತೆಯಿಂದ ಮಾತ್ರವಾಗಿದೆ ಎಂದು ಚಿಂತಿಸಲು ಕೂಡ ಆಗಿದೆ.
ಪ್ರವಾದಿವರ್ಯರ ﷺ ಆರ್ಥಿಕ ಪರಿಶುದ್ದಿಯನ್ನು ಕಲಿಸುವ ಅಧ್ಯಾಯವಾಗಿದೆ ಇದು.
ಅಷ್ಟೇ ಅಲ್ಲ ಕಷ್ಟ ಪಡುವ ಎಲ್ಲಾ ವ್ಯಕ್ತಿಗಳ ಮೂಲ್ಯಗಳನ್ನೂ ಒಳಗೊಂಡಿದೆ. ಅಲ್ಲಾಹನಿಗೆ ಅವನ ಪ್ರೀತಿಯ ಪ್ರವಾದಿವರ್ಯರಿಗೆ ﷺ ಯಾವುದೇ ಕಷ್ಟವಿಲ್ಲದೆ ಸಂಪತ್ತು ನೀಡಬಹುದಿತ್ತು ಆದರೆ ಇಲ್ಲಿ ಮನುಷ್ಯ ಸಮೂಹಕ್ಕೆ ಒಬ್ಬರು ಮಾದರಿಯೋಗ್ಯ ಪ್ರವಾದಿಯವರನ್ನು ﷺ ನೀಡಬೇಕಿತ್ತು. ಅನುಮತಿಯಿರುವ ಯಾವುದೇ ವೃತ್ತಿಯನ್ನೂ ಸ್ವೀಕರಿಸಬಹುದು. ಸಾಮಾನ್ಯವಾಗಿ ಪಶುಪಾಲನೆ ವೃತ್ತಿಯನ್ನು ಕೆಳಮಟ್ಟದ ವೃತ್ತಿಯಾಗಿ ಕಾಣುತ್ತಿದ್ದರಲ್ಲವೇ ಆದರೆ ಪ್ರವಾದಿವರ್ಯರು ﷺ ಅದನ್ನು ಬಹಳ ಅಭಿಮಾನದಿಂದ ಎತ್ತಿ ಹಿಡಿದರು.
ಮೇಕೆ ಐಶ್ವರ್ಯವಾಗಿದೆ, ಒಂಟೆ ಅಭಿಮಾನವಾಗಿದೆ, ಅತ್ಯುತ್ತಮ ಆಹಾರ ಸ್ವಂತವಾಗಿ ಕಷ್ಟಪಟ್ಟು ದುಡಿದು ಸಂಪಾದಿಸುದರಲ್ಲಾಗಿದೆ ಎಂದಾಗಿತ್ತು ಪುಣ್ಯ ಪ್ರವಾದಿಯವರು ಸಂದೇಶ ನೀಡಿದ್ದು.
ಜನರೊಂದಿಗೆ ಬೆರೆತು ವ್ಯವಹಾರ ನಡೆಸುವ ಸಂದರ್ಭಗಳಲ್ಲಾಗಿದೆಯಲ್ಲವೇ ಒಬ್ಬರ ಕುರಿತು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದು. ಆ ಸಂದರ್ಭದಲ್ಲಿ ಮಾತ್ರವಲ್ಲವೇ ಪ್ರಾಮಾಣಿಕತೆ, ನ್ಯಾಯ, ನಿಷ್ಠೆ ಮುಂತಾದ ಸದ್ಗುಣಗಳ ಕುರಿತು ತಿಳಿಯಲು ಸಾಧ್ಯವಾಗುವುದು.
ಪ್ರವಾದಿಯವರ ﷺ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು ಉತ್ತಮ ಅವಕಾಶವಾಗಿತ್ತು ಅವರ ಈ ರೀತಿಯ ಉತ್ತಮ ವಹಿವಾಟುಗಳು. ಸಮೂಹದೊಂದಿಗೆ ಜೀವಿಸುತ್ತಾ ಒಳಿತನ್ನು ಇನ್ನೊಬ್ಬರಿಗೆ ತಿಳಿಸುತ್ತಾ, ಕೆಡುಕುಗಳನ್ನು ವಿರೋಧಿಸುತ್ತಾ ಬದುಕುವುದರೊಂದಿಗೆ ಸಮೂಹಕ್ಕೆ ಮಾದರಿಯಾಗುವ ರೀತಿಯಾಲ್ಲಾಗಿತ್ತು ಪುಣ್ಯ ಪ್ರವಾದಿಯವರ ﷺ ಜೀವನ ಶೈಲಿ.
ಪುಣ್ಯ ಪ್ರವಾದಿಯವರ ﷺ ಯೌವನದ ಕುರಿತು ತಿಳಿದುಕೊಂಡವರು, ಸ್ವಾಭಾವವನ್ನು ಅರಿತುಕೊಂಡವರು ಆ ಸಂದರ್ಭದಲ್ಲಿ ಪುಣ್ಯ ಪ್ರವಾದಿಯವರಿಗೆ ﷺ ಒಟ್ಟಾಗಿ ನೀಡಿದ ಹೆಸರಾಗಿತ್ತು ಅಲ್ ಆಮೀನ್ ಅಥವಾ ವಿಶ್ವಾಸಯೋಗ್ಯ ಎಂದು.
ಪ್ರಸಿದ್ಧ ಇತಿಹಾಸಕಾರನಾದ ಸರ್ ವಿಲ್ಯನ್ ಮೂರ್’ರವರು ಪುಣ್ಯ ಪ್ರವಾದಿಯವರ ﷺ ಕುರಿತು “The fair gut feeling and honorable bearing of ethics unobtrusive youth won the hail of his fellow citizens :and he received the title alongside common consent of Al-Ameen,the Trustworthy”(The life of Muhammed) ಎಂದು ಬರೆದಿದ್ದಾರೆ.
ಎಲ್ಲಾ ಸಂದರ್ಭಗಳಲ್ಲೂ ಮಾದರಿಯಾಗಿ ಪುಣ್ಯ ಪ್ರವಾದಿಯವರ ﷺ ಯೌವನವನ್ನು ಗುರುತಿಸಲ್ಪಡುವ ವಾತಾವರಣದ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುವುದು…)
Part-15/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 15
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಆರನೇ ಶತಮಾನದಲ್ಲಿ ಜೀವಿಸುತ್ತಿದ್ದ ಮಕ್ಕಾ ಜನತೆಯು ಬಹಳ ಅಧರ್ಮಿಗಳಾಗಿದ್ದರು.
ಅವರ ನಡುವೆಯಿರುವ ಬಹಳ ವಿಶೇಷ ಯುವಕನ ಕುರಿತಾಗಿದೆ ನಾವು ತಿಳಿಯುತ್ತಿರುವುದು. ಸುಳ್ಳು ಹೇಳುವುದನ್ನು, ವಂಚಿಸುವುದನ್ನು ತಪ್ಪೇಯಲ್ಲದ ರೀತಿಯಲ್ಲಿ ಕಾಣುತ್ತಿದ್ದ ಜನತೆಯ ನಡುವೆ ತಮಾಷೆಗೂ ಕೂಡ ಸುಳ್ಳು ಹೇಳದೆ ಜೀವಿಸಿದ್ದರು, ಮದ್ಯಪಾನವನ್ನು ಪುಣ್ಯತೀರ್ಥದ ಹಾಗೆ ಅಥವಾ ನೀರಿನ ಹಾಗೆ ಕುಡಿಯುತ್ತಿದ್ದ ಜನರೆಡೆಯಲ್ಲಿ ಮಧ್ಯದ ವಾಸನೆಯನ್ನೂ ಕೂಡ ತಿಳಿಯದ ಹಾಗೆ ಸೂಕ್ಷ್ಮತೆ ವಹಿಸಿದ್ದರು, ಎಲ್ಲಾ ರೀತಿಯ ವಿನೋದಗಳಲ್ಲಿ ಮೈಮರೆಯುತ್ತಿದ್ದ ಜನ ಸಮೂಹದ ನಡುವೆ ಒಂದು ಸಣ್ಣ ವಿನೋದವನ್ನೂ ಕೂಡ ಮಾಡದೆ ಬದುಕುತಿದ್ದರು.
ಈ ರೀತಿಯಲ್ಲಾಗಿತ್ತು ಪುಣ್ಯ ಪ್ರವಾದಿಯವರು ﷺ ಮಕ್ಕ ಪಟ್ಟಣದಲ್ಲಿ ಬೆಳೆದು ಬಂದದ್ದು.
ಪವಿತ್ರವಾದ ಈ ರೀತಿಯ ಜೀವನದ ನಡುವೆ ಅಲ್ಲಾಹನ ರಕ್ಷಣೆ ಇದ್ದದ್ದು ನಮಗೆ ತಿಳಿಯಲು ಸಾದ್ಯವಾಗುತ್ತದೆ. ಸ್ವೀಕಾರಯೋಗ್ಯವಾದ ಒಂದು ಉಲ್ಲೇಖವೂ ಈ ರೀತಿಯಾಗಿದೆ, ಅದೇನೆಂದರೆ ಖುರೈಶಿಗಳು ಕಅಬಾಲಯನ್ನು ನವೀಕರಣ ಮಾಡುತಿದ್ದ ಸಮಯವಾಗಿತ್ತು ಅದು. ಕಲ್ಲು ಕೊಂಡೊಗುವವರೊಂದಿಗೆ ಪ್ರವಾದಿವರ್ಯರ ﷺ ಜೊತೆಯಲ್ಲಿ ಅವರ ಚಿಕ್ಕಪ್ಪ ಅಬ್ಬಾಸ್’ರವರು (ರ) ಕೂಡ ಇದ್ದರು.
ಲುಂಗಿ ತೆಗೆದು ಹೆಗಲ ಮೇಲೆ ಇಟ್ಟು ಅದರ ಮೇಲೆ ಕಲ್ಲು ಇಟ್ಟು ತೆಗೆದುಕೊಂಡು ಬರುವುದಾಗಿತ್ತು ವಾಡಿಕೆ. ಆದರೆ ಮುಹಮ್ಮದರು ﷺ ಮಾತ್ರ ಲುಂಗಿ ತೆಗೆಯದೆ ಹಾಗೆ ಹೆಗಲ ಮೇಲೆ ಕಲ್ಲು ಇಟ್ಟು ಕೊಂಡೊಗುತ್ತಿದ್ದರು ಇದನ್ನು ಕಂಡ ಅಬ್ಬಾಸ್’ರವರಿಗೆ (ರ) ಅಯ್ಯೋ ಎನಿಸಿ ಮಗನೇ ಲುಂಗಿ ತೆಗೆದು ಹೆಗಲ ಮೇಲಿಟ್ಟು ಕಲ್ಲು ಕೊಂಡೋಗಬಹುದಲ್ಲವೇ.? ಎಂದು ಕೇಳಿದಾಗ. ಪ್ರವಾದಿವರ್ಯರು ﷺ ಅದನ್ನು ವಿರೋಧಿಸಿದರು. ಅವರಿಬ್ಬರು ಇರುವ ಸಂದರ್ಭದಲ್ಲಿ ಮಾತ್ರ ಲುಂಗಿ ತೆಗೆಯೋಣ ಎಂದು ಭಾವಿಸಿ ಲುಂಗಿಯನ್ನು ತೆಗೆಯಲು ಮುಂದಾದಾಗ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು.
ಏನಾಯಿತು ಮಗನೇ ಎಂದು ಚಿಕಪ್ಪ ಅಬ್ಬಾಸ್’ರವರು (ರ) ಕೇಳಿದಾಗ ಪ್ರವಾದಿವರ್ಯರು ﷺ ಆಕಾಶದತ್ತ ನೋಡುತ್ತಾ ನನಗೆ ನಗ್ನತೆಯಿಂದ ಇರುವುದನ್ನು ವಿರೋಧಿಸಲಾಗಿದೆ ಎಂದು ಹೇಳಿದರು. ನಂತರ ಅಂತಹ ಪ್ರಯತ್ನವನ್ನು ಕೈಬಿಟ್ಟರು.
ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ಪ್ರವಾದಿವರ್ಯರು ﷺ ಪಾಪಗಳಿಂದ ಸಂರಕ್ಷಿತರಾಗಿದ್ದರು ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ. ಇಮಾಮ್ ಬುಖಾರಿಯವರು (ರ) ಕೂಡ ಈ ಹದೀಸನ್ನು ಉಲ್ಲೇಖಿಸಿದ್ದಾರೆ.
ಈ ಘಟನೆಗಿಂತಲೂ ಮುಂಚೆಯು ಇದೆ ರೀತಿ ಇತರ ಮಕ್ಕಳೊಂದಿಗೆ ಪ್ರವಾದಿವರ್ಯರು ﷺ ಲುಂಗಿ ತೆಗೆಯದೆ ಕಲ್ಲು ಕೊಂಡೊಗುತ್ತಿದ್ದ ಸಂದರ್ಭದಲ್ಲಿಯೂ ಈ ರೀತಿಯ ಒಂದು ಪ್ರಯತ್ನ ನಡೆಸಿದ್ದರು ಆಗಲೂ ಕೂಡ ನೀವು ಲುಂಗಿ ಧರಿಸಿರಿ ಎನ್ನುವ ಆದೇಶ ನೀಡಿ ಹಿಂದಿನಿಂದ ಬೆನ್ನಿಗೆ ಯಾರೋ ಹೊಡೆದ ಅನುಭವವಾಯಿತು ಆದರೆ ಸ್ವಲ್ಪವೂ ನೋವೂ ಆಗಿರಲಿಲ್ಲ ಹಾಗೂ ಅಲ್ಲಿ ಯಾವುದೇ ವ್ಯಕ್ತಿಯೂ ಇರಲಿಲ್ಲ ಅದರ ನಂತರ ಬರೀ ಹೆಗಲಿನಲ್ಲೇ ಕಲ್ಲು ಕೊಂಡು ಹೋಗಿ ಕೆಲಸ ಪೂರ್ಣಗೊಳಿಸಿದ್ದರು.
ಇಬ್’ನು ಅಬ್ಬಾಸ್ (ರ) ರವರು ಉಲ್ಲೇಖಿಸಿದ ಮತ್ತೊಂದು ಘಟನೆ ಈ ರೀತಿಯಾಗಿದೆ.
ಒಮ್ಮೆ ಅಬೂತ್ವಾಲಿಬರು ಝಮ್ ಝಮ್ ಬಾವಿಯ ದುರಸ್ತಿ ಕಾರ್ಯವನ್ನು ಮಾಡುತಿದ್ದರು. ಸಹೋದರನ ಮಗನಾದ ಮುಹಮ್ಮದರು ﷺ ಕೂಡ ಅವರ ಜೊತೆಯಲ್ಲಿದ್ದರು. ಕಲ್ಲುಗಳನ್ನು ಎತ್ತಿ ಹೆಗಲ ಮೇಲೆ ಇಟ್ಟು ಕೊಂಡೊಗುತ್ತಿದ್ದರು. ಇದನ್ನು ಕಂಡ ಒಬ್ಬ ವಯಸ್ಸಾದ ವ್ಯಕ್ತಿಗೆ ಅಯ್ಯೋ ಎನಿಸಿ ಅವರ ಬಟ್ಟೆ ಬಿಚ್ಚಿ ಹೆಗಳಲ್ಲಿ ಇಟ್ಟ ತಕ್ಷಣವೇ ಮುಹಮ್ಮದ್ ﷺ ಮಗನು ಪ್ರಜ್ಞೆ ತಪ್ಪಿದರು. ಪ್ರಜ್ಞೆ ಬಂದ ನಂತರ ದೊಡ್ಡಪ್ಪ ಅಬೂತ್ವಾಲಿಬರು ಬಂದು ಏನಾಯಿತು ಮಗನೇ.? ಎಂದು ಕೇಳಿದಾಗ ಅಪ್ಪ ಪ್ರಕಾಶವಾಗಿದ್ದ ವಸ್ತ್ರವನ್ನು ಧರಿಸಿದ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ನೀವು ಸಂಪೂರ್ಣವಾಗಿ ವಸ್ತ್ರ ಧರಿಸಿರಿ ಎಂದು ಹೇಳಿದ್ದಾಗಿ ಮುಹಮ್ಮದ್ ﷺ ಮಗನು ಉತ್ತರಿಸಿದರು.
ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ದಿವ್ಯ ಸಂದೇಶಗಳು ಲಭಿಸಿತ್ತು ಎನ್ನುವುದಕ್ಕೆ ಉದಾಹರಣೆಯಾಗಿ ಈ ಘಟನೆಯನ್ನು ವಿದ್ವಾಂಸರು ವಿವರಿಸುತ್ತಾರೆ.
ನೈತಿಕತೆಯ ಪ್ರತಿರೂಪವಾಗಿ ಪ್ರವಾದಿವರ್ಯರು ﷺ ಜೀವನ ಸಾಗಿಸಿದರು. ಜೀವನದುದ್ದಕ್ಕೂ ತಿದ್ದುಪಡಿಗಳನ್ನು ಮಾಡುತ್ತಲೇ ಇದ್ದರು. ಪ್ರವಾದಿವರ್ಯರು ﷺ ಹೇಳಿರುವುದನ್ನು ಅಲಿರವರು (ರ) ಈ ರೀತಿ ಉಲ್ಲೇಖಿಸುತ್ತಾರೆ ಅಜ್ಞಾನದ ಕಾಲದಲ್ಲಿದ ಜನತೆ ಮಾಡುತಿದ್ದ ಒಂದೇ ಒಂದು ಕಾರ್ಯವನ್ನು ಕೂಡ ಮಾಡಲು ಉದ್ದೇಶಿಸಿಯೂ ಇರಲಿಲ್ಲ, ಆದರೆ ಎರಡು ಸಂದರ್ಭಗಳು ಎದುರಾಗಿತ್ತು ಆ ಸಮಯಗಳಲ್ಲಿ ಅಲ್ಲಾಹನು ನನಗೆ ರಕ್ಷಣೆ ನೀಡಿದನು.
ಅದರಲ್ಲಿ ಒಂದು ಇತರ ಗೆಳೆಯರೊಂದಿಗೆ ಮೇಕೆ ಮೇಯಿಸುತ್ತಿದ್ದ ಕಾಲವಾಗಿತ್ತು ಅದು, ಒಮ್ಮೆ ಇವತ್ತು ನನ್ನ ಮೇಕೆಯನ್ನು ಕೂಡ ನೀವೆ ನೋಡಿಕೊಳ್ಳುತ್ತೀರ ಎಂದು ಅವರಲ್ಲಿ ಹೇಳಿ. ಇತರ ಯುವಕರೊಂದಿಗೆ ಒಮ್ಮೆ ವಿನೋಧಗಳಲ್ಲಿ ಸೇರೋಣ ಎಂದು ಭಾವಿಸಿ ಪಟ್ಟಣಕ್ಕೆ ಹೊರಟೆನು. ಪಟ್ಟಣಕ್ಕೆ ತಲುಪಿದ ನಂತರ ಒಂದು ಮನೆಯಲ್ಲಿ ವಾದ್ಯಗಳು ಕೇಳುತ್ತಿತ್ತು. ಮದುವೆ ಸಮಾರಂಭದಲ್ಲಿ ನಡೆಯುತ್ತಿದ್ದ ವಾದ್ಯವಾಗಿತ್ತು ಅದು. ಅದನ್ನು ಕೇಳಲೆಂದು ಒಳಗೆ ಹೋಗಿ ಒಂದು ಕಡೆಯಲ್ಲಿ ಕುಳಿತದ್ದೇ ತಡ ನನಗೆ ನಿದ್ದೆ ಬಂದು ಬಿಟ್ಟಿತು.
ಕಾರ್ಯಕ್ರಮವೆಲ್ಲಾ ಮುಗಿದು ಮರು ದಿವಸ ಮುಂಜಾನೆಯಾಗಿತ್ತು ನನಗೆ ಎಚ್ಚರಿಕೆಯಾದದ್ದು. ಸ್ವಲ್ಪವೂ ಕೂಡ ವಾದ್ಯವನ್ನು ಕೇಳಲು ಸಾಧ್ಯವಾಗಿಲ್ಲ, ನಂತರ ಅಲ್ಲಿಂದ ವಾಪಸು ಗೆಳೆಯರ ಬಳಿಗೆ ಹೋದಾಗ ಅವರು ವಿನೋಧದ ಕುರಿತು ಕೇಳಿದರು. ನಡೆದ ಎಲ್ಲಾ ಘಟನೆಯನ್ನು ವಿವರಿಸಿದೆನು. ಅದೇ ರೀತಿಯ ಇನ್ನೊಂದು ಬಾರಿಯೂ ಅಂತಹ ಅನುಭವ ಮತ್ತೊಮ್ಮೆ ಉಂಟಾಯಿತು ಅದರ ನಂತರ ಒಮ್ಮೆಯೂ ಕೂಡ ಅಂತಹ ಒಂದು ಪ್ರಯತ್ನ ಮಾಡಿರಲಿಲ್ಲ.
ಪ್ರವಾದಿವರ್ಯರು ﷺ ಅಪ್ರತಿಮ ನಂಬಿಕೆಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು.
ಅನೇಕ ಸಂದರ್ಭಗಳಲ್ಲಿ ಅದು ಸ್ಪಷ್ಟವಾಗಿತ್ತು….
(ಮುಂದುವರಿಯುವುದು…)
Part-16/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 16
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಮಕ್ಕಾ ಪಟ್ಟಣದಲ್ಲಿ ಬಹು ದೈವಾರಾಧನೆ ತಾಂಡವವಾಡುತ್ತಿತ್ತು. ಅದರ ಹೆಸರಿನಲ್ಲಿ ಮೂರ್ತಿ ಪೂಜೆಯೂ ಕೂಡ ಅಧಿಕವಾಗಿತ್ತು.
ವಿವಿಧ ಪಂಗಡಗಳಿಗೆ ವಿವಿಧ ರೀತಿಯ ದೈವಗಳ ವಿಗ್ರಹಗಲೂ ಇತ್ತು. ಸೃಷ್ಟಿಕರ್ತನೊಬ್ಬನನ್ನು ಮಾತ್ರ ಆರಾಧಿಸಲು ನಿರ್ಮಿಸಿದ ಕಅಬಾಲಯದ ಒಳಗೂ, ಹೊರಗೂ, ಅದರ ಸುತ್ತಲಿನ ಪರಿಸರದಲ್ಲೂ ಕೂಡ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನೈಜವಾದ ಏಕ ದೇವ ವಿಶ್ವಾಸವು ಮಕ್ಕಾ ನಿವಾಸಿಗಳಲ್ಲಿ ಕೆಲವೊಂದು ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರವೇ ಇತ್ತು. ಮನುಕುಲದ ಆರಂಭದಿಂದಲೂ ಮಕ್ಕಾದಲ್ಲಿ ಅಲ್ಲಾಹನನ್ನು ಮಾತ್ರವೇ ಆರಾಧಿಸಲಾಗಿತ್ತು. ಪ್ರವಾದಿ ನೂಹ್’ರವರ (ಅ) ಕಾಲದಲ್ಲಿ ಅವರ ಜನತೆಯಾಗಿದೆ ಮೊದಲ ಬಾರಿ ವಿಗ್ರಹರಾಧನೆ ಆರಂಭಿಸಿದ್ದು.
ಅಮ್ರ್ ಬಿನ್ ಲಹಿಯ ಎನ್ನುವ ವ್ಯಕ್ತಿಯಾಗಿದ್ದಾನೆ ಅರೇಬಿಯನ್ ಭೂಖಂಡದಲ್ಲಿ ಮೊದಲ ಬಾರಿಗೆ ವಿಗ್ರಹವನ್ನು ನಿರ್ಮಿಸಿದ್ದು. ಪ್ರವಾದಿಗಳ ಉಪದೇಶ ಲಭಿಸದ ಕಾರಣ ಮಕ್ಕಾ ಜನತೆ ಅದರಲ್ಲಿ ಆಕರ್ಷಿತರಾದರು. ಪ್ರವಾದಿ ಮೂಸರವರ (ಅ), ಪ್ರವಾದಿ ಈಸರವರ (ಅ) ಅನುಯಾಯಿಗಳು ಬಹಳಷ್ಟು ಸತ್ಯಸಂದೇಶ ತಲುಪಿಸಿದರೂ ಮಕ್ಕಾ ನಿವಾಸಿಗಳು ಅದನ್ನು ಅಂಗೀಕರಿಸಲಿಲ್ಲ. ಈ ರೀತಿಯ ಅಸುರಕ್ಷಿತವಾದ ಜನರ ನಡುವೆಯಾಗಿತ್ತು ಪುಣ್ಯ ಪ್ರವಾದಿಯವರು ﷺ ಬೆಳೆದು ಬಂದದ್ದು, ಆದರೆ ಒಂದೇ ಒಂದು ಬಾರಿಯೂ ಕೂಡ ಪ್ರವಾದಿವರ್ಯರು ﷺ ಬಹು ದೈವರಾಧನೆಯ ಕಡೆಗೆ ವಾಲಿಕೆಯೂ ಆಗಿರಲಿಲ್ಲ.
ಒಂದೇ ಒಂದು ವಿಗ್ರಹವನ್ನು ಪೂಜಿಸುವುದೋ, ನಮಸ್ಕರಿಸುವುದೋ ಮಾಡಿರಲಿಲ್ಲ. ಸೃಷ್ಟಿಕರ್ತನಿಂದ ಪುಣ್ಯ ಪ್ರವಾದಿಯವರಿಗೆ ﷺ ವಿಶೇಷವಾದ ರಕ್ಷಣೆ ಯಾವಾಗಲೂ ಇರುತ್ತಿತ್ತು. ಇದರ ಕುರಿತು ಕೆಲವೊಂದು ಘಟನೆಗಳನ್ನು ಈ ರೀತಿ ವಿವರಿಸಬಹುದು.
1. ಅಲಿರವರು (ರ) ಉಲ್ಲೇಖಿಸಿದ ಘಟನೆ, ಪ್ರವಾದಿವರ್ಯರ ﷺ ಬಳಿ ಒಬ್ಬ ವ್ಯಕ್ತಿಯು ಬಂದು ನೀವು ಮೂರ್ತಿ ಪೂಜೆ ಮಾಡಿದ್ದೀರಾ ಅಥವಾ ಯಾವತ್ತಾದರೂ ಮಧ್ಯಪಾನ ಮಾಡಿದ್ದೀರಾ.? ಎಂದು ಕೇಳಿದಾಗ, ಇಲ್ಲ ಅವರು ಮಾಡುವುದು ಸತ್ಯ ನಿಷೇಧವಾಗಿದೆ (ಕುಫ್’ರ್) ಎಂದು ನನಗೆ ಅವತ್ತೇ ತಿಳಿದಿತ್ತು ಎಂದು ಪ್ರವಾದಿವರ್ಯರು ﷺ ಹೇಳಿದರು.
2.
ಪ್ರವಾದಿವರ್ಯರ ﷺ ಪರಿಚಯದ ವ್ಯಕ್ತಿಯಾದ ಝೈದ್ ಬಿನ್ ಹಾರಿಸ ಎನ್ನುವವರು ವಿವರಿಸುತ್ತಾರೆ. ಪುಣ್ಯ ಪ್ರವಾದಿಯವರು ﷺ ಒಮ್ಮೆಯೂ ಕೂಡ ಯಾವುದೇ ವಿಗ್ರಹಕ್ಕೂ ನಮಸ್ಕರಿಸಿರಲಿಲ್ಲ. ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ನನಗೆ ಅದು ಇಷ್ಟವಿರಲಿಲ್ಲ, ಕಅಬಾವನ್ನು ಪ್ರದಕ್ಷಿಣೆ ಹಾಕುತ್ತಿದ್ದ ಅವತ್ತಿನ ಮಕ್ಕಾ ನಿವಾಸಿಗಳು ಇಸಾಫ, ನಾಇಲ ಎನ್ನುವ ವಿಗ್ರಹಗಳಿಗೆ ನಮಸ್ಕರಿಸುತ್ತಿದ್ದರು ಆದರೆ ಪ್ರವಾದಿಯವರು ﷺ ಅದನ್ನೂ ಕೂಡ ಮಾಡಿರಲಿಲ್ಲ.
3.
ಸಾಕು ತಾಯಿ ಉಮ್ಮು ಐಮನ್’ರವರು ವಿವರಿಸುತ್ತಾರೆ, ಖುರೈಷಿಗಳು ಬುವಾನ ಎನ್ನುವ ಮೂರ್ತಿಯನ್ನು ಪೂಜಿಸುತಿದ್ದರು, ಅದರ ಸನ್ನಿಧಿಯಲ್ಲಿ ವಾರ್ಷಿಕೋತ್ಸವವನ್ನು ನಡೆಸುತ್ತಿದ್ದರು, ಬಲಿ ಕೊಟ್ಟು ತಲೆ ಕೂದಲನ್ನೂ ನೀಡುತ್ತಿದ್ದರು, ಉತ್ಸವದ ದಿವಸ ಅಲ್ಲಿಯೇ ಭಜನೆಯನ್ನು ನಡೆಸುತ್ತಿದ್ದರು.
ಅಬೂತ್ವಾಲಿಬರೂ ಕೂಡ ಕುಟುಂಬದ ಎಲ್ಲಾ ಸದಸ್ಯರನ್ನು ಸೇರಿಸಿ ಭಾಗವಹಿಸುತ್ತಿದ್ದರು. ಆದರೆ ಪ್ರವಾದಿವರ್ಯರು ﷺ ಅದನ್ನು ವಿರೋಧಿಸುತ್ತಿದರು ಆದರೆ ಅದು ಅಬೂತ್ವಾಲಿಬರಿಗೆ ಇಷ್ಟವಾಗುತ್ತಿರಲಿಲ್ಲ.
ಅದಕ್ಕೆ ದೊಡ್ಡಮ್ಮಂದಿರು ಯಾಕೆ ಮಗನೇ ಕುಟುಂಬದ ಎಲ್ಲಾ ಸದಸ್ಯರು ಸೇರುವ ಈ ಕಾರ್ಯಕ್ರಮದಿಂದ ದೂರ ಸರಿಯುತ್ತಿದ್ದೀಯ.? ನಮ್ಮ ಆರಾಧ್ಯರನ್ನು ವಿರೋಧಿಸುವುದು.? ನಾವು ನಮ್ಮ ಶಕ್ತಿ ತೋರಿಸಬೇಕಾದ ಈ ಸಂದರ್ಭದಲ್ಲಿ ಮಗನು ನಮ್ಮಿಂದ ದೂರಸರಿಯುತ್ತಿದ್ದೀಯ? ಎಂದು ಹೇಳುತಿದ್ದರು.
ಒಲ್ಲದ ಮನಸ್ಸಿನಿಂದ ಬರುತ್ತೇನೆಂದು ಹೇಳಿ ಪ್ರವಾದಿವರ್ಯರು ﷺ ಅವರ ಹಿಂದೆಯೇ ನಡೆದರು. ಆದರೆ ಸ್ವಲ್ಪ ಸಮಯದ ನಂತರ ಮುಹಮ್ಮದ್ ﷺ ಮಗನು ಕಾಣೆಯಾಗಿದ್ದರು.
ನಂತರ ಭಯದಿಂದ ನಡುಗುತ್ತಾ ನಮ್ಮ ಬಳಿ ಓಡಿ ಬಂದಾಗ ಮಗನೇ ಏನಾಯಿತು? ಎಂದು ದೊಡ್ಡಮ್ಮಂದಿರು ಕೇಳಿದಾಗ. ಅದಕ್ಕೆ ನನಗೆ ಏನೋ ತಪ್ಪಾಗಿದೆಯೆಂದು ಅನಿಸುತ್ತಿದೆ ಎಂದು ಮುಹಮ್ಮದ್ ﷺ ಮಗನು ಹೇಳಿದರು, ಮಗನಿಗೆ ಯಾವತ್ತೂ ಪಿಶಾಚಿಯ ಕಾಟ ಇರಲಾರದು ಕಾರಣ ಮಗನ ಸ್ವಭಾವವೇ ಅಂತದ್ದಲ್ಲವೇ ಆದರೆ ಈಗ ಏನಾಯಿತು ಎಂದು ಪುನಃ ದೊಡ್ಡಮ್ಮಂದಿರು ಕೇಳಿದಾಗ. ನಾನು ಉತ್ಸವ ನಡೆಯುವ ಸ್ಥಳಕ್ಕೆ ಬರುತಿದ್ದೆ ದೇಗುಲದ ಹತ್ತಿರಕ್ಕೆ ತಲುಪುತ್ತಿದ್ದಾಗ ಒಬ್ಬರು ವಿಶಾಲ ಗಾತ್ರದ ಬಿಳಿ ವಸ್ತ್ರಧಾರಿ ಪ್ರತ್ಯಕ್ಷವಾಗಿ “ಓ ಮುಹಮ್ಮದ್ ﷺ ಹಿಂದೆ ಹೋಗಿರಿ ಮೂರ್ತಿಯ ಬಳಿ ಹೋಗದಿರಿ” ಎಂದು ಅವರು ಹೇಳಿದ್ದಾಗಿ ಮುಹಮ್ಮದ್ ﷺ ಮಗನು ಹೇಳಿದರು.
ಅದರ ನಂತರ ಯಾವತ್ತೂ ಅಂತಹ ಉತ್ಸವಕ್ಕೆ ಹೋಗಿರಲಿಲ್ಲ.
4. ಮಧುಚಂದ್ರದ ದಿನಗಳಲ್ಲಿ ಮದುಮಗ ಮುಹಮ್ಮದ್ ﷺ ರವರು ತಮ್ಮ ಪ್ರೀತಿಯ ಪತ್ನಿ ಖದೀಜ (ರ) ಬೀವಿಯವರಲ್ಲಿ ನಾನು ಲಾತವನ್ನು, ಉಝ್ಝವನ್ನು ಯಾವತ್ತೂ ಆರಾಧಿಸುದಿಲ್ಲ, ನಮಸ್ಕರಿಸುವುದು ಇಲ್ಲ ಎಂದು ಹೇಳಿದಾಗ ಖದೀಜ (ರ) ಬೀವಿಯವರು ನೀವು ಲಾತವನ್ನೂ, ಉಝ್ಝ ಎರಡನ್ನು ವಿರೋಧಿಸಿರಿ ಎಂದು ಹೇಳಿದರು.
ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ಇರುವ ಪವಿತ್ರತೆಯ ಪ್ರಮಾಣಗಳಾಗಿವೆ ಇವುಗಳು.
ಕತ್ತಲು ತುಂಬಿದ ವಾತಾವರಣದಲ್ಲಿ ಸೂರ್ಯ ತೇಜಸ್ಸಿನ ಹಾಗೆ ಪ್ರಜ್ವಲಿಸುತ್ತಿರುವ ಮುಹಮ್ಮದ್ ﷺ ಎಂಬ ಯುವಕ. ಸಾಮಾಜಿಕ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ನ್ಯಾಯಯುತವಾಗಿ ಪರಿಹಾರಗಳು ನೀಡಿದ ಘಟನೆಗಳ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
(ಮುಂದುವರಿಯುವುದು…)
Part-17/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 17
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿತ್ವವಾಗಿತ್ತು ಪುಣ್ಯ ಪ್ರವಾದಿಯವರದ್ದು ﷺ ಮಕ್ಕಾ ಪಟ್ಟಣದಲ್ಲಿಯೂ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಬಹಳಷ್ಟು ವರ್ಷಗಳಿಂದ ಜನಾಂಗೀಯ ಗಲಭೆಗಳು ನಡೆಯುತ್ತಲೇ ಇತ್ತು.
ಹರ್’ಬುಲ್ ಫಿಜಾರ್ ಅಥವಾ ಪುಂಡರ ಯುದ್ಧ ಎಂದಾಗಿತ್ತು ಚರಿತ್ರೆಗಳಲ್ಲಿ ಅದನ್ನು ಕರೆಯಲ್ಪಟ್ಟದ್ದು. ಅಂದು ಪ್ರವಾದಿವಾರ್ಯರಿಗೆ ﷺ 15 ವರ್ಷ ಪ್ರಾಯವಾಗಿತ್ತು. ಒಂದು ಭಾಗದಲ್ಲಿ ಖುರೈಷಿಗಳು ಹಾಗೂ ಕಿನಾನ ಜನಾಂಗವಾದರೆ ಮತ್ತೊಂದು ಭಾಗದಲ್ಲಿ ಹವಾಸಿಲ್ ಪ್ರದೇಶದ ಖೈಸ್ – ಅಯಲಾನ್ ಜನಾಂಗ ಒಂದನೇ ಗುಂಪಿನ ನಾಯಕ ಹರ್’ಬ್ ಬಿನ್ ಉಮಯ್ಯ ಎನ್ನುವವರಾಗಿದ್ದರು. ಮಕ್ಕಾದ ಸುಪ್ರಸಿದ್ಧ ಉಕ್ಕಾಲ್ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಆಶ್ರಯ ನೀಡಿದ್ದಾಗಿತ್ತು ಯುದ್ದಕ್ಕೆ ಕಾರಣವಾದದ್ದು.
ನಾಲ್ಕು ಯುದ್ಧಗಳು ನಡೆದಿತ್ತು, ನಾಲ್ಕನೇ ಯುದ್ದಕ್ಕೆ ಪ್ರವಾದಿವರ್ಯರು ﷺ ತಮ್ಮ ಚಿಕ್ಕಪ್ಪರೊಂದಿಗೆ ಯುದ್ದಕ್ಕೆ ತೆರಳಿದ್ದರು. ಆದರೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಚದುರಿದ ಬಾಣಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತಿದ್ದರು ಅದರ ನಡುವೆ ಕೆಲವೊಂದು ಬಿಲ್ಲುಗಾರಿಕೆ ನಡೆಸಬೇಕಾಗಿಯು ಬಂದಿತ್ತು. ಆದರೆ ಅದೂ ಕೂಡ ಬೇಕಾಗಿರಲಿಲ್ಲ ಎನ್ನುವ ಅಭಿಪ್ರಾಯವನ್ನು ನಂತರದ ದಿನಗಳಲ್ಲಿ ಪ್ರವಾದಿವರ್ಯರು ﷺ ಹೇಳುತ್ತಿದ್ದರು.
ಯುದ್ಧದ ಪ್ರಾರಂಭದಲ್ಲಿ ಮದ್ಯಾಹ್ನದ ಮೊದಲು ಹವಾಸಿಲ್ ಜನಾಂಗಕ್ಕಾಗಿತ್ತು ಜಯ ಸಿಕ್ಕಿದ್ದು, ಆದರೆ ಮಧ್ಯಾಹ್ನದ ನಂತರ ಖುರೈಷಿಗಳು ಜಯ ಸಾಧಿಸಿದರು.
ನ್ಯಾಯ ಖುರೈಷಿಗಳ ಭಾಗದಲ್ಲಿದ್ದರೂ ಕೂಡ ಅವರೇ ಆಗಿತ್ತು ಸಂಧಾನಕ್ಕೆ ಪ್ರಯತ್ನ ಪಟ್ಟದ್ದು. ಶಾಶ್ವತವಾಗಿ ಈ ರಕ್ತಪಾತಕೊಂದು ಪೂರ್ಣವಿರಾಮ ಹಾಕಬೇಕೆಂದು ಅವರು ಆಗ್ರಹಿಸಿದರು. ಸೇನಾಧಿಪತಿ ಉತ್’ಬತ್ ಬಿನ್ ರಬೀಅ ನೇರವಾಗಿ ಕಣಕ್ಕಿಳಿದು ಎರಡು ಬಣಗಳ ನಡುವೆ ಕೆಲವು ದೃಢನಿಶ್ಚಯಗಳನ್ನು ಮಾಡಿಕೊಂಡರು. ಸಮಸ್ಯೆಗಳು ಸಂಪೂರ್ಣವಾಗಿ ಶಾಂತವಾಯಿತು ಅಷ್ಟೊತ್ತಿಗೆ ಪ್ರವಾದಿಯವರು ವಯಸ್ಸು 20 ದಾಟಿತ್ತು.
ಕೆಲವೊಂದು ಸಾಮಾಜಿಕ ವಾಸ್ತವಗಳನ್ನು ನೇರವಾಗಿ ಅನುಭವಿಸಲು ಪ್ರವಾದಿವರ್ಯರಿಗೆ ﷺ ಅವಕಾಶ ಲಭಿಸಿತ್ತು.
ಅವರ ಧೈರ್ಯ ಹಾಗೂ ಸಾಮರ್ಥ್ಯದ ಕುರಿತು ಜೊತೆಯಲ್ಲಿದ್ದವರಿಗೆ ಮನವರಿಕೆಯಾಯಿತು. ನಂತರದ ದಿನಗಳಲ್ಲಿ ಪ್ರವಾದಿವರ್ಯರು ﷺ ಅವರ ಕಾರ್ಯಾಚರಣೆಗಳ ಕುರಿತು ನೆನಪಿಸುಕೊಳ್ಳುತ್ತಾ, ಅದರ ಕುರಿತು ತಮ್ಮ ಅನುಯಾಯಿಗಳಿಗೆ ತಿಳಿಸುತ್ತಿದ್ದರು.
ನಂತರದ ದಿನಗಳಲ್ಲಿ ಮಕ್ಕಾ ಪಟ್ಟಣದಲ್ಲಿ ಒಂದು ಒಪ್ಪಂದವನ್ನು ಮಾಡಲಾಯಿತು. “ಹಿಲ್’ಫುಲ್ ಫುಳೂಲ್” ಎಂದಾಗಿತ್ತು ಆ ಒಪ್ಪಂದದ ಹೆಸರು. ಶಾಂತಿಯನ್ನು ಬಯಸುವ ಒಂದು ಜನಕೂಟವಾಗಿತ್ತು ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟದ್ದು.
ಭವಿಷ್ಯದಲ್ಲಿ ಯಾವುದೇ ರೀತಿಯ ಯುದ್ಧ ಅಥವಾ ಇತರ ಅಕ್ರಮಗಳು ನಡೆಯದ ಹಾಗೆ ತಡೆಯುದಾಗಿತ್ತು ಇದರ ಬಹಳ ಪ್ರಮುಖ ಉದ್ದೇಶ. ಇದಕ್ಕಿದ್ದ ಮುಖ್ಯ ಕಾರಣವೇನೆಂದರೆ ಝುಬೈದ್ ಜನಾಂಗಕ್ಕೆ ಸೇರಿದ ಒಬ್ಬ ವ್ಯಕ್ತಿ ತನ್ನ ವ್ಯಾಪಾರ ಸಾಮಗ್ರಿಗಳೊಂದಿಗೆ ಮಕ್ಕಾ ಪಟ್ಟಣಕ್ಕೆ ತಲುಪಿದಾಗ ಮಕ್ಕಾದ ನಾಯಕನಾಗಿದ್ದ ಅಸ್ವ್ ಬಿನ್ ವಾಯಿಲ್ ಆ ಸರಕುಗಳಿಗೆ ಒಂದು ಬೆಲೆಯನ್ನು ನಿಶ್ಚಯಿಸಿದರು ಆದರೆ ಮೋಸಗಾರನಾದ ವಾಯಿಲ್ ಸರಕುಗಳನ್ನು ಪಡೆದುಕೊಂಡು ಅದಕ್ಕೆ ಕ್ರಯ ನೀಡದೆ ತನ್ನ ಅಹಂಕಾರವನ್ನು ತೋರಿಸಿದರು.
ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿ ಮಕ್ಕದ ಇತರ ಪ್ರಮುಖರೊಂದಿಗೆ ತನ್ನ ಸಮಸ್ಯೆಯನ್ನು ತೋರಿಕೊಂಡರೂ ಯಾರೂ ಕೂಡ ವಾಯಿಲ್ ಅವರಿಂದ ಹಣ ಕೇಳುವ ಪ್ರಯತ್ನಕ್ಕೆ ಹೋಗಲಿಲ್ಲ. ಅವರು ಮಕ್ಕಾದಲ್ಲಿದ್ದ ಬಂಡವಾಳಶಾಹಿಗಳ ಶೋಷಣೆಗೆ ಸಂಕೇತವಾಗಿದ್ದರು.
ನೊಂದ ವ್ಯಾಪಾರಿ ಒಂದು ಉಪಾಯವನ್ನು ಪ್ರಯೋಗಿಸಿದರು. ಮರು ದಿವಸ ಮುಂಜಾನೆ ಕಅಬಲಾಯದ ಸಮೀಪದಲ್ಲಿದ್ದ ಅಬೂಖುಬೈಸ್ ಬೆಟ್ಟದ ಮೇಲೆ ಹತ್ತಿ ಮಕ್ಕಾದಲ್ಲಿ ತನಗಾದ ಅನ್ಯಾಯವನ್ನು ಒಂದು ಕವಿತೆಯ ರೂಪದಲ್ಲಿ ಹಾಡಿದರು.
ಒಬ್ಬ ಮಕ್ಕಾ ನಿವಾಸಿಯಿಂದ ತನಗಾದ ಅನ್ಯಾಯವನ್ನು ತಿಳಿಸುವ ಸಾಲುಗಳಾಗಿತ್ತು ಅದು. ಮಕ್ಕಾದ ಗಣ್ಯರೆಲ್ಲರೂ ಕಅಬಾಲಯದ ಪಕ್ಕದಲ್ಲಿ ಕುಳಿತು ಮಾತುಕತೆ ನಡೆಸುವ ಸಮಯವಾಗಿದ್ದ ಕಾರಣ ಅವರೆಲ್ಲರೂ ಆ ಸಾಲುಗಳನ್ನು ಕೇಳಿದರು. ಮಕ್ಕಾ ನಿವಾಸಿಯಾದ ವ್ಯಕ್ತಿ, ಪರ ಊರಿನ ವ್ಯಾಪಾರಿಯನ್ನು ವಂಚಿಸಿದ ವಿಷಯ ತಿಳಿದು ಎಲ್ಲರಿಗೂ ಬಹಳಷ್ಟು ಬೇಸರವಾಯಿತು. ಸ್ವಾಭಿಮಾನಿಯಾಗಿದ್ದ ಪ್ರವಾದಿವರ್ಯರ ﷺ ಚಿಕ್ಕಪ್ಪ ಝುಬೈರ್’ರವರು ತಕ್ಷಣ ಎದ್ದು ನಿಂತು “ಇನ್ನು ಆತನನ್ನು ಹಾಗೆ ಬಿಟ್ಟು ಬಿಡಬಾರದು” ಎಂದು ಹೇಳಿ ಇತರರನ್ನು ಒಗ್ಗೂಡಿಸಿದರು, ಮಕ್ಕಾದ ಪ್ರಮುಖ ಗಣ್ಯರೆಲ್ಲರೂ ಬಂದು ಸೇರಿದರು.
ಅಬ್ದುಲ್ಲಾಹ್ ಬಿನ್ ಜುದ್ಆನ್’ರವರ ಮನೆಯಲ್ಲಿ ಇದರ ಕುರಿತು ಒಂದು ಸಭೆ ನಡೆಸಲಾಯಿತು.
“ಸಂತ್ರಸ್ತರು ಯಾರೇ ಆಗಿರಲಿ ಅವರಿಗೆ ಮಕ್ಕಾದಲ್ಲಿಯೇ ನ್ಯಾಯ ಸಿಗಬೇಕು, ನ್ಯಾಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು, ನಮ್ಮೆಡೆಯಲ್ಲಿ ಇದರ ಕುರಿತು ಒಂದು ದೃಢ ನಿಶ್ಚಯ ಮಾಡಿಕೊಳ್ಳಬೇಕು, ಸಮುದ್ರದಲ್ಲಿ ಒಂದು ಬಿಂದು ನೀರು ಬಾಕಿಯಾಗುವವರೆಗೂ ಈ ಪ್ರತಿಜ್ಞೆ ಬಾಕಿಯಾಗಿರಬೇಕು, ಹಿರಾ, ಸಬೀರ್ ಬೆಟ್ಟಗಳು ಚಲಿಸುವವರೆಗೂ ಈ ಒಪ್ಪಂದ ಉಳಿಯಬೇಕು.” ಎಂದು ವಿಷಯಗಳ ಕುರಿತು ಝುಬೈರ್ ಭಾಷಣ ಮಾಡಿದರು.
ಎಲ್ಲಾ ಜನಾಂಗದ ನಾಯಕರೂ ಇದಕ್ಕೆ ಒಪ್ಪಿಗೆ ನೀಡಿದರು. ಆಹಾರ ಸೇವನೆಯ ನಂತರ ಒಪ್ಪಂದಕ್ಕೆ ಸಹಿ ಹಾಕಿದರು. ಒಬ್ಬೊಬ್ಬರಾಗಿ ಅಸ್ವ್ ಬಿನ್ ವಾಯಿಲ್’ನ ಮನೆಗೆ ತೆರಳಿ ವ್ಯಾಪಾರಿಯ ಎಲ್ಲಾ ಸರಕುಗಳನ್ನು ಹಿಂತಿರುಗಿಸಿದರು. ಅದರೊಂದಿಗೆ, ‘ಹಿಲ್‌ಫುಲ್ ಫುಳೂಲ್’ ಶಾಂತಿ ಮೈತ್ರಿ ಒಪ್ಪಂದವು ಜಾರಿಗೆ ಬಂದಿತು.
ಈ ಒಪ್ಪಂದದಲ್ಲಿ ತಮ್ಮ ಚಿಕ್ಕಪ್ಪರೊಂದಿಗೆ ಪ್ರಧಾನ ಪಾತ್ರ ವಹಿಸಿದ್ದೆ ಪುಣ್ಯ ಪ್ರವಾದಿವರ್ಯರಾಗಿದ್ದರು ﷺ ಪ್ರಪಂಚದಾದ್ಯಂತ ನ್ಯಾಯವನ್ನು ಸ್ಥಾಪಿಸಬೇಕಾದ ಮಹಾನ್ ವ್ಯಕ್ತಿ ತಮ್ಮ ಯೌವನದಲ್ಲಿಯೇ ಶಾಂತಿಸ್ಥಾಪಕನಾಗಿದ್ದರು.
(ಮುಂದುವರೆಯುವುದು…)
Part-18/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 18
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ನಂತರದ ದಿನಗಳಲ್ಲಿ ಶಾಂತಿ ಒಪ್ಪಂದದ ಕುರಿತು ಬಹಳ ಆವೇಶದಿಂದ ಪ್ರವಾದಿವರ್ಯರು ﷺ ಹೇಳುತ್ತಿದ್ದರು.
ನಾನು ಯುವಕನಾಗಿದ್ದಾಗ ನನ್ನ ಚಿಕ್ಕಪ್ಪರೊಂದಿಗೆ ನಾನು ಕೂಡ ಆ ಮೈತ್ರಿಯಲ್ಲಿ ಭಾಗವಹಿಸಿದ್ದೆ. ಕೆಂಪು ಒಂಟೆಗಳ ಹಿಂಡುಗಳನ್ನು ನೀಡುದಕ್ಕಿಂತಲೂ ಹೆಚ್ಚು ನನಗೆ ಅದು ಸಂತೋಷವಾಗಿತ್ತು. ಮತ್ತೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು ಅಬ್ದುಲ್ಲಾಹಿ ಬಿನ್ ಜುದ್ ಅವರ ಮನೆಯಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಲು ನಾನು ಕೂಡ ಜೊತೆ ಸೇರಿದ್ದೆ ಅಂತಹ ಒಪ್ಪಂದಕ್ಕೆ ಇಸ್ಲಾಮನ್ನು ಆಹ್ವಾನಿಸಿದರೂ ನಾನು ಒಪ್ಪಿಗೆ ಕೊಡುತ್ತೇನೆ ಎಂದು.
ಈ ಒಪ್ಪಂದದ ಕಾರಣ ಮಕ್ಕಾ ಪಟ್ಟಣದಲ್ಲಿ ಬಹಳಷ್ಟು ಒಳಿತುಗಳು ನಡೆಯಿತು ಹಲವಾರು ಹಿಂಸಾಚಾರ ತಡೆಯಲ್ಪಟ್ಟಿತು.
ಅವುಗಳಲ್ಲಿ ಒಂದು ಘಟನೆಯನ್ನು ಈ ರೀತಿ ವಿವರಿಸಬಹುದು ಖಸ್ಅಂ ಜನಾಂಗದ ಒಬ್ಬ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಮಕ್ಕಾ ಪಟ್ಟಣಕ್ಕೆ ಬಂದಿದ್ದರು ತೀರ್ಥಯಾತ್ರೆಗೆ ಆಗಿತ್ತು ಬಂದದ್ದು. ಅವರ ಅಲ್ ಖತೂಲ್ ಎನ್ನುವ ಸುಂದರಿ ಮಗಳನ್ನು ನಬೀಹ್ ಎನ್ನುವ ದುಷ್ಟ ಅಪಹರಿಸಿ ಕೊಂಡೋದನು. ಯಾತ್ರಿಕರು ಸಂಪೂರ್ಣವಾಗಿ ಭಯಭೀತರಾಗಿದ್ದರು ಯಾರಲ್ಲಿ ದೂರು ಕೊಡುವುದು ಎಂದು ತಿಳಿಯದೆ ಗೊಂದಲಕ್ಕೊಳಗಾದರು. ತಕ್ಷಣವೇ ಫುಳೂಲ್ ಒಪ್ಪಂದಕ್ಕೆ ಸಹಿ ಹಾಕಿದ ವ್ಯಕ್ತಿಗಳಲ್ಲಿ ದೂರ ನೀಡೋಣ ಎಂದು ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯು ತಿಳಿಸಿದರು.
ಅದೇ ರೀತಿ ಕಅಬಾದ ಸಮೀಪ ಬಂದು ಒಪ್ಪಂದಕ್ಕೆ ಸಹಿ ಹಾಕಿದವರನ್ನು ಕೂಗಿ ಕರೆದರು. ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವರೇ.! ಬನ್ನಿರಿ.! ನಮಗೆ ಸಹಾಯ ಮಾಡಿರಿ ಎಂದು ಹೇಳಿದಾಗ ಒಪ್ಪಂದದಲ್ಲಿ ಭಾಗವಹಿಸಿದವರು ಹತ್ತಿರ ಓಡಿ ಬಂದರು. ಅವರು ದೂರು ನೀಡಿದ ವ್ಯಕ್ತಿಗೆ ಸಹಾಯದ ಭರವಸೆ ಕೊಟ್ಟು ಗುಂಪಿನೊಂದಿಗೆ ಆಯುಧವನ್ನು ತೆಗೆದುಕೊಂಡು ನಬೀಹ್’ನ ಮನೆಗೆ ತೆರಳಿ ಅವರ ಜನಾಂಗದ ಸಹಾಯದೊಂದಿಗೆ ಆ ಹೆಣ್ಣು ಮಗಳನ್ನು ಬಿಟ್ಟು ಬಿಡಲು ಆಗ್ರಹಿಸಿದರು.
ಫುಳೂಲ್ ಒಪ್ಪಂದದ ಕುರಿತು ನೆನಪಿಸಿದಾಗ ವಿಧಿ ಇಲ್ಲದೆ ನಬೀಹ್ ನಾನು ಆ ಹುಡುಗಿಯನ್ನು ಬಿಟ್ಟು ಬಿಡುತ್ತೇನೆ ಆದರೆ ಈ ಒಂದು ರಾತ್ರಿ ಅವಳನ್ನು ನನಗೆ ಬಿಟ್ಟು ಕೊಡಿ ಎಂದು ಹೇಳಿದಾಗ ನಾಯಕರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಒಂದು ಒಂಟೆಗೆ ಹಾಲುಣಿಸುವಷ್ಟು ಸಮಯವು ಕೂಡ ಅನುಮತಿಸುವುದಿಲ್ಲ ಎಂದು ನಾಯಕರು ಹೇಳಿದಾಗ ಬೇರೆ ದಾರಿಯಿಲ್ಲದೆ ಅವನು ಆ ಹೆಣ್ಣು ಮಗಳನ್ನು ಬಿಟ್ಟು ಕೊಟ್ಟನು.
ಅರೇಬಿಯಾದ ಸಾಂಸ್ಕೃತಿಕ ಭೂಮಿಯಲ್ಲಿ ನ್ಯಾಯದ ಪ್ರಕಾಶವನ್ನು ನೀಡಲು ಪುಣ್ಯ ಪ್ರವಾದಿವರ್ಯರಿಗೆ ﷺ ಸಣ್ಣ ವಯಸ್ಸಿನಲ್ಲೇ ಅವಕಾಶ ಲಭಿಸಿತ್ತು.
ಒಂದೊಂದು ದಿವಸದ ಒಂದೊಂದು ಘಟನೆಗಳು ಕೂಡ ಪುಣ್ಯ ಪ್ರವಾದಿಯವರನ್ನು ﷺ ಮಕ್ಕಾದಲ್ಲಿ ಉನ್ನತ ವ್ಯಕ್ತಿತ್ವವಾಗಿ ತೋರಿಸುತ್ತಲೇ ಇತ್ತು.
ಮಕ್ಕಾ ಪಟ್ಟಣದ ಹಲವಾರು ಜನರಿಗೆ ಪ್ರವಾದಿವರ್ಯರನ್ನು ﷺ ಕಾಣದ ದಿವಸ ನಿರಾಸೆಯ ದಿನಗಳಾಗಿತ್ತು. ಪ್ರವಾದಿವರ್ಯರು ﷺ ಭಾಗವಹಿಸಿದ ಕಾರ್ಯಕ್ರಮದಲ್ಲಿ ಕಳೆಯೇ ಇರುತ್ತಿರಲಿಲ್ಲ.
ಸ್ವಂತ ಜೀವನದ ಖರ್ಚುಗಳಿಗೆ ಯಾರನ್ನೂ ಅವಲಂಬಿಸದ ಜೀವನ ಶೈಲಿಯಾಗಿತ್ತಲ್ಲವೇ ಪುಣ್ಯ ಪ್ರವಾದಿಯವರ ﷺ ಜೀವನ ಶೈಲಿ. ಪಶುಪಾಲನೆಯ ಕಸುಬಿಗೆ ಸೇರಿದ್ದು ಕೂಡ ಅದೇ ಕಾರಣಕ್ಕಲ್ಲವೇ.? ಈಗ ಪ್ರವಾದಿವರ್ಯರ ﷺ ವಯಸ್ಸು 24 ದಾಟಿತು. ಅಬೂತ್ವಾಲಿಬರು ಪ್ರವಾದಿಯವರನ್ನು ﷺ ವ್ಯಾಪಾರಕ್ಕೆ ಆಹ್ವಾನಿಸಿದರು.
ಪ್ರಮುಖ ವ್ಯಾಪಾರಿಯಾಗಿದ್ದ ಖದೀಜರವರ (ರ) ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರವಾದಿಯವರಿಗೆ ﷺ ಲಭಿಸಿತು. ಪಶುಪಾಲನೆಯ ಕಣಿವೆಗಳಿಂದ ಜನನಿಬಿಡ ಮಾರುಕಟ್ಟೆಗೆಯಾಗಿತ್ತು ಪ್ರವಾದಿವರ್ಯರ ﷺ ಯಾತ್ರೆ. ಭವಿಷ್ಯದಲ್ಲಿ ನಿಭಾಯಿಸಬೇಕಾದ ಜವಾಬ್ದಾರಿಗಳಿಗೆ ಸೃಷ್ಟಿಕರ್ತನು ಸಿದ್ಧಪಡಿಸಿದ ತರಬೇತಿ ಕೂಡ ಆಗಿತ್ತು ಅದು.
ಪುಣ್ಯ ಪ್ರವಾದಿಯವರ ﷺ ವ್ಯಾಪಾರ ಯಾತ್ರೆಗೆ ಕೆಲವು ಹಿನ್ನೆಲೆಗಳೂ ಕೂಡ ಇತ್ತು. ಖದೀಜರವರ (ರ) ಸೇವಕಿ ನಫೀಸ ಬಿಂತ್ ಮುನ್’ಯಅತ್ ಈ ರೀತಿ ವಿವರಿಸುತ್ತಾರೆ.
ದುಲ್ ಹಜ್ಜ್ 14 ರ ಒಂದು ದಿನ ಅಂದು ಪ್ರವಾದಿವರ್ಯರು ﷺ 25 ರ ಹರೆಯದ ಯುವಕ. ಅಲ್ ಅಮೀನ್ ಎನ್ನುವ ಹೆಸರಿನಿಂದಾಗಿತ್ತು ಮಕ್ಕಾ ನಿವಾಸಿಗಳು ಪ್ರವಾದಿವರ್ಯರನ್ನು ﷺ ಕರೆಯುತ್ತಿದ್ದದ್ದು ಅಬೂತ್ವಾಲಿಬರು ಪ್ರವಾದಿಯವರನ್ನು ﷺ ಕರೆದು ಮಗನೇ ನಮ್ಮ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ ತಾನೇ.? ಅರ್ಥಿಕವಾಗಿ ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ವ್ಯಾಪಾರ ಹಾಗೂ ಇತರ ಕಸುಬುಗಳು ಕೂಡ ಸಂಕಷ್ಟದಲ್ಲಿದೆ. ಈಗ ಶಾಮ್ ನಗರಕ್ಕೆ ಜನರು ವ್ಯಾಪಾರಕ್ಕೆಂದು ತೆರಳುತ್ತಿದ್ದಾರೆ.
ಖುವೈಲಿದ ಮಗಳು ಖದೀಜರವರು (ರ) ನಮ್ಮ ಕುಟುಂಬದ ಬಹಳಷ್ಟು ಜನರಿಗೆ ಅವರ ವ್ಯಾಪಾರ ಸಾಮಾಗ್ರಿಗಳನ್ನು ಕೊಟ್ಟು ವ್ಯಾಪಾರಕ್ಕೆ ಕಳುಹಿಸುತ್ತಿದ್ದಾರೆ ಮಗನು ಒಮ್ಮೆ ಅವರನ್ನು ಭೇಟಿಯಾದರೆ ಒಳ್ಳೆದಿತ್ತು. ಅವರು ಮಗನ ಕೋರಿಕೆಯನ್ನು ತಿರಸ್ಕರಿಸಲಾರರು, ಮಕ್ಕಾದಲ್ಲಿ ಮಗನಿಗೆ ಇರುವ ಅಂಗೀಕಾರದ ಕುರಿತು ಅವರಿಗೆ ಖಂಡಿತ ತಿಳಿದಿರುತ್ತದೆ. ನಿಜ ಹೇಳಬೇಕೆಂದರೆ ಮಗನನ್ನು ಶಾಮಿಗೆ ಕಳುಹಿಸಲು ನನಗೆ ಭಯವಿದೆ, ಯಹೂದಿಗಳು ಯಾರಾದರೂ ಗುರುತು ಹಿಡಿದರೆ.?
ಅಥವಾ ಏನಾದರೂ ಆಪತ್ತು ಸಂಭವಿಸಿದರೆ.? ಎನ್ನುವ ಚಿಂತೆ ಇದ್ದರೂ ಕೂಡ ಏನು ಮಾಡುವುದು ನಮಗೆ ಬೇರೆ ದಾರಿಯೂ ಇಲ್ಲ ಅಲ್ವಾ.?
ಖುವೈಲಿದ್’ರ ಮಗಳು ಮಕ್ಕಾದಲ್ಲಿ ಹೆಸರುವಾಸಿಯಾದ ಪ್ರಮುಖ ವ್ಯಾಪಾರಿಯಾಗಿದ್ದರು. ಮಕ್ಕದಿಂದ ಹೊರಡುವ ವ್ಯಾಪಾರ ಸಂಘದ ಒಂಟೆಗಳಲ್ಲಿ ಬಹು ದೊಡ್ಡಪಾಲು ಅವರದಾಗಿತ್ತು. ಅವರು ಪ್ರತಿನಿಧಿಗಳನ್ನು ನಿಯೋಗಿಸಿ ವ್ಯಾಪಾರ ಸಾಮಗ್ರಿಗಳನ್ನು ಶಾಮ್’ಗೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ವೇತನ ನಿಗದಿ ಪಡಿಸಿ ಕಳುಹಿಸಿದರೆ ಇನ್ನು ಕೆಲವೊಮ್ಮೆ ಲಾಭಾಂಶ ನೀಡುತ್ತೇನೆ ಎಂದು ಹೇಳಿ ಕಳುಹಿಸುತ್ತಿದ್ದರು.
ಪ್ರವಾದಿವರ್ಯರು ﷺ ದೊಡ್ಡಪ್ಪರ ಆ ಸಲಹೆಯನ್ನು ತಿರಸ್ಕರಿಸಿ ಖದೀಜರವರಿಗೆ ನನ್ನ ಅವಶ್ಯಕತೆ ಇದ್ದರೆ ನನ್ನನ್ನು ಕರೆಸಿಕೊಳ್ಳಲಿ ನಾನು ಅವರ ಪ್ರತಿನಿಧಿಯಾಗಿ ಹೋಗುತ್ತೇನೆ ಎಂದು ಹೇಳಿದಾಗ, ಮಗನೇ ಅವರು ಬೇರೆ ಯಾರನ್ನಾದರೂ ಒಪ್ಪಿಕೊಂಡರೆ ಏನು ಮಾಡುವುದು.
ನಮ್ಮ ನೀರೀಕ್ಷೆಗಳೆಲ್ಲವೂ ಕೈತಪ್ಪಿ ಹೋಗುತ್ತದೆ ಎಂದು ಅಬೂತ್ವಾಲಿಬರು ಮುಹಮ್ಮದ್ ﷺ ಮಗನಲ್ಲಿ ಹೇಳಿದರು. ಈ ವಿಷಯ ಹೇಗೋ ಏನೋ ಖದೀಜರವರ ಕಿವಿಗೆ ಬಿತ್ತು ಮುಹಮ್ಮದ್ ﷺ ರವರು ನನ್ನ ವ್ಯಾಪಾರವನ್ನು ನಿಭಾಯಿಸುವರೆಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿ ಒಬ್ಬರನ್ನು ಕಳುಹಿಸಿ ಅವರ ನಿವಾಸಕ್ಕೆ ಕರೆಸಿಕೊಂಡರು.
ನಿಮ್ಮ ನಿಷ್ಠೆ ಹಾಗೂ ವ್ಯಕ್ತಿತ್ವದ ಕುರಿತು ನನಗೆ ಚೆನ್ನಾಗಿ ತಿಳಿದಿದೆ, ನೀವು ನನ್ನ ವ್ಯಾಪಾರ ಸಂಘವನ್ನು ಮುನ್ನಡೆಸಲು ಒಪ್ಪಿಕೊಳ್ಳುದಾದರೆ ಇತರರಿಗೆ ನೀಡದಕ್ಕಿಂತ ದುಪ್ಪಟ್ಟು ವೇತನವನ್ನು ನಿಮಗೆ ನೀಡುತ್ತೇನೆ ಎಂದು ಖದೀಜರವರು ಹೇಳಿದಾಗ ಪ್ರವಾದಿವರ್ಯರು ﷺ ಅದಕ್ಕೆ ಒಪ್ಪಿಗೆ ನೀಡಿದರು.
ನಂತರ ಅಬೂತ್ವಲಿಬಾರಿಗೆ ವಿಷಯವನ್ನು ತಿಳಿಸಿದಾಗ ಅವರಿಗೆ ಬಹಳಷ್ಟು ಸಂತೋಷವಾಯಿತು. ಮಗನೇ ಅಲ್ಲಾಹನು ನೀಡಿದ ಉತ್ತಮ ಅವಕಾಶವಾಗಿದೆ ಇದು, ಅವನು ಅನುಗ್ರಹಿಸಿದ ಜೀವನೋಪಾಯವಾಗಿದೆ ಇದು ಎಂದು ಹೇಳಿದರು. ಪ್ರವಾದಿವರ್ಯರು ﷺ ಖದೀಜರವರ (ರ) ವ್ಯಾಪಾರ ಸಾಮಗ್ರಿಗಳೊಂದಿಗೆ ಸಿರಿಯಾ ನಗರಕ್ಕೆ ತೆರಳಲು ತೀರ್ಮಾನಿಸಿದರು….
(ಮುಂದುವರಿಯುವುದು)
Part-19/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 19
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಖದೀಜ (ರ) ತಮ್ಮ ಸೇವಕರಾದ ಮೈಸರನನ್ನು ಕರೆದು ಪ್ರವಾದಿಯವರ ﷺ ಜೊತೆಯಲ್ಲಿ ಕಳುಹಿಸಿದರು.
ಮೈಸರನಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಲಾಗಿತ್ತು. ನೀನು ಅವರನ್ನು ಸಂಪೂರ್ಣವಾಗಿ ಅನುಸರಿಸಬೇಕು, ಅವರು ಏನೇ ಹೇಳಿದರೂ ಅದನ್ನು ತಿರಸ್ಕರಿಸಬಾರದು ಎಂದು ಖದೀಜರವರು (ರ) ಹೇಳಿದಾಗ ಮೈಸರ ಅದಕ್ಕೆ ಸರಿ ಎಂದು ಉತ್ತರಿಸಿದನು.
ಇತ್ತ ಅಬೂತ್ವಾಲಿಬರು ಕೂಡ ತಮ್ಮ ಮಗನಿಗೆ ಬೇಕಾದ ಉಪದೇಶ ನೀಡಿ ಯಾತ್ರೆ ಕಳುಹಿಸಿದರು. ಯಾತ್ರೆಯ ಗುಂಪಿನಲ್ಲಿ ಪ್ರವಾದಿಯವರ ﷺ ಚಿಕ್ಕಪ್ಪ ಝುಬೈರ್ ಕೂಡ ಜೊತೆಯಲ್ಲಿದ್ದರು. ಮುಹಮ್ಮದ್ ﷺ ಮಗನನ್ನು ಪ್ರತ್ಯೇಕವಾಗಿ ಗಮನ ಹರಿಸಬೇಕೆಂಬ ನಿರ್ದೇಶನದಿಂದಾಗಿತ್ತು ಝುಬೈರ್’ರವರನ್ನು ಜೊತೆಯಲ್ಲಿ ಕಳುಹಿಸಿದ್ದು.
ಮೈಸರ ಬಹಳ ಶ್ರದ್ಧೆಯಿಂದ ಪ್ರವಾದಿವರ್ಯರನ್ನು ﷺ ಅನುಸರಿಸುತ್ತಿದ್ದನು. ಯಾತ್ರೆಯ ಆರಂಭದಿಂದಲೇ ನಡೆಯುತ್ತಿದ್ದ ಅದ್ಭುತ ವಿಸ್ಮಯಗಳನ್ನು ಗಮನಿಸುತ್ತಿದ್ದನು. ಪ್ರವಾದಿವರ್ಯರು ﷺ ಸಂಚರಿಸುವಾಗ ಮೋಡ ನೆರಳು ನೀಡುತ್ತಿತ್ತು, ಕೆಲವು ಸಂದರ್ಭದಲ್ಲಿ ಎರಡು ಮಲಕ್’ಗಳು (ಫರಿಶ್ತ , angel ) ಪ್ರತ್ಯೇಕವಾದ ನೆರಳು ನೀಡುತ್ತಿದ್ದವು. ಹೀಗೆ ಇದೆಲ್ಲವನ್ನು ಗಮನಿಸುತ್ತಾ ಸಿರಿಯಾದ ಬುಸ್ವ್’ರ ಪಟ್ಟಣಕ್ಕೆ ತಲುಪಿದ ನಂತರ ಅಲ್ಲಿ ಒಂದು ಮರದ ಕೆಳಗೆ ಡೇರೆ ಹಾಕಿ ವಿಶ್ರಾಂತಿ ಪಡೆಯ ತೊಡಗಿದರು.
ಅಲ್ಲೇ ಪಕ್ಕದಲ್ಲಿ “ನಸ್’ತೂರಾ” ಎನ್ನುವ ಪುರೋಹಿತರಿದ್ದರು ಮೈಸರನಿಗೆ ಮೊದಲೇ ಅವರ ಪರಿಚಯ ಕೂಡ ಇತ್ತು. ಅವರು ಮುಹಮ್ಮದರನ್ನು ﷺ ಬಹಳ ಗಂಭೀರವಾಗಿ ನಿರೀಕ್ಷಿಸುತ್ತಿದ್ದರು ನಂತರ ಆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು ಯಾರೆಂದು ಮೈಸರನಲ್ಲಿ ಪುರೋಹಿತ ಕೇಳಿದಾಗ ಅದು ಖುರೈಷ್ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆ, ಹರಮಿನಲ್ಲಾಗಿದೆ ಅವರ ವಾಸ ಸ್ಥಳ ಎಂದು ಮೈಸರ ಉತ್ತರಿಸಿದನು. ಓಹ್ ಹೌದಾ ಈ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುವ ವ್ಯಕ್ತಿಯು ಅಂತ್ಯ ಪ್ರವಾದಿಯಾಗಿರಲು ಹೆಚ್ಚಿನ ಸಾಧ್ಯತೆಯಿದೆ ಎಂದು ನಮ್ಮ ಪೂರ್ವಕರಾದ ಪಂಡಿತರು ಹೇಳುತಿದ್ದರು.
ಅವರ ಕಣ್ಣುಗಳಲ್ಲಿರುವ ಕೆಂಪು ಛಾಯೆಯನ್ನು ನೋಡಿದ್ದೀರಾ.? ನೋಡಿದ್ದೇನೆ ಎಂದು ಮೈಸರ ಹೇಳಿದಾಗ, ಅದು ಯಾವಾಗಲೂ ಇರುತ್ತದೆಯೇ.? ಪುನಃ ಆ ಪಂಡಿತರು ಕೇಳಿದರು. ಹೌದು ಯಾವಾಗಲೂ ಇರುತ್ತದೆ ಅದು ಬದಲಾದದ್ದು ನಾನು ಕಂಡಿಲ್ಲ ಹೀಗೆ ಮೈಸರನಲ್ಲಿ ಹಲವಾರು ಲಕ್ಷಣಗಳನ್ನು ಪಂಡಿತರು ಕೇಳಿ ತಿಳಿದ ನಂತರ ಇದು ಖಂಡಿತ ಅಂತ್ಯ ಪ್ರವಾದಿಯವರೇ ಆಗಿರುತ್ತಾರೆ ಇವರನ್ನು ನಿಯೋಗಿಸಲ್ಪಡುವ ಸಂದರ್ಭದಲ್ಲಿ ಬಹುಶಃ ನಾನು ಇರುತ್ತಿದ್ದರೆ ಒಳ್ಳೆದಿತ್ತು ಎಂದು ಹೇಳಿದರು.
ಮತ್ತೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು ಪ್ರವಾದಿವರ್ಯರು ﷺ ಮರದ ಬಳಿ ತಲುಪುದಕ್ಕೂ ಮೊದಲೇ ನಸ್’ತೂರ ಅವರನ್ನು ಗಮನಿಸುತ್ತಲೇ ಇದ್ದರು.
ಕಾರ್ಮೋಡ ನೆರಳು ನೀಡುತ್ತಿದ್ದದ್ದನ್ನು ಪ್ರತ್ಯೇಕವಾಗಿ ಗಮನಿಸಿದ್ದರು, ಮರದ ಕೆಳಗೆ ವಿಶ್ರಾಂತಿ ಪಡೆಯಲು ಮುಂದಾದಾಗ ಕುತೂಹಲ ಅಧಿಕವಾಯಿತು ನಂತರ ಮೈಸರನಿಂದ ವಿಷಯಗಳನ್ನು ಕೇಳಿ ತಿಳಿದು ಪ್ರವಾದಿವರ್ಯರನ್ನು ﷺ ಭೇಟಿಯಾಗಲು ಆಶ್ರಮದಿಂದ ಹೊರಟರು. ಬಹಳ ಗೌರವ ಪೂರಕವಾಗಿ ಪ್ರವಾದಿಯವರ ﷺ ನೆತ್ತಿಯ ಮೇಲೆ ಹಾಗೂ ಪಾದಗಳಿಗೆ ಮುತ್ತಿಟ್ಟು ಈ ರೀತಿ ಹೇಳಿದರು “ನಾನು ತಮ್ಮನ್ನು ಸಂಪೂರ್ಣವಾಗಿ ವಿಶ್ವಾಸವಿರಿಸುತ್ತೇನೆ.
ತೌರಾತಿನಲ್ಲಿ ಉಲ್ಲೇಖಿಸಿದ ಪ್ರವಾದಿಯವರು ﷺ ತಾವೇ ಆಗಿರುತ್ತೀರಿ ಎಂದು ನಾನು ಗುರುತಿಸಿದ್ದೇನೆ.” ಎಂದು ಹೇಳುತ್ತಾ ನನಗೆ ಅಂತ್ಯ ಪ್ರವಾದಿಯವರ ಲಕ್ಷಣಗಳಲ್ಲಿ ಒಂದನ್ನು ಬಿಟ್ಟು ಬಾಕಿ ಎಲ್ಲವೂ ಅರ್ಥವಾಯಿತು ದಯವಿಟ್ಟು ತಮ್ಮ ಭುಜವನ್ನು ಒಮ್ಮೆ ತೋರಿಸುವಿರೇ ಎಂದು ಕೇಳಿದಾಗ ಪುಣ್ಯ ಪ್ರವಾದಿಯವರು ﷺ ತಮ್ಮ ಭುಜವನ್ನು ತೋರಿಸಿದರು. ಬಹಳಷ್ಟು ಹೊಳಪಿನಿಂದ ಶೋಭಿಸುತ್ತಿದ್ದ ಪ್ರವಾದಿತ್ವದ ಮುದ್ರೆಯನ್ನು ಕಂಡು ಪ್ರವಾದಿವಾರ್ಯರನ್ನು ﷺ ಬಹಳ ಗೌರವದಿಂದ ಚುಂಬಿಸಿ ಸತ್ಯ ವಚನವನ್ನು ಸ್ವೀಕರಿಸುತ್ತಾ ಮರಿಯಮ್ (ರ) ಅವರ ಮಗನಾದ ಪ್ರವಾದಿ ಈಸರವರು (ಅ) ಮುನ್ಸೂಚನೆ ನೀಡಿದ ಆ ಸತ್ಯದೂತರು ತಾವೇ ಆಗಿರುವಿರಿ, ಈ ಮರದ ಕೆಳಗೆ ಒಂದು ದಿನ ಖಂಡಿತ ವಿಶ್ರಾಂತಿ ಪಡೆಯುತ್ತೀರಿ ಎನ್ನುವ ಮುನ್ಸೂಚನೆ ನೀಡಿದ್ದನ್ನು ಪೂರ್ವಿಕರಾದ ಪಂಡಿತರು ನಮಗೆ ಕಲಿಸಿದ್ದಾರೆ ಎಂದೂ ಹೇಳಿದರು.
ವಿವಿಧ ಅನುಭವಗಳಿಗೆ ಸಾಕ್ಷಿಯಾಗುತ್ತಾ ಮೈಸರ ಹೇಗೋ ಪ್ರವಾದಿಯವರೊಂದಿಗೆ ﷺ ಸಿರಿಯ ನಗರಕ್ಕೆ ತಲುಪಿದರು.
ವ್ಯಾಪಾರ ಅಂದುಕೊಂಡದ್ದಕ್ಕಿಂತ ಅಧಿಕವಾಗಿತ್ತು. ವಹಿವಾಟಿನ ಸಮಯದಲ್ಲಿ ಮತ್ತೊಂದು ಘಟನೆ ನಡೆಯಿತು ಅದೇನೆಂದರೆ ವ್ಯಾಪಾರದ ನಡುವೆ ವ್ಯಾಪಾರ ಸರಕುಗಳ ವಿಷಯದಲ್ಲಿ ಒಬ್ಬರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು ಆ ಸಂದರ್ಭದಲ್ಲಿ ಆ ವ್ಯಕ್ತಿಯು ಲಾತವನ್ನು, ಹುಝ್ಝವನ್ನು ಮುಂದೆ ನಿಲ್ಲಿಸಿ ಸತ್ಯ ಹಿಡಿದರು. ಅದನ್ನು ಕೇಳಿದ ತಕ್ಷಣ ನಾನು ನನ್ನ ಜೀವನದಲ್ಲಿ ಒಂದು ಬಾರಿಯ ಕೂಡ ಅವುಗಳ ಮೇಲೆ ಸತ್ಯ ಹಾಕಲಿಲ್ಲ, ನನ್ನ ಊರಿನಲ್ಲೂ ಕೂಡ ಅದನ್ನು ಕಂಡ ತಕ್ಷಣವೇ ಹಿಂತಿರುಗುತ್ತಿದ್ದೆ ಎಂದು ಪ್ರವಾದಿವರ್ಯರು ಆ ವ್ಯಕ್ತಿಯಲ್ಲಿ ಹೇಳಿದಾಗ ಇವರ ಮಾತಿನಲ್ಲಿ ಏನೋ ಪ್ರತ್ಯೇಕತೆ ಇದೆ ಎಂದೆನಿಸಿ ಆ ವ್ಯಕ್ತಿಯು ತಕ್ಷಣವೇ ಮೈಸರನನ್ನು ಭೇಟಿಯಾಗಿ ಇವರು ನಮ್ಮ ವೇದ ಗ್ರಂಥದಲ್ಲಿ ಹೇಳಿದ ಅಂತ್ಯ ಪ್ರವಾದಿಯವರಾಗಿದ್ದಾರೆ ಎಂದು ಹೇಳಿದರು.
ಮೈಸರ ಎಲ್ಲಾ ಘಟನೆಗಳನ್ನು ವೀಕ್ಷಿಸುತ್ತಾ ಬಹಳಷ್ಟು ಶ್ರದ್ಧೆಯಿಂದಲೇ ಜೊತೆಯಲ್ಲಿ ಸಂಚರಿಸ ತೊಡಗಿದರು.
ಈ ಬಾರಿಯ ವ್ಯಾಪಾರದಲ್ಲಿ ಅವರಿಗೆ ಉತ್ತಮ ಲಾಭ ಲಭಿಸಿತ್ತು. ಇದನ್ನು ಕಂಡ ಮೈಸರ ಪ್ರವಾದಿವರ್ಯರಲ್ಲಿ ﷺ ಹೇಳಿದರು ನಾವು ಬಹಳಷ್ಟು ಬಾರಿ ಖದೀಜರವರ (ರ) ಸರಕುಗಳೊಂದಿಗೆ ವ್ಯಾಪಾರಕ್ಕೆ ಬಂದಿದ್ದೇವೆ ಆದರೆ ಯಾವತ್ತೂ ಇಷ್ಟೊಂದು ಲಾಭ ಸಿಕ್ಕಿರಲಿಲ್ಲ ಎಂದು.
ಮೈಸರನು ಪ್ರವಾದಿಯವರ ﷺ ಬಳಿ ತಾನೊಬ್ಬ ಸೇವಕನ ರೀತಿಯಲ್ಲಿ ವರ್ತಿಸುತಿದ್ದರು ಈಗ ಮೈಸರನ ಮನಸ್ಸಿನಲ್ಲಿ ಪ್ರವಾದಿವರ್ಯರ ﷺ ಮೇಲಿದ್ದ ಗೌರವ, ಸ್ನೇಹ ಅಧಿಕವಾಯಿತು.
ಹೀಗೆ ಯಾತ್ರಾ ಸಂಘವು ಮಕ್ಕಾ ಪಟ್ಟಣಕ್ಕೆ ಯಾತ್ರೆ ತಿರುಗಿಸಿದರು. ಮರಳಿ ಬರುತ್ತಿರುವಾಗಳೂ ಮೋಡ ನೆರಳು ನೀಡುತ್ತಿದ್ದದ್ದನ್ನು ಮೈಸರ ನೋಡುತ್ತಲೇ ಇದ್ದರು, ಮಕ್ಕಾ ಪಟ್ಟಣಕ್ಕೆ ಹೊರಟಿದ್ದ ಒಂಟೆಯ ಗುಂಪಿನಲ್ಲಿ ಪ್ರವಾದಿವರ್ಯರು ﷺ ಮುಂದಿನ ಸಾಲಿನಲ್ಲಾಗಿತ್ತು ಸಂಚರಿಸುತ್ತಿದ್ದದ್ದು ಮೈಸರ ಹಿಂದಿನ ಸಾಲಿನಲ್ಲಿ ಚಲಿಸುತ್ತಿದ್ದರು. ಯಾತ್ರೆಯ ನಡುವೆ ಮೈಸರ ಪ್ರಯಾಣಿಸುತ್ತಿದ್ದ ಎರಡು ಒಂಟೆಗಳು ಅಸ್ವಸ್ಥಗೊಂಡವು.ಅವುಗಳಿಗೆ ನಡೆಯಲು ಕೂಡ ಸಾಧ್ಯವಾಗಲಿಲ್ಲ ಮೈಸರ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದರು ಕೊನೆಗೆ ಪ್ರವಾದಿಯವರಿಗೆ ﷺ ವಿಷಯ ತಲುಪಿಸಲಾಯಿತು.
ತಕ್ಷಣವೇ ಪ್ರವಾದಿವರ್ಯರು ﷺ ಬಂದು ಏನೋ ಕೆಲವೊಂದನ್ನು ಮಂತ್ರಿಸಿ ಒಂಟೆಯನೊಮ್ಮೆ ತಟ್ಟಿದರು. ಏನದ್ಭುತ ನಂತರ ಆ ಒಂಟೆಗಳು ಉತ್ತಮ ಆರೋಗ್ಯದೊಂದಿಗೆ ಯಾತ್ರೆ ಸಂಘದ ಮೊದಲ ಸಾಲಿನಲ್ಲಿ ಚಲಿಸತೊಡಗಿತು..
(ಮುಂದುವರೆಯುತ್ತಿದೆ…)
Part-20/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 20
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವ್ಯಾಪಾರ ಸಂಘವು ಮಕ್ಕಾ ಪಟ್ಟಣಕ್ಕೆ ತಲುಪುವುದರಲ್ಲಿದೆ, ಯಾತ್ರೆಯಲ್ಲಿ ಕಂಡ ಎಲ್ಲಾ ವಿಸ್ಮಯಗಳನ್ನೂ ಮೈಸರ ತನ್ನ ಮನಸ್ಸಿನಲ್ಲಿ ಜೋಪಾನವಾಗಿ ಇಟ್ಟಿದ್ದಾನೆ.
ಆ ನೆನಪುಗಳು ಮೈಸರನನ್ನು ಸಂಪೂರ್ಣವಾಗಿ ಆವರಿಸಿದೆ. ಯಾತ್ರಾ ಸಂಘವು ‘ಇಸ್’ಫಾನ್’ ಕಣಿವೆಯನ್ನು ದಾಟಿ ‘ಮರ್’ರುಳಹ್’ರಾನ್’ ಅಥವಾ ‘ವಾದಿ ಫಾತಿಮಾ’ ಎನ್ನುವ ಸ್ಥಳಕ್ಕೆ ತಲುಪಿತು. ಅಷ್ಟೊತ್ತಿಗೆ ಮೈಸರ ಪ್ರವಾದಿವರ್ಯರ ﷺ ಬಳಿ ಬಂದು “ಓ ಬಹುಮಾನ್ಯರೇ ತಾವು ಆದಷ್ಟು ಬೇಗನೆ ಖದೀಜರವರ (ರ) ಬಳಿ ತೆರಳಿ ಯಾತ್ರೆಯ ಎಲ್ಲಾ ವಿವರಗಳನ್ನು ಅಧಿಕೃತವಾಗಿ ತಿಳಿಸಿರಿ, ಒಡತಿಗೆ ಬಹಳಷ್ಟು ಸಂತೋಷವಾಗಬಹುದು” ಎಂದು ಹೇಳಿದನು.
ಮೈಸರನಿಗೆ ಮೊದಲೇ ತಿಳಿದಿದ್ದ ಪ್ರಕಾರ ಪ್ರವಾದಿವರ್ಯರಿಗೆ ﷺ ಎರಡು ಒಂಟೆಯಾಗಿತ್ತು ವೇತನವಾಗಿ ನಿಶ್ಚಯಿಸಿದ್ದದ್ದು. ಆದರೆ ಅದಕ್ಕಿಂತಲೂ ಅಧಿಕ ವೇತನ ಲಭಿಸಬೇಕೆಂದಾಗಿತ್ತು ಮೈಸರನು ಆಗ್ರಹಿಸಿದ್ದು ಹಾಗಾಗಿ ಹೀಗೆ ಸಲಹೆ ಕೊಟ್ಟಿದ್ದನು.
ಪ್ರವಾದಿವರ್ಯರು ﷺ ಮೈಸರನ ಸಲಹೆಯನ್ನು ಸ್ವೀಕರಿಸಿ ಖದೀಜ (ರ) ಬೀವಿಯವರ ವಸತಿಯನ್ನು ಲಕ್ಷ್ಯವಿರಿಸಿ ಮುಂದೆ ಸಾಗಿದರು. ಮದ್ಯಾಹ್ನದ ಹೊತ್ತಿಗೆ ಛಾವಣಿಯ ಮೇಲೆ ತಮ್ಮ ಗೆಳೆತಿಯರೊಂದಿಗೆ ಕುಳಿತಿದ್ದ ಸಮಯದಲ್ಲಿ ದೂರದಿಂದ ಕೆಂಪು ಒಂಟೆಯೊಂದು ಮನೆಯ ಮುಂಭಾಗಕ್ಕೆ ತಲುಪಿತು.
ಪುಣ್ಯ ಪ್ರವಾದಿಯವರು ﷺ ಯಾತ್ರೆ ಮಾಡಿದ ಒಂಟೆಯಾಗಿತ್ತು ಅದು. ಅವರ ಮುಖವು ಬಹಳ ಅಭಿಮಾನದಿಂದ, ಪ್ರಸನ್ನತೆಯಿಂದ ಕೂಡಿತ್ತು. ತಕ್ಷಣವೇ ಖದೀಜರವರು (ರ) ಅಲ್ ಅಮೀನರಿಗೆ (ಪ್ರವಾದಿವರ್ಯರು) ಮೋಡ ನೆರಳು ನೀಡುತ್ತಾ ಒಟ್ಟಿಗೆ ಸಂಚರಿಸುತ್ತಿದ್ದದ್ದನ್ನು ಗಮನಿಸಿ ಬಹಳ ಕುತೂಹಲದಿಂದ ಅದನ್ನು ನೋಡುತ್ತಾ ನಿಂತರು.
ಪ್ರವಾದಿವರ್ಯರು ﷺ ಖದೀಜರವರ (ರ) ಮನೆಯೊಳಗೆ ಪ್ರವೇಶಿಸಿದರು. ಹೌದು ಸೌಂದರ್ಯದ ಪ್ರತೀಕವಾದ ಪುಣ್ಯ ಪ್ರವಾದಿಯವರು ﷺ ಮಕ್ಕಾದ ಸುಂದರಿಯೂ, ರಾಣಿಯೂ ಆದ ಖದೀಜಬೀವಿಯವರ (ರ) ಮನೆಗೆ ತಲುಪಿದರು.
ಬಹಳ ವಿನಮ್ರತೆಯಿಂದಾಗಿತ್ತು ಮನೆಯೊಳಗೆ ಸ್ವೀಕರಿಸಿದ್ದು. ಖದೀಜರಿಗೆ (ರ) ವ್ಯಾಪಾರದ ವಿಷಯಗಳನ್ನು ತಿಳಿಯುದಕ್ಕೂ ಮೊದಲು ಒಂದು ವಿಷಯವನ್ನು ತಿಳಿಯಬೇಕಿತ್ತು, ಅದು ಇನ್ಯಾವುದು ಅಲ್ಲ ಮೋಡ ನೆರಳು ನೀಡುತ್ತಿದ್ದ ವಿಷಯವಾಗಿತ್ತು. ಅದಕ್ಕೆ ಅವರೊಂದು ಉಪಾಯ ಪ್ರಯೋಗಿಸಿದರು. ಮೈಸರ ಎಲ್ಲಿ.? ಎಂದು ಪ್ರವಾದಿಯವರಲ್ಲಿ ﷺ ಕೇಳಿದಾಗ. ಪಕ್ಕದಲ್ಲೇ ಇರುವ ಕಣಿವೆಯ ಬಳಿ ತಲುಪಿದ್ದಾರೆ ಎಂದು ಉತ್ತರಿಸಿದರು.
ಅದಕ್ಕೆ ಬೀವಿಯವರು ಅವರಲ್ಲಿ ಇಲ್ಲಿಗೆ ಬೇಗ ಬರಲು ಹೇಳುತ್ತೀರ.? ಎಂದು ವಿನಂತಿಸಿದರು. ಕಾರಣ ಮೋಡವು ನೆರಳು ನೀಡುತ್ತಿದ್ದ ವಿಷಯವನ್ನು ಸ್ಪಷ್ಟವಾಗಿ ತಿಳಿಯಲು ಮಾಡಿದ ಉಪಯವಾಗಿತ್ತಲ್ಲವೇ ಇದು. ಪ್ರವಾದಿಯವರು ﷺ ಒಂಟೆಯ ಮೇಲೆ ಹತ್ತಿ ತಿರುಗಿ ಹೋದರು. ಖದೀಜ (ರ) ಪುನಃ ಛಾವಣಿಯ ಬಳಿ ನಿಂತು ದೃಶ್ಯವನ್ನು ವೀಕ್ಷಿಸುತ್ತಿದ್ದರು. ತಡಮಾಡದೆ ಪ್ರವಾದಿಯವರು ﷺ ಹಾಗೂ ಮೈಸರ ಮನೆಗೆ ಬಂದು ತಲುಪಿದರು. ಖದೀಜರು (ರ) ವ್ಯಾವಹಾರದ ವಿಷಯಗಳಿಗಿಂತ ಅಲ್ ಅಮೀನರ ಜೊತೆಗಿನ ಪ್ರವಾಸದ ಕುರಿತು ತಿಳಿದುಕೊಳ್ಳುವ ಆತುರದಿಂದ ವಿಷಯವನ್ನು ಕೇಳಿದಾಗ ಮೈಸರನು ಬಹಳ ಆವೇಶದಿಂದ ಉತ್ತರಿಸಿದನು.
ಪ್ರವಾದಿಯವರ ﷺ ಉತ್ತಮವಾದ ಗುಣ ನಡತೆಗಳನ್ನು, ಅದ್ಭುತ ವಿಸ್ಮಯಗಳನ್ನು ಹೀಗೆ ಹಲವಾರು ಘಟನೆಗಳ ಕುರಿತು ಹೇಳಿದನು
ಜೊತೆಗೆ ಖದೀಜರು ಕಂಡ ಮೋಡ ನೆರಳು ನೀಡುವ ದೃಶ್ಯವನ್ನೂ ಕೂಡ ಸೇರಿಸಿ ಹೇಳಿದನು. ಮೈಸರಿನಿಗೆ ಆ ದೃಶ್ಯಗಳನ್ನು ಕಂಡು ಅಭ್ಯಾಸವಾಗಿತ್ತು. ನಸ್’ತೂರ ಪುರೋಹಿತರ ಕುರಿತು ಹಾಗೂ ಅವರು ಹೇಳಿದ ಮುನ್ಸೂಚನೆಯ ಕುರಿತು ಕೂಡ ಹೇಳಿದನು. ಎಲ್ಲವನ್ನೂ ಗಮನವಿಟ್ಟು ಕೇಳಿದ ಖದೀಜರಿಗೆ ಮನಸ್ಸಿನಲ್ಲಿ ಕೆಲವೊಂದು ಅದೃಷ್ಟದ ಭರವಸೆಯು ಮೂಡಿತು.
ಪ್ರವಾದಿವರ್ಯರಿಗೆ ﷺ ಅತ್ಯುನ್ನತ ಉಡುಗೊರೆಗಳ ಜೊತೆಯಲ್ಲಿ ನಾಲ್ಕು ಒಂಟೆಗಳನ್ನು ಕೂಡ ಕೊಟ್ಟು ಕಳುಹಿಸಿದರು. ಇದರ ಕುರಿತು ಗ್ರಂಥಗಳಲ್ಲಿ ಉಲ್ಲೇಖವಿದೆ.
“ತಿಹಾಮದಲ್ಲಿರುವ” ಹಬಾಶ ಮಾರುಕಟ್ಟೆಗೆ ತೆರಳಿದ್ದ ವ್ಯಾಪಾರ ಯಾತ್ರೆಯ ಕುರಿತು ಕೂಡ ಚರಿತ್ರೆಯಲ್ಲಿ ಉಲ್ಲೇಖವಿದೆ. ಜುರಶ್ ಎನ್ನುವ ಹೆಸರು ಕೂಡ ಆ ಸ್ಥಳದ ಕುರಿತು ಪ್ರಯೋಗಿಸಿದ್ದೂ ಕಾಣಬಹುದು. ಒಂದೊಂದು ವ್ಯಾಪಾರ ಯಾತ್ರೆಗೂ ಒಂದೊಂದು ಹೆಣ್ಣು ಒಂಟೆ ಉಡುಗೊರೆಯಾಗಿ ಲಭಿಸುತ್ತಿತ್ತು.
ಪ್ರವಾದಿವರ್ಯರಿಗೆ ﷺ ಲಭಿಸಿದ ಸಂಪತ್ತುಗಳನ್ನು ತಮಗಾಗಿ ಮಾತ್ರ ಉಪಯೋಗಿಸಿತ್ತಿರಲಿಲ್ಲ ಬದಲಾಗಿ ತಮ್ಮ ದೊಡ್ಡಪ್ಪರ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದಲೂ ಆಗಿತ್ತು.
ಕೆಲವು ರಹಸ್ಯಗಳು ಕೂಡ ಇದರಲ್ಲಿ ಅಡಗಿದೆ ಅದೇನೆಂದರೆ ಅಬೂತ್ವಾಲಿಬರಿಂದ ಪುಣ್ಯ ಪ್ರವಾದಿಯವರಿಗೆ ﷺ ಲಭಿಸಿದ ಅನುಗ್ರಹಗಳನ್ನು ತೀರಿಸಲು ಅಲ್ಲಾಹನು ನೀಡಿದ ಉತ್ತಮ ಅವಕಾಶವು ಕೂಡ ಇದಾಗಿತ್ತು. ಪ್ರವಾದಿವರ್ಯರು ﷺ ತಮ್ಮ ಪ್ರಬೋಧನೆಯ ದಾರಿಯನ್ನು ಸ್ವೀಕರಿಸುವಾಗ ಯಾರ ಋಣದ ಹಂಗಿನಲ್ಲೂ ಇರಬಾರದು ಎನ್ನುದಾಗಿತ್ತು ಇದರ ಹಿಂದಿನ ಉದ್ದೇಶ. ಕಾರಣ ಅತ್ಯಧಿಕ ಉಪಕಾರ ಮಾಡಿದ ಅಬೂತ್ವಾಲಿಬರೂ ಕೂಡ ಪುಣ್ಯ ಪ್ರವಾದಿಯವರ ﷺ ಋಣದ ಹಂಗಿನಲ್ಲಿದ್ದರು.
ಯಾರಾದರೂ ಒಂದು ಉಪಕಾರ ಮಾಡಿದರೆ ಅದಕ್ಕಿಂತ ಹೆಚ್ಚಾಗಿ ಅವರಿಗೆ ಪ್ರತ್ಯುಪಕಾರ ಮಾಡಬೇಕು, ಯಾರಾದರೂ ಒಂದು ಉಡುಗೊರೆ ನೀಡಿದರೆ ಅದಕ್ಕಿಂತಲೂ ಉತ್ತಮವಾದ ಉಡುಗೊರೆ ಅವರಿಗೆ ನೀಡಬೇಕು, ಯಾರಾದರೂ ಹೊಗಳಿದರೆ ಜಿಪುನತನವಿಲ್ಲದೆ ಒಳ್ಳೆಯ ಸಂತೋಷದ ಮಾತುಗಳನ್ನು ಅವರಿಗೆ ತಿರುಗಿ ಹೇಳಬೇಕು. ಇವೆಲ್ಲವೂ ಪುಣ್ಯ ಪ್ರವಾದಿಯವರು ﷺ ತಮ್ಮ ಜೀವನದ ಮೂಲಕ ಕಲಿಸಿಕೊಟ್ಟ ಆದರ್ಶಗಳಾಗಿದೆ. ಪ್ರವಾದಿವರ್ಯರ ﷺ ನೈಜ ಅನುಯಾಯಿಗಳು ಇವತ್ತಿಗೂ ಅದನ್ನು ಹಿಂಬಾಲಿಸುತ್ತಿದ್ದಾರೆ.
ಪ್ರವಾದಿವರ್ಯರು ﷺ ಯೌವನದ ಕಾಂತಿಯಲ್ಲಿ ಸೌಂದರ್ಯದ ಪ್ರತಿರೂಪವಾಗಿ ಬೆಳಗುತ್ತಿದ್ದಾರೆ.
ಈಗ ಪ್ರವಾದಿವರ್ಯರಿಗೆ ﷺ ಇಪ್ಪತ್ತೈದು ವರ್ಷ ಪ್ರಾಯ. ಸಾಮಾನ್ಯವಾಗಿ ಮದುವೆಯಾಗುವ ವಯಸ್ಸು. ಮದುಮಗನ ವಯಸ್ಸಿಗೆ ಬಂದಿರುವ ಪುಣ್ಯ ಪ್ರವಾದಿಯವರ ﷺ ಸೌಂದರ್ಯವನ್ನು ಒಮ್ಮೆ ತಿಳಿದುಕೊಂಡರೆ ಹೇಗೆ?
(ಮುಂದುವರಿಯುವುದು…)
Part-21/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 21
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಪುಣ್ಯ ಪ್ರವಾದಿಯವರ ﷺ ಸೌಂದರ್ಯವು ವರ್ಣನಾತೀತವಾಗಿದೆ, ಪ್ರವಾದಿವರ್ಯರ ﷺ ಸೌಂದರ್ಯದ ಕುರಿತು ಬರೆದು ಮುಗಿಸಲು ಅಥವಾ ಹೇಳಿ ಮುಗಿಸಲು ಎಂದಿಗೂ ಸಾಧ್ಯವಿಲ್ಲ.
ಇಡೀ ಜಗತ್ತಿನಲ್ಲೇ ಅವರ ಸೌಂದರ್ಯದ ಕುರಿತು ತಿಳಿಯಲ್ಪಟ್ಟಷ್ಟು, ಬರೆಯಲ್ಪಟ್ಟಷ್ಟು ಇನ್ಯಾರ ಕುರಿತು ಇಷ್ಟೊಂದು ತಿಳಿಯಲ್ಪಟ್ಟಿಲ್ಲ. ಇವತ್ತಿಗೂ ಲಕ್ಷಾಂತರ ಜನರು ಪ್ರವಾದಿವರ್ಯರ ﷺ ಸೌಂದರ್ಯ ಕುರಿತು ಕಲಿಯುತ್ತಲಿದ್ದಾರೆ. ಶೈಕ್ಷಣಿಕ ಪಠ್ಯಕ್ರಮದ ಪ್ರಮುಖ ಭಾಗವಾಗಿ ವಿಶ್ಲೇಷಿಸಲ್ಪಟ್ಟಿದೆ. ಪ್ರವಾದಿಯವರನ್ನು ﷺ ಪ್ರತ್ಯಕ್ಷವಾಗಿ ಕಂಡು ತಿಳಿದವರಿಂದ ಹಿಡಿದು ಪರಂಪರೆ ತಪ್ಪದೆ ಅವರ ಸೌಂದರ್ಯದ ಕುರಿತು ಪರಿಚಯಿಸಲಾಗಿದೆ.
ಭೌತಿಕವಾಗಿ ಪ್ರವಾದಿಯವರು ﷺ ಮರಣಹೊಂದಿ ಒಂದೂವರೆ ಸಹಸ್ರಮಾನ ಕಳೆದರೂ ಕೂಡ ಅವರ ಸೌಂದರ್ಯದ ಕುರಿತು ಇವತ್ತಿಗೂ ಬಹಳ ಕುತೂಹಲದಿಂದ ವಿವರಿಸಲಾಗುತ್ತಿದೆ. ಒಂದೇ ಒಂದು ಪ್ರತಿಮೆಯೋ, ಚಿತ್ರವೋ ಇಲ್ಲದೆ ಕೋಟ್ಯಂತರ ಹೃದಯಗಳಲ್ಲಿ ಆ ವಿಶ್ವ ಸೌಂದರ್ಯವು ಹೊಳೆಯುತ್ತಲಿದೆ.
ಹೀಗೆ ಇರುವ ಒಂದು ವ್ಯಕ್ತಿತ್ವದ ಸೌಂದರ್ಯವನ್ನು ಹೇಗೆ ವಿವರಿಸುವುದು. ಪ್ರಾಮಾಣಿಕವಾಗಿ ಗ್ರಂಥಗಳಲ್ಲಿ ದಾಖಲಿಸಲಾದ ಉಲ್ಲೇಖಗಳ ಕುರಿತು ತಿಳಿಯಬಹುದು ಎಂದು ಮಾತ್ರ.
ಪ್ರವಾದಿವರ್ಯರ ﷺ ಸೌಂದರ್ಯದ ಕುರಿತು ಸಣ್ಣ ಮಟ್ಟಿಗೆ ತಿಳಿಯಲು ಪ್ರಯತ್ನಿಸೋಣ. ಅದನ್ನು ಮೀರಿ ಹೀಗೇ ಎಂದು ಬರೆಯಲು ಯಾರೊಬ್ಬರಿಗೂ ಸಾಧ್ಯವಿಲ್ಲ. ಪ್ರವಾದಿವರ್ಯರ ﷺ ಕುರಿತು ಸರಳವಾಗಿ ನಮಗೆ ಈ ರೀತಿ ತಿಳಿಯಬಹುದು.
ಪ್ರವಾದಿವರ್ಯರು ﷺ ಆಂತರಿಕವಾಗಿಯೂ, ಬಾಹ್ಯಾವಾಗಿಯೂ ಸೌಂದರ್ಯದ ಗಣಿಯಾಗಿದ್ದರು, ಪ್ರವಾದಿವಾರ್ಯರಿಗೆ ﷺ ಮಾತ್ರ ಪ್ರತ್ಯೇಕವಾಗಿ ಇದ್ದ ಸೌಂದರ್ಯದ ಭವ್ಯತೆ ಅವರ ಮುಖದಲ್ಲಿ ಯಾವಾಗಲೂ ಎದ್ದು ಕಾಣುತ್ತಿತ್ತು.
ಅವರ ಪವಿತ್ರ ಶರೀರದಲ್ಲಿ ಕೊರತೆಯಿದೆ ಎಂದೋ ಅಥವಾ ಅಧಿಕವಾಗಿದೆ ಎಂದೋ ಹೇಳುವಂತ ಯಾವುದೇ ವಿಷಯ ಇರಲಿಲ್ಲ. ಕೆಂಪು ಮಿಶ್ರಿತ ಶ್ವೇತ ವರ್ಣದ ಜೊತೆಯಲ್ಲಿ ಚಿನ್ನ, ಬೆಳ್ಳಿಯನ್ನು ಒಟ್ಟಿಗೆ ಸೇರಿಸಿ ನಯಗೊಳಿಸಿದ ಹಾಗೆ ಹೊಳಪು. ಶರೀರದ ರೋಮವಿಲ್ಲದ ಭಾಗಗಳಿಂದ ಪ್ರಕಾಶಗಳು ಹೊರ ಹೊಮ್ಮುತ್ತಿತ್ತು, ಪ್ರವಾದಿವರ್ಯರ ﷺ ಉಪಸ್ಥಿತಿಯಿಂದ ಸುತ್ತಮುತ್ತಲಿನ ಪರಿಸರವೂ ಕೂಡ ಪ್ರಕಾಶಿಸುತ್ತಿತ್ತು. ಪ್ರವಾದಿವರ್ಯರು ﷺ ಎತ್ತರದ ವ್ಯಕ್ತಿಯೋ ಗಿಡ್ಡ ವ್ಯಕ್ತಿಯೋ ಆಗಿರಲಿಲ್ಲ, ಆದರೆ ಒಂದು ಸಭೆಯಲ್ಲಿ ಕುಳಿತುಕೊಂಡಾಗ ಬಹಳ ಎತ್ತರವಾಗಿ ಕಾಣುತ್ತಿದುದು ಮಾತ್ರ ಅವರೇ ಆಗಿದ್ದರು.
ಒಂದು ಗುಂಪಿನಲ್ಲಿ ಪ್ರವಾದಿವರ್ಯರು ﷺ ಜೊತೆಯಲ್ಲಿದ್ದರೆ ಪ್ರವಾದಿಯವರನ್ನು ﷺ ಬಿಟ್ಟು ಬಾಕಿಯಿರುವವರೆಲ್ಲರೂ ಗಿಡ್ಡವಾಗಿಯೇ ಕಾಣುತ್ತಿದ್ದರು. ಆ ಪವಿತ್ರ ಶರೀರದಿಂದ ಭವ್ಯತೆಯುವ ಯಾವಾಗಲೂ ಹೊರಹೊಮ್ಮುತ್ತಿತ್ತು.
ಅಧಿಕ ದಪ್ಪವಿರುವ ಶರೀರವಾಗಿರಲಿಲ್ಲ ಹಾಗಂತ ತೆಳ್ಳಗಿನ ವ್ಯಕ್ತಿಯೆಂದೋ, ದಪ್ಪವಿರುವ ವ್ಯಕ್ತಿಯೆಂದೋ ಹೇಳಲು ಸಾಧ್ಯವಿಲ್ಲ ಅವರೊಂದು ಸಾಧಾರಣ ಶರೀರದ ವ್ಯಕ್ತಿಯಾಗಿದ್ದರು. ಅವರ ಮುಪ್ಪಿನ ಕಾಲದಲ್ಲಿ ಶರೀರವು ಅಲ್ಪ ಪುಷ್ಟಿಯಾಗಿತ್ತು ಆದರೆ ಸ್ನಾಯುಗಳ ಶಕ್ತಿ ಕುಗ್ಗಿರಲಿಲ್ಲ, ಶರೀರದಲ್ಲಿ ವಯಸ್ಸಿನ ಗುರುತೂ ಇರಲಿಲ್ಲ, ಯಾವುದೇ ಕಾಲವಾಗಲಿ, ಹವಾಮಾನವಾಗಲಿ ದೇಹದ ಸೌಂದರ್ಯವನ್ನು ಕುಗ್ಗಿಸಿರಲಿಲ್ಲ, ಯಾವಾಗಲೂ ಪ್ರಕಾಶದಿಂದ ಜ್ವಲಿಸುತ್ತಿದ್ದರು
ಹುಣ್ಣಿಮೆ ಚಂದ್ರನನ್ನು ಹೋಲುವ ಮುಖ, ಪ್ರವಾದಿವರ್ಯರನ್ನು ﷺ ವಿವರಿಸಿದವರೆಲ್ಲರೂ ಹುಣ್ಣಿಮೆ ಚಂದ್ರನನ್ನು ಉದಾಹರಣೆಯಾಗಿ ನೀಡಿದ್ದಾರೆ ಅದು ಅಲಂಕಾರಕ್ಕಾಗಿ ಆಗಿರಲಿಲ್ಲ ಬದಲಾಗಿ ಅವರಿಗೆ ಪ್ರವಾದಿವರ್ಯರ ﷺ ಮುಖದ ವರ್ಣನೆಯನ್ನೂ, ಭವ್ಯತೆಯನ್ನು ಪರಿಚಯಿಸಲು ಬೇರೆ ಉದಾಹರಣೆ ಸಿಗದ ಕಾರಣವಾಗಿತ್ತು.
ಹೊಳೆಯುವ ಹಣೆ, ಬೆಳಕು ಚೆಲ್ಲುತ್ತಿದ್ದ ಕೆನ್ನೆಗಳಾಗಿತ್ತು ಅವರದ್ದು. ಪ್ರವಾದಿವರ್ಯರ ﷺ ಸೌಂದರ್ಯದ ಕುರಿತು ಜಾಬಿರ್ (ರ) ರವರು ಹೀಗೆ ಹೇಳುತ್ತಾರೆ. ಒಂದು ದಿನ ಹುಣ್ಣಿಮೆ ರಾತ್ರಿಯಲ್ಲಿ ಕೆಂಪು ವಸ್ತ್ರಧಾರಿಯಾಗಿ ಪ್ರವಾದಿಯವರು ﷺ ಬಂದಿದ್ದರು, ನಾನು ಅವರ ಭವ್ಯತೆಯಿರುವ ಮುಖವನೊಮ್ಮೆ, ಬಾನಿನಲ್ಲಿರುವ ಹುಣ್ಣಿಮೆ ಚಂದಿರನನೊಮ್ಮೆ ನೋಡಿದಾಗ, ಅಲ್ಲಾಹನಾಣೆ.! ಹುಣ್ಣಿಮೆ ಚಂದಿರನಿಗಿಂತಲೂ ಹೊಳೆಯುವ ಪ್ರಕಾಶವಾಗಿತ್ತು ಪ್ರವಾದಿವರ್ಯರ ﷺ ಮುಖದಲ್ಲಿ ಕಾಣುತಿದ್ದದ್ದು.
ಅಬೂಹುರೈರ (ರ) ರವರು ಹೇಳುತ್ತಿದ್ದರು ಪುಣ್ಯ ಪ್ರವಾದಿಯವರನ್ನು ﷺ ನೋಡುತ್ತಿದ್ದರೆ ಆ ಮುಖದಲ್ಲಿಯು ಕೂಡ ಸೂರ್ಯನು ಸಂಚರಿಸುವ ಹಾಗೆ ಕಾಣುತಿತ್ತು ಎಂದು. ಬರಾಅರೊಂದಿಗೆ (ರ) ಪ್ರವಾದಿಯವರ ﷺ ಮುಖ ಖಡ್ಗದ ಹಾಗೆ ಹೊಳೆಯುತ್ತಿತ್ತೋ ಎಂದು ಕೇಳಿದಾಗ ಅಲ್ಲ ಹುಣ್ಣಿಮೆ ಚಂದಿರನ ಹಾಗೆಯಾಗಿತ್ತು ಹೊಳೆಯುತ್ತಿದ್ದದ್ದು ಅಥವಾ ಅವರ ಮುಖದಲ್ಲಿ ಯಾವಾಗಲೂ ದುಂಡಕಾರವಾಗಿ ಶಾಂತವಾದ ಪ್ರಭೆಯಿರುತಿತ್ತು ಎಂದು ಹೇಳಿದರು.
ಪ್ರವಾದಿವರ್ಯರ ﷺ ಮುಖದಲ್ಲಿ ಅವರ ಭಾವನೆಗಳನ್ನು ತಿಳಿಯಬಹುದಾಗಿತ್ತು.
ಗಂಭೀರವಾದ ಆಲೋಚನೆಗಳಿದ್ದಾಗ ಮುಖದ ಭಾವವು ಕೆಂಪಾಗುತಿತ್ತು, ಸಂತೋಷವಾದಾಗ ಅವರ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು, ಅವರನ್ನು ದೂರ ನಿಂತು ನೋಡಿದರೆ ಭವ್ಯತೆಯ ಪ್ರತೀಕವಾಗಿದ್ದರು, ಅವರ ಮುಖವನ್ನು ನೋಡುತ್ತಲೇ ಹೃದಯದಲ್ಲಿ ಗೌರವ ತುಂಬಿ ತುಳುಕುತ್ತಿತ್ತು, ಹತ್ತಿರ ಬಂದು ನಿಂತಾಗ ಪ್ರೀತಿ ಉಕ್ಕಿ ಹರಿಯುತ್ತಿತ್ತು, ಅವರು ಜೊತೆಯಲ್ಲಿದ್ದರೆ ಪ್ರೀತಿ ಅಧಿಕವಾಗುತ್ತಿತ್ತು, ಆದೇಶ ನೀಡುತ್ತಿದ್ದ ಸಮಯದಲ್ಲಿ ಮುಖದಲ್ಲಿರುವ ಗಾಂಭೀರ್ಯತೆ ಎದ್ದು ಕಾಣುತ್ತಿತ್ತು.
ನಿರ್ದೇಶನಗಳನ್ನು ನೀಡುವ ಸಮಯದಲ್ಲಿ ಸೌಮ್ಯತೆ ಇರುತ್ತಿತ್ತು, ಹಾಸ್ಯದ ಸಮಯದಲ್ಲಿ ಮುಖದಲ್ಲಿ ಮುಗುಳ್ನಗೆ ಕಾಣುತಿತ್ತು. ಅಲ್ಲಾಹುವಿನ ಕುರಿತು ಹೇಳುತ್ತಿದ್ದಾಗ ಸಂಪೂರ್ಣ ವಿನಮ್ರತೆಯಿಂದಾಗಿತ್ತು ಅವರ ಮುಖ ಭಾವ ಇರುತ್ತಿದ್ದದ್ದು. ಹೀಗೆ ಎಲ್ಲಾ ಅಂಶಗಳನ್ನು ಹೊಂದಿರುವ ಒಂದು ವಿಶಿಷ್ಟ ವ್ಯಕ್ತಿತ್ವವಾಗಿರುವರು ಪುಣ್ಯ ಪ್ರವಾದಿಯವರು. ﷺ
(ಮುಂದುವರಿಯುವುದು…)
Part-22/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 22
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಅಗಲವಾದ ಕಣ್ಣುಗಳಾಗಿತ್ತು ಪ್ರವಾದಿಯವರದ್ದು ﷺ, ಕಾಡಿಗೆ ಬಳಸದಿದ್ದರೂ ಕಾಡಿಗೆ ಬಳಸಿದ ಹಾಗೆ ಕಾಣುತಿತ್ತು.
ಕಣ್ಣಿನ ಬಿಳಿ ಭಾಗದಲ್ಲಿ ಕೆಂಪು ಮಿಶ್ರಿತ ಹೊಳಪು ಇರುತ್ತಿತ್ತು, ಸುಂದರವಾದ ಕಪ್ಪು ಕಣ್ಪೊರೆಯಾಗಿತ್ತು, ತೆಳುವಾಗಿ ಉದ್ದವಾದ ಕಪ್ಪು ಕಣ್’ರೆಪ್ಪೆಲಾಗಿತ್ತು, ಕಣ್ಣಿನ ಮೂಲೆಗಳಲ್ಲಿ ತೆಳುವಾದ ಕೆಂಪು ಬಣ್ಣವಿತ್ತು, ಸುಂದರವಾದ ರೋಮಗಳಿರುವ ಹುಬ್ಬುಗಳಾಗಿತ್ತು. ದೂರ ನಿಂತು ನೋಡುವಾಗ ಎರಡು ಹುಬ್ಬುಗಳ ನಡುವೆ ಅಂತರವೇ ಇಲ್ಲದ ಹಾಗೆ ಕಾಣುತ್ತಿತ್ತು, ಆದರೆ ಅದರ ನಡುವೆ ಸಣ್ಣ ಪ್ರಕಾಶಮಯ ಅಂತರವಿತ್ತು, ಕೋಪ ಬಂದಾಗ ಅಲ್ಲಿರುವ ನರಗಳು ಎದ್ದು ಕಾಣುತ್ತಿತ್ತು, ಆಗ ಅದರ ನಡುವಿನ ಅಂತರವು ಎಲ್ಲರಿಗೂ ಸ್ಪಷ್ಟವಾಗಿ ಕಾಣುತಿತ್ತು.
ಅವರ ನೋಟವು ಎಂಥವರನ್ನೂ ಗಮನಿಸುವಂತಿತ್ತು, ಕೆಳಗೆ ನೋಡಿ ಅತಿ ವಿನಮ್ರತೆಯಿಂದ ನಡೆಯುತ್ತಿದ್ದರು. ಅನುಚಿತವಾದ ದೃಶ್ಯಗಳು ಕಂಡಾಗ ವಿಶೇಷ ರೀತಿಯಲ್ಲಿ ನಾಚಿಕೆಯಿಂದ ಕಣ್ಣು ಮುಚ್ಚುತ್ತಿದ್ದರು, ಆಕಾಶದ ಅದ್ಭುತ ವಿಸ್ಮಯಗಳನ್ನು ಕಂಡು ಆಲೋಚಿಸುತ್ತಾ, ಬಹಳ ಹೊತ್ತು ನೋಡುತ್ತಾ ನಿಂತಿರುತಿದ್ದರು.
ವಿಶಾಲವಾದ ಹಣೆಯಾಗಿತ್ತು ಪ್ರವಾದಿಯವರದ್ದು ﷺ, ಸಭೆಯಲ್ಲಿ ಕುಳಿತಿರುವಾಗ ಹಣೆಯ ಭಾಗದಿಂದ ವಿಶೇಷವಾದ ಬೆಳಕು ಹೊರಹೊಮ್ಮುತ್ತಿತ್ತು, ಕೆಲವೊಮ್ಮೆ ಅದು ದೀಪದ ಹಾಗೆ ಹೊಳೆಯುತ್ತಿತ್ತು.
ಮೃದುವಾದ ಕೆನ್ನೆಗಳಾಗಿತ್ತು, ಮಾಂಸಗಳು ಅಧಿಕವಾಗಿಯೂ ಇರಲಿಲ್ಲ, ತೆಳ್ಳಗೆ ಮೂಳೆ ಎದ್ದು ಕಾಣುವಾಗೆಯೂ ಇರಲಿಲ್ಲ. ಕೆನ್ನೆಗಳಲ್ಲಿ ಶೋಭಿಸುತಿದ್ದ ಹೊಳಪಿನ ಕುರಿತು ಮಾತ್ರ ಬಹಳಷ್ಟು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ನಮಾಝಿನಲ್ಲಿ ಸಲಾಂ ಹೇಳುವಾಗ ಹಿಂಭಾಗದಲ್ಲಿರುವವರು, ವಿಶೇಷವಾಗಿ ಆ ಕೆನ್ನೆಗಳನ್ನು ಗಮನಿಸುತ್ತಿದ್ದರು. ಕೆನ್ನೆಗಳನ್ನು ಮಾತ್ರ ಗಮನವಿಟ್ಟು ನೋಡಿದರೆ ಸಂಪೂರ್ಣ ಶರೀರದ ಸೌಂದರ್ಯವು ಎದ್ದು ಕಾಣುತ್ತಿತ್ತು.
ಶರೀರದ ಯಾವುದೇ ಭಾಗಗಳಲ್ಲೂ ಸುಕ್ಕುಗಳು ಕಾಣುತ್ತಿರಲಿಲ್ಲ.
ಪ್ರವಾದಿವರ್ಯರ ﷺ ಮೂಗು ದೂರ ನಿಂತು ನೋಡಿದರೆ ಉದ್ದನೆಯ ಮೂಗಿನಂತೆ ಕಾಣುತ್ತಿತ್ತು, ಆದರೆ ವಾಸ್ತವದಲ್ಲಿ ಮೂಗಿನ ತುದಿಯು ತೆಳ್ಳಗೆ ಪ್ರಕಾಶಮಯವಾಗಿತ್ತು. ಮಧ್ಯದಲ್ಲಿರುವ ಸಣ್ಣ ಏರಿಕೆಯು ಪ್ರಕಾಶಮಾನವಾಗಿ ಗಾಂಭೀರ್ಯತೆಯಿಂದ ಕೂಡಿತ್ತು. ಅವರ ಬಾಯಿಯೂ ಕಿರಿದಾಗಿರಲಿಲ್ಲ, ಅಗಲವಾಗಿ ಸುಂದರವಾಗಿತ್ತು. ಬಾಯಿಯ ರಚನೆ ಹಾಗೂ ನೋಟವು ಮಾತಿನ ಸೌಂದರ್ಯ ಹಾಗೂ ಸ್ಪಷ್ಟತೆಯನ್ನು ನಿರ್ಧರಿಸುತ್ತದೆಯಲ್ಲವೇ.
ಉದ್ದವಾದ ತುಟಿಯಾಗಿತ್ತು, ಹೂವುಗಳು ತುಂಬಿರುವ ಕತ್ತರಿಸಿದ ಸಸ್ಯಗಳ ಸೌಂದರ್ಯವನ್ನು ನೆನಪಿಸುವಂತಿತ್ತು ಅವರ ತುಟಿಗಳು. ಪ್ರವಾದಿಯವರ ﷺ ತುಟಿಗಳು ಸಂಧಿಸುವ ಭಾಗವು ತೆಳುವಾಗಿ ಮೃದುವಾಗಿತ್ತು. ಹಿಮದ ಹನಿಗಳಂತೆ ಕಾಣುವ ಹಲ್ಲುಗಳಾಗಿತ್ತು ಅವರದ್ದು, ಹವಳದ ಮುತ್ತು ಉದುರವಂತಿತ್ತು ಅವರ ಮುಗುಳ್ನಗು. ಹಲ್ಲುಗಳ ನಡುವಿನಿಂದ ಬೆಳಕುಗಳು ಕಾಣಿಸುತಿತ್ತು, ಮುಂಭಾಗದ ಹಲ್ಲಿನ ನಡುವೆ ಕಾಣುತ್ತಿದ್ದ ಸಣ್ಣ ಅಂತರಗಳ ನಡುವಿನಿಂದ ಕೆಲವೊಮ್ಮೆ ಬೆಳಕು ಕಾಣುತಿತ್ತು.
ಗೋಡೆಗಳಲ್ಲಿ ಆ ಬೆಳಕು ಪ್ರತಿಬಿಂಬಿಸುತ್ತಿತ್ತು. ಬೆಳಕು ಎಲ್ಲಿಂದ ಬರುತ್ತಲಿದೆಯೆಂದು ನೋಡುವಾಗ ಪ್ರವಾದಿವರ್ಯರ ﷺ ಅನುಚರರಿಗೆ ಅದು ಅರ್ಥವಾಗುತ್ತಿತ್ತು.
ಅವರ ಮೌನಕ್ಕೂ ಕೂಡ ವಾಕ್’ಚಾತುರ್ಯವಿತ್ತು. ನಿಜಕ್ಕೂ ಅದೊಂದು ಚಿಂತನಶೀಲವಾಗಿರುತಿತ್ತು. ಅವರ ಮಾತಿಗೆ ಎಂತಹ ಸೌಂದರ್ಯವಿತ್ತೆಂದರೆ.? ಪ್ರತಿಯೊಂದು ವಾಕ್ಯಗಳು ಕೂಡ ಸ್ಪಷ್ಟವಾದ ಸಂಭಾಷಣೆಯಾಗಿತ್ತು, ಕೆಲವೇ ಕೆಲವು ಮಾತುಗಳಲ್ಲಿ ಬಹಳಷ್ಟು ವಿಚಾರಗಳನ್ನು ತಿಳಿಸುತ್ತಿದ್ದರು.
“ಜವಾಮಿ ಉಲ್ ಕಲಿಮ್” ಎಂದಾಗಿದೆ ಅರಬಿಯಲ್ಲಿ ಅದಕ್ಕೆ ಹೇಳುವುದು. ಒಂದೇ ಒಂದು ಮಾತುಗಳನ್ನು ಕೂಡ ಬಿಡದೆ ಸಭಿಕರು ಅವರ ಸಂಭಾಷಣೆಯನ್ನು ಕೇಳುತ್ತಿದ್ದರು. ತಲೆಯ ಮೇಲೆ ಕುಳಿತಿರುವ ಗಿಳಿ ಹಾರಿ ಹೋಗದಂತೆ ಯಾವ ರೀತಿ ಎಚ್ಚರ ವಹಿಸುತ್ತೆವೆಯೋ, ಅದೇ ರೀತಿ ಪ್ರವಾದಿವರ್ಯರ ﷺ ಸಂಭಾಷಣೆಯನ್ನು ಅವರ ಅನುಚರರು ಕೇಳುತ್ತಿದ್ದರೆಂದು ಹದೀಸುಗಳಲ್ಲಿ ಉಲ್ಲೇಖಿಸಲಾಗಿದೆ.
ಅಧಿಕವಾಗಿ ಅನವಶ್ಯಕ ಮಾತುಗಳನ್ನು ಆಡುತ್ತಿರಲಿಲ್ಲ, ಅಂತಹ ಮಾತುಗಳಲ್ಲಿ ಅವರಿಗೆ ಆಸಕ್ತಿಯೂ ಇರಲಿಲ್ಲ, ಒಮ್ಮೆಯು ಕೂಡ ಕೆಟ್ಟ ಮಾತುಗಳನ್ನು ಆಡಿರಲಿಲ್ಲ.
ಮನುಷ್ಯರ ಖಾಸಗಿ ಅಂಗಗಳ ಕುರಿತು ಅಥವಾ ಇನ್ಯಾವುದೋ ವಿಷಯಗಳ ಕುರಿತು ಹೇಳಬೇಕಾಗಿ ಬಂದರೆ, ಅದನ್ನು ವ್ಯಂಗ್ಯವಾಗಿ ತಿಳಿಸುತ್ತಿದ್ದರು. ಯಾರನ್ನು ಅಪಮಾನಿಸುತ್ತಿರಲಿಲ್ಲ, ಶಪಿಸುವ ಮಾತುಗಳನ್ನೂ ಆಡುತ್ತಿರಲಿಲ್ಲ.
ಅಗಲವಾದ ಭುಜಗಳಲಾಗಿತ್ತು, ಭುಜಗಳ ನಡುವೆ ವಿಶಾಲತೆಯಿತ್ತು. ಕುತ್ತಿಗೆಯ ಭಾಗ ಬೆಳ್ಳಿಯಂತೆ ಹೊಳೆಯುತ್ತಿತ್ತು. ಮೃದುವಾದ ಚರ್ಮವನ್ನು ಹೊಂದಿದ್ದರು. ಸಾಮಾನ್ಯವಾಗಿ ಕುತ್ತಿಗೆಯಲ್ಲಿ ಕಾಣುವ ಸುಕ್ಕುಗಳು ಪ್ರವಾದಿವರ್ಯರಲ್ಲಿ ﷺ ಕಾಣುತ್ತಿರಲಿಲ್ಲ.
ಅಂಗಿ ಧರಿಸದಿದ್ದರೂ, ತಲೆ ಕೂದಲು ಕುತ್ತಿಗೆಗೆ ತಲುಪುದಿದ್ದರೂ, ಕುತ್ತಿಗೆ ಮಾತ್ರ ಬಹಳ ಪ್ರಕಾಶವಾಗಿ ಗೋಚರಿಸುತ್ತಿತ್ತು. ಯಾರೇಯಾದರು ಆ ಸೌಂದರ್ಯವನ್ನು ಗಮನಿಸಿದೆ ಇರಲಾರರು. ಪ್ರವಾದಿವರ್ಯರ ﷺ ಎದೆ ಹಾಗು ಹೊಟ್ಟೆ ಒಂದೇ ರೀತಿಯಾಗಿ ಕಾಣುತಿತ್ತು, ಹೊಟ್ಟೆ ಸ್ವಲ್ಪವೂ ಹಿಗ್ಗಿರಲಿಲ್ಲ. ಹೊಟ್ಟೆಯ ಕೆಳಗಿನ ಪಟ್ಟು ಸೊಂಟದ ಕೆಳಭಾಗದಲ್ಲಿತ್ತು.
(ಮುಂದುವರಿಯುವುದು…)
Part-23/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 23
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವಿಶಾಲವಾದ ತಲೆ, ಪ್ರವಾದಿವಾರ್ಯರ ﷺ ತಲೆಕೂದಲು ಹೆಣೆದುಕೊಂಡ ರೀತಿಯಲ್ಲೋ, ಚದುರಿದ ರೀತಿಯಲ್ಲೋ ಇರಲಿಲ್ಲ, ಕೂದಲನ್ನು ಬಾಚಿದಾಗ ಮರಳ ದಿಬ್ಬದಂತೆ ಕಂಗೊಳಿಸುತ್ತಿತ್ತು.
ಕೆಲವೊಮ್ಮೆ ಅವರ ತಲೆಕೂದಲು ಭುಜದವರೆಗೂ, ಇನ್ನೂ ಕೆಲವೊಮ್ಮೆ ಕಿವಿಯವರೆಗೂ ತಲುಪುತ್ತಿತ್ತು. ಅದನ್ನು ಮಧ್ಯದಿಂದ ಎರಡು ಭಾಗಗಳಾಗಿ ವಿಂಗಡಿಸಿ ಕೆಲವೊಮ್ಮೆ ಸಡಿಲಗೊಳಿಸಿ ಇಡುತ್ತಿದ್ದರು, ಇನ್ನು ಕೆಲವೊಮ್ಮೆ ಬಿಗಿಯಾಗಿ ಇಡುತ್ತಿದ್ದರು. ತಲೆಗೆ ಎಣ್ಣೆ ಹಾಕದಿದ್ದರೂ ಹಾಕಿದಂತೆ ಸುಂದರವಾಗಿ ಕಾಣುತ್ತಿದ್ದರು.
ಸುಂದರವಾಗಿ ಕತ್ತರಿಸಿದ ಉದ್ದನೆಯ ದಪ್ಪನೆಯ ಗಡ್ಡವಾಗಿತ್ತು, ಚಿಂತೆಯಲ್ಲಿ ಮುಳುಗಿರುವಾಗ ಗಡ್ಡವನ್ನು ಸವರುತಿದ್ದರು.
ಅಂಗಸ್ನಾನ (ಉಲೂಅ್) ಮಾಡುವಾಗ ಗಡ್ಡದ ಕೂದಲಿನ ನಡುವೆ ಬೆರಳುಗಳ ಮೂಲಕ ತೊಳೆಯುತಿದ್ದರು. ಕೂದಲನ್ನು ನಲ್ವತ್ತು ದಿವಸಕೊಮ್ಮೆ ಕತ್ತರಿಸಿದರೆ, ಉಗುರುಗಳನ್ನು ವಾರಕೊಮ್ಮೆ ಕತ್ತರಿಸಿ ಸ್ವಚ್ಛಗೊಳಿಸುತ್ತಿದ್ದರು. ಬಲಗೈಯ ಉಗುರುಗಳನ್ನು ಕತ್ತರಿಸುವಾಗ ತೋರು ಬೆರಳಿನಿಂದ ಆರಂಭಿಸಿ ಹೆಬ್ಬೆರಳಿನಲ್ಲಿ ಕೊನೆಗೊಳಿಸುತ್ತಿದ್ದರು, ಆದರೆ ಎಡಗೈಯಲ್ಲಿ ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳಿನಲ್ಲಿ ಕೊನೆಗೊಳಿಸುತ್ತಿದ್ದರು. ಎರಡು ದಿನಕೊಮ್ಮೆ ಎಣ್ಣೆ ಹಾಕಿ ತಲೆಗೂದಲನ್ನು ಬಾಚಿ ಸ್ವಚ್ಛವಾಗಿಡುತ್ತಿದ್ದರು.
ಶರೀರದಲ್ಲಿ ಅಧಿಕವಾಗಿ ರೋಮಗಳಿರಲಿಲ್ಲ, ಅವರ ಕೈ ಬೆರಳಿನ ಮೇಲೆ, ಎದೆಯ ಹಾಗೂ ಬೆನ್ನಿನ ಮೇಲೆ ರೋಮಗಳಿತ್ತು.
ಎದೆಯಿಂದ ಹೊಕ್ಕುಳಿನವರೆಗೆ ಒಂದು ರೇಖೆಯ ರೂಪದಲ್ಲಿ ರೋಮಗಳಿತ್ತು, ಅದಲ್ಲದೆ ಇತರ ಭಾಗಗಳಲ್ಲಿ ರೋಮಗಳಿರಲಿಲ್ಲ. ಕಂಕುಳದಲ್ಲಿ ರೋಮಗಳಿದ್ದರೂ, ಇಲ್ಲದಿದ್ದರೂ ಕಂಕುಳದಿಂದ ಶ್ವೇತವರ್ಣದ ಪ್ರಕಾಶವು ಯಾವಾಗಲೂ ಹೊರಹೊಮ್ಮುತ್ತಿತ್ತು.
ಬಲಿಷ್ಠವಾದ ಕೈಕಾಲುಗಳು, ಆರೋಗ್ಯಕರವಾದ ಸ್ನಾಯುಗಳು, ಗಟ್ಟಿ ಮೂಳೆಗಳು. ಮೊಣಕೈ ಮತ್ತು ಮೊಣಕಾಲುಗಳು ಬಲಿಷ್ಠವಾಗಿ ಅಗಲವಾಗಿತ್ತು, ವಿಶಾಲವಾದ ಅಂಗೈ. ಬಲಿಷ್ಠ ಸಾಮರ್ಥ್ಯವಿರುವ ಅಂಗಾಂಗಗಳು.
ರೇಷ್ಮೆಯಂತೆ ಮೃದುವಾದ ಅಂಗೈ. ಅದನ್ನು ಸ್ಪರ್ಶಿಸಿದಾಗ ನಾವು ಸ್ಪರ್ಶಿಸಿದ ಎಲ್ಲಾ ರೇಷ್ಮೆಗಿಂತಲೂ ಮೃದುವಾಗಿದ್ದವು ಪ್ರವಾದಿವರ್ಯರ ﷺ ಪವಿತ್ರ ಕೈಗಳೆಂದು ಅವರ ಅನುಚರರು ಹೇಳುತ್ತಿದ್ದರು.
ದೃಢವಾದ ಕಾಲುಗಳಾಗಿತ್ತು. ಸಾಮಾನ್ಯವಾಗಿ ಕಾಲಿನಲ್ಲಿರುತ್ತಿದ್ದ ಸುಕ್ಕುಗಳು ಪ್ರವಾದಿವರ್ಯರ ﷺ ಕಾಲಿನಲ್ಲಿರಲಿಲ್ಲ, ಅವರ ಕಾಲಿನ ಹೆಬ್ಬೆರಳು ಉದ್ದವಾಗಿತ್ತು, ತೆಳುವಾದ ಹಿಮ್ಮಡಿ, ಅವರ ಪಾದಗಳಿಂದ ಕಸ್ತೂರಿಯ ಸುಗಂಧ ಹೊರಬರುತಿತ್ತು.
ನಡೆಯುವಾಗ ಮುಂದಕ್ಕೆ ಬಾಗುತ್ತಿದ್ದರು, ಕಾಲುಗಳನ್ನು ಎಳೆಯುತ್ತಾ ನಡೆಯುತ್ತಿರಲಿಲ್ಲ, ಎತ್ತರದಿಂದ ಕೆಳಗೆ ಬಂದ ರೀತಿಯಲ್ಲಿ ಬಹಳ ಲವಲವಿಕೆಯಿಂದ ಹೆಜ್ಜೆ ಇಡುತ್ತಿದ್ದರು. ಪ್ರವಾದಿವರ್ಯರು ﷺ ನಡೆಯುವಾಗ ಪಾದ ಎತ್ತಿ ನಡೆಯುತ್ತಿದ್ದರೆಂದು ಆಯಿಷಾ ಬೀವಿಯವರು (ರ) ಹೇಳುತ್ತಿದ್ದರು.
ಪ್ರವಾದಿವರ್ಯರು ﷺ ತನ್ನ ಆರೋಗ್ಯ ಕಾಲದಲ್ಲಿ ಎಷ್ಟೇ ದೃಢ ಗಾತ್ರದ ಮಲ್ಲನನ್ನೂ ಸೋಲಿಸುವಷ್ಟು ಶಕ್ತಿಶಾಲಿಯಾಗಿದ್ದರು.
ತನ್ನೆದುರು ಕುಸ್ತಿಗೆ ತಯಾರಾಗಿದ್ದ ಅರಬ್ ಲೋಕದ ಶಕ್ತಿಶಾಲಿ ಫೈಲ್ವಾನ ರುಖಾನನ್ನು ನಿಮಿಷಾರ್ಧದಲ್ಲಿ ಸೋಲಿಸಿದ್ದರು.
ಪುಣ್ಯ ಪ್ರವಾದಿಯವರ ﷺ ಸೌಂದರ್ಯದ ಕುರಿತು ಹಸ್ಸಾನ್’ರವರು (ರ) ಈ ರೀತಿ ಹೇಳಿದ್ದರು. ಸೌಂದರ್ಯದ ಪರಿಪೂರ್ಣತೆಯನ್ನು ಅಲ್ಲಾಹನು ಪ್ರವಾದಿವರ್ಯರ ﷺ ಉದ್ದೇಶದಂತೆ ಸೃಷ್ಟಿಸಿದಂತಿದೆ, ಪ್ರವಾದಿ ಯೂಸುಫ್ (ಅ) ರವರ ಸೌಂದರ್ಯಕ್ಕೆ ಮಾರುಹೋದ ಅಂದಿನ ಯುವತಿಗಳು ಸೇಬಿನ ಬದಲಾಗಿ ತಮ್ಮ ಕೈಗಳನ್ನು ಕತ್ತಿರಿಸಿದ್ದರು, ಆದರೆ ಅವರು ಮುಹಮ್ಮದರ ﷺ ಸೌಂದರ್ಯವನ್ನು ನೋಡಿರುತ್ತಿದ್ದರೆ ಬೆರಳಿಗೆ ಬದಲಾಗಿ ತಮ್ಮ ಹೃದಯವನ್ನೇ ಕತ್ತರಿಸುತ್ತಿದ್ದರೇನೋ.?
ಕಪ್ಪು ಶಿರವಸ್ತ್ರ ಧರಿಸಿ ಬಂದಿದ್ದ ಪ್ರವಾದಿವರ್ಯರನ್ನು ﷺ ಕಂಡು, ತಮ್ಮ ಬಿಳಿ ವರ್ಣದಿಂದ ಕಪ್ಪು ಬಣ್ಣದ ಸೌಂದರ್ಯ ಅಧಿಕವಾಯಿತೊ.?
ಅಥವಾ ಬಟ್ಟೆಯ ಕಪ್ಪು ಬಣ್ಣವು ತಮ್ಮ ಶರೀರದ ಬಿಳಿಯನ್ನು ಅಧಿಕಗೊಳಿಸುತ್ತಿದೆಯೋ.? ಎಂದು ಆಯಿಷ (ರ) ಬೀವಿಯವರು ಕೇಳಿದ್ದರು.
ಒಟ್ಟಾರೆ ಪ್ರವಾದಿವರ್ಯರು ﷺ ಪರಿಪೂರ್ಣ ಸೌಂದರ್ಯದಿಂದ ತುಂಬಿದ್ದರು. ಯಾವುದೇ ವಿವರಣೆಗೂ ನಿಲುಕದ ವಿಶ್ವ ಸೌಂದರ್ಯವಾಗಿದೆ ಪ್ರವಾದಿಯವರದ್ದು ﷺ. ಅದನ್ನು ವಿವರಿಸಲು ನಾನೆಷ್ಟೇ ಪ್ರಯತ್ನ ಪಟ್ಟರೂ ವ್ಯರ್ಥವೆಂದು ಮಾತ್ರ, ಸೋಲು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲ.
(ಮುಂದುವರಿಯುವುದು…)
Part-24/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 24
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ನಾವು ಚರಿತ್ರೆಗೆ ಹಿಂತಿರುಗಿ ಬರೋಣ, ಪುಣ್ಯ ಪ್ರವಾದಿಯವರ ﷺ ಸೌಂದರ್ಯದ ಸ್ವರೂಪವನ್ನು ತಿಳಿದುಕೊಂಡೆವು.
ಯಾರೇ ಆದರು ತಮ್ಮ ಮಕ್ಕಳಿಗೆ ಆಯ್ಕೆಮಾಡುವ, ವರನಿಗಿರಬೇಕಾದ ಎಲ್ಲಾ ಗುಣಗಳೂ ಪ್ರವಾದಿಯವರಲ್ಲಿತ್ತು ﷺ. ಯಾವುದೇ ಹೆಣ್ಣು ತಾನು ಆಸೆ ಪಡುವ, ಪ್ರಿಯತಮನಿಗಿರಬೇಕಾದ ಎಲ್ಲಾ ಸೌಂದರ್ಯವೂ ಪ್ರವಾದಿಯವರಲ್ಲಿತ್ತು ﷺ. ವಿಶ್ವಸುಂದರಿಯನ್ನೇ ಆಯ್ಕೆ ಮಾಡಿದರೂ ಪ್ರವಾದಿವರ್ಯರ ﷺ ಸೌಂದರ್ಯದ ಮುಂದೆ ಸೋಲಲೇ ಬೇಕಿತ್ತು.
ಹೀಗಿರುವಾಗ ಖದೀಜರ ಮನೆಯೊಳಗಿನಿಂದ ಕೆಲವೊಂದು ಜವಾಬ್ದಾರಿಗಳಿಗೆ ತಯಾರಿ ನಡೆಸಲಾಗುತ್ತಿತ್ತು. ಇದೊಂದು ಕೇವಲ ಭಾವನಾತ್ಮಕ ವಿವಾಹ ಚರ್ಚೆಯಾಗಿರಲಿಲ್ಲ, ಒಂದು ಗಂಡಿಗೆ ಒಂದು ಹೆಣ್ಣು ಬೇಕಲ್ಲವೇ ಎನ್ನುವ ಅರ್ಥದಲ್ಲಿಯೂ ಆಗಿರಲಿಲ್ಲ.
ಮಕ್ಕ ಪಟ್ಟಣವನ್ನು, ಇಡೀ ಜಗತ್ತನ್ನು, ಬದಲಿಸುವ ವಿವಾಹನ್ವೇಷಣೆಯಾಗಿತ್ತದು.
ಖದೀಜ (ರ) ತನ್ನ ನಂಬಿಕಸ್ಥೆಯಾದ ನಫೀಸ ಬಿಂತ್ ಮುನ್’ಯಳನ್ನು ಕರೆದು, ಮುಹಮ್ಮದರಲ್ಲಿ ﷺ ವಿವಾಹವಾಗುವ ಆಗ್ರಹವನ್ನು ತಿಳಿಸಿ, ವಿವಾಹಕ್ಕೆ ಮುಹಮ್ಮದರಿಗಿರುವ ﷺ ಆಸಕ್ತಿಯನ್ನು ತಿಳಿಯಲು ಹೇಳಿದರು. ನಫೀಸ ಈ ಘಟನೆಯ ಕುರಿತು ಈ ರೀತಿ ವಿವರಿಸುತ್ತಾರೆ. ನಾನು ರಹಸ್ಯವಾಗಿ ಮುಹಮ್ಮದರ ﷺ ಬಳಿ ತೆರಳಿ, ನಿಮಗೆ ಮದುವೆಯಾಗುವ ಆಸೆಯಿಲ್ಲವೇ.? ಏನಾದ್ರು ಯೋಚಿಸಿದ್ದೀರ.? ಅದಕ್ಕಿರುವ ಅಡಚಣೆಯಾದರೂ ಏನು.?
ಎಂದು ನೇರವಾಗಿ ಕೇಳಿದೆನು. ತಕ್ಷಣವೇ ಮದುವೆಗೆ ಅವಶ್ಯಕವಾದ ಹಣ ನನ್ನ ಬಳಿಯಿಲ್ಲವೆಂದು ಅವರು ಹೇಳಿದರು. ಹಣಕಾಸಿನ ಸಮಸ್ಯೆಯಲ್ಲ, ಶ್ರೀಮಂತ ಅಥವಾ ಉದಾತ್ತ ಸೌಂದರ್ಯದ ಕುರಿತು ಏನಾದ್ರು ಯೋಚಿಸಿದ್ದೀರ.? ಅಂತಹ ಒಂದು ಆಹ್ವಾನ ನಿಮ್ಮನ್ನುಡುಕಿ ಬಂದರೆ? ನೀವು ಒಪ್ಪುತ್ತೀರ? ಎಂದು ಪುನಃ ಕೇಳಿದೆನು. ಯಾರ ಕುರಿತು ಕೇಳುತ್ತಿದ್ದೀರ ಎಂದು ಪ್ರವಾದಿಯವರು ﷺ ಕೇಳಿದಾಗ ಒಂದೇ ಮಾತಿನಲ್ಲಿ ಖದೀಜ ಅಂದೆನು.
ಏನು ಅದ್ಹೇಗೆ ಸಾಧ್ಯವಾಗುತ್ತೆ.? ನನ್ನಲ್ಲಿ ಪುನಃ ಕೇಳಿದರು. ಅದೆಲ್ಲವನ್ನೂ ನಾನೇ ನೋಡಿಕೊಳ್ಳುತ್ತೇನೆ, ಅದನ್ನು ಬೇಕಾದ ರೀತಿಯಲ್ಲಿ ನಾನೇ ನಿಭಾಯಿಸುತ್ತೇನೆ ಎಂದು ಹೇಳಿದೆನು. ಪ್ರವಾದಿಯವರಿಂದ ﷺ ವಿರೋಧವಿಲ್ಲವೆಂದು ಅರಿತ ನಫೀಸ, ಖದೀಜರಿಗೆ ಇದರ ಕುರಿತು ಮಾಹಿತಿ ನೀಡಿದರು. ಖದೀಜರು (ರ) ಅಧಿಕೃತವಾಗಿ ಪ್ರವಾದಿಯವರ ﷺ ಬಳಿ ಒಬ್ಬ ವ್ಯಕ್ತಿಯನ್ನು ಕಳುಹಿಸಿ ಅಬೂತ್ವಾಲಿಬರಿಗೆ ಮಾಹಿತಿ ನೀಡಿದರು.
ಇನ್ನೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು.
ನಫೀಸರಿಂದ ಮಾಹಿತಿ ಲಭಿಸಿದ ನಂತರ, ಖದೀಜರು ನೇರವಾಗಿ ಪ್ರವಾದಿಯವರನ್ನು ﷺ ಭೇಟಿಯಾಗಿ, ನೀವು ಮದುವೆಯಾಗಲು ಬಯಸುತ್ತಿದ್ದೀರಲ್ವಾ.? ಎಂದು ಕೇಳಿದಾಗ. ಯಾರೊಂದಿಗೆ.? ಎಂದು ಪ್ರವಾದಿಯವರು ﷺ ಕೇಳಿದರು. ನನ್ನ ಜೊತೆಯಲ್ಲೆಂದು ಖದೀಜ (ರ) ಹೇಳಿದಾಗ, ಅದ್ಹೇಗೆ ಸಾಧ್ಯವಾಗುತ್ತೆ.? ನೀವು ಖುರೈಶಿಗಳಲ್ಲಿ ಉನ್ನತ ಸ್ಥಾನದಲ್ಲಿರುವ ಒಬ್ಬರು ವಿಧವೆ, ಆದರೆ ನಾನು ಒಂದು ಖುರೈಶಿ ಕುಟುಂಬದ ಒಬ್ಬ ಅನಾಥ ಎಂದು ಹೇಳಿದರು.
ಅದಕ್ಕೆ ಅದ್ಯಾವುದು ನನಗೆ ಸಮಸ್ಯೆಯಲ್ಲ, ನನಗೆ ಅಧಿಕೃತವಾಗಿ ಅನ್ವೇಷಣೆ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆಂದು ಖದೀಜ (ರ) ಹೇಳಿದರು. ಮತ್ತೊಂದು ಉಲ್ಲೇಖದಲ್ಲಿ ಈ ರೀತಿಯೂ ಇದೆ. ಯಬ್’ನ ಅಮ್ಮೀ (ಓ ಚಿಕ್ಕಪ್ಪನ ಮಗನೇ) ನಿಮ್ಮ ಕುಟುಂಬ, ಸ್ವಭಾವದ ಮಹಿಮೆ, ಪ್ರಾಮಾಣಿಕತೆ, ನಿಮಗೆ ಸಮಾಜದಲ್ಲಿರುವ ಮನ್ನಣೆ, ಇದೆಲ್ಲವೂ ನನ್ನನ್ನು ಇಂತಹ ಒಂದು ಆಸೆಗೆ ಪ್ರೇರೇಪಿಸಿತೆಂದು ಖದೀಜ ಹೇಳಿದ್ದರು.
ನಿಮ್ಮ ಕುಟುಂಬದವರನ್ನು ನಾಳೆಯೇ, ನಮ್ಮ ಮನೆಗೆ ಕಳುಹಿಸುತ್ತೀರಾ ಎಂದು ಖದೀಜ ಕೇಳಿದಾಗ, ಪ್ರವಾದಿಯವರು ﷺ ಅಬೂತ್ವಾಲಿಬರಿಗೆ ಮಾಹಿತಿ ತಿಳಿಸಿ, ಮರುದಿನವೇ ಖದೀಜರ (ರ) ಮನಗೆ ಅಬೂತ್ವಾಲಿಬರು ತೆರಳಿದರು ಬಹಳ ಗೌರವದಿಂದಲೇ ಅವರನ್ನು ಸ್ವೀಕರಿಸಿಲಾಗಿತ್ತು.
ನಂತರ ಖದೀಜ ಓ ಅಬೂತ್ವಾಲಿಬರೇ ನೀವು ನನ್ನ ಚಿಕ್ಕಪ್ಪರ ಜೊತೆ ಮಾತಾಡಿ, ನಿಮ್ಮ ಸಹೋದರನ ಮಗನಾದ ಮುಹಮ್ಮದರನ್ನು ನನ್ನ ಜೊತೆ ಮದುವೆ ಮಾಡಲು ಹೇಳಿರಿ ಎಂದು ಹೇಳಿದರು. ಇದೇನು ಹೇಳ್ತಾ ಇದ್ದೀರ ಖದೀಜ, ತಮಾಷೆ ಮಾಡುತ್ತಿಲ್ಲ ತಾನೇ.? ಎಂದು ಅಬೂತ್ವಾಲಿಬರು ಕೇಳಿದಾಗ, ಇಲ್ಲ ಸತ್ಯವನ್ನೇ ಹೇಳ್ತಿದ್ದೇನೆ ಅಲ್ಲಾಹನ ತೀರ್ಮಾನ ಅದುವೇ ಆಗಿದೆಯೆಂದು ಖದೀಜ ಹೇಳಿದರು. ಅಬೂತ್ವಾಲಿಬ್ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದರು.
ವಿವಾಹ ನಿಶ್ಚಯ ಕಳೆಯಿತು.
ಪ್ರವಾದಿವರ್ಯರಿಗೆ ﷺ 25 ವರ್ಷ, ಎರಡು ತಿಂಗಳು, ಹದಿನೈದು ದಿವಸ ಪ್ರಾಯವಾಗಿತ್ತು. ಆದರೆ ಖದೀಜರಿಗೆ 40 ವರ್ಷ ಪ್ರಾಯವಾಗಿತ್ತು. ವಿವಾಹಕ್ಕೆ ತೆರಳದಕ್ಕೂ ಮುಂಚೆ ವಧುವಿನ ಕುರಿತು ಕೂಡ ಸ್ವಲ್ಪ ಮಾಹಿತಿ ತಿಳಿಯೋಣ.
ಖುರೈಶ್ ರಾಜವಂಶದ ಒಂದು ಶಾಖೆಯಾಗಿದೆ ಅಸದ್ ಜನಾಂಗ. ಅತೀ ಹೆಚ್ಚು ಗೌರವಿಸಲ್ಪಡುವವರು. ಪ್ರವಾದಿವರ್ಯರ ﷺ ಐದನೇ ಪಿತಾಮಹಾನರಾದ ಖುಸಯ್’ರವರ ಮಗನಾದ ಅಬ್ದುಲ್ ಉಝ್ಝರ ಮಗನಾಗಿದ್ದಾರೆ ಅಸದ್.
ಅವರ ಮಗನಾಗಿದ್ದರು ಖದೀಜರ ತಂದೆ ಖುಬೈಲಿದ್. ಅಬ್ದುಲ್ ಮುತ್ತಲಿಬರ ಆತ್ಮೀಯ ಸ್ನೇಹಿತರೂ ಆಗಿದ್ದರು. ಅಬ್ದುಲ್ ಮುತ್ತಲಿಬರು, ಯಮನ್ ದೊರೆಯಾದ ಸೈಫ್ ಬಿನ್ ದೀಯಸನ್’ರಿಗೆ ಗೌರವ ಸಲ್ಲಿಸಲು ಹೋಗಿದ್ದಾಗ ಖುವೈಲಿದ್ ಕೂಡ ಜೊತೆಯಲ್ಲಿದ್ದರು.
ಖದೀಜರ ತಾಯಿ ಫಾತಿಮ. ಪ್ರವಾದಿಯವರ ﷺ ಒಂಬತ್ತನೇ ಪಿತಮಹಾನರಾದ ಲುಅಯ್ಯ್’ರವರ ಪರಂಪರೆಯಲ್ಲಿ ಬರುವ ಝಾಯಿದ್’ರ ಪುತ್ರಿ. ಫಾತಿಮರ ತಾಯಿ ಹಾಲ. ಪ್ರವಾದಿಯವರ ﷺ ಪಿತಮಹಾನರಾದ ಅಬ್ದುಮನಾಫ್’ರ ಪುತ್ರಿ.
ಖದೀಜರ ಕುಟುಂಬ ಪ್ರವಾದಿಯವರ ﷺ ಮೂರನೇ ಪಿತಮಹಾನರಿಗೆ ಸೇರುತ್ತದೆ. ಪ್ರವಾದಿಯವರ ﷺ ಪತ್ನಿಯರಲ್ಲಿ ಅತೀ ಹತ್ತಿರ ಸಂಬಂಧವಿರುವುದು ಖದೀಜ (ರ) ಬೀವಿಯವರಿಗಾಗಿತ್ತು.
(ಮುಂದುವರಿಯುವುದು…)
Part-25/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 25
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಖದೀಜ (ರ) ಬೀವಿ ಜನಿಸಿದ್ದು, ಬೆಳೆದದ್ದೆಲ್ಲವೂ ತಾತ ಅಬ್ದುಲ್ಉಝ್ಝರವರ ಮನೆಯಲ್ಲಾಗಿತ್ತು.
ಕಅಬಾಲಯದ ಪರಿಸರದಲ್ಲಿ, ಅಂದರೆ, ಕಅಬಾದಿಂದ ಕೇವಲ ಒಂಬತ್ತು ಮೊಳ ದೂರದಲ್ಲಾಗಿತ್ತು. ಬೆಳಿಗ್ಗೆ ಕಅಬಾದ ನೆರಳು ಮನೆಯ ಮೇಲೆ ಬಿದ್ದರೆ, ಸಂಜೆ ಮನೆಯ ನೆರಳು ಕಅಬಾದ ಮೇಲೂ ಬೀಳುತ್ತಿತ್ತು. ಒಟ್ಟಾರೆ ಹೇಳುವುದಾದರೆ, ಕಅಬಾಲಯದ ನೆರಳಿನಲ್ಲಾಗಿತ್ತು ಖದೀಜ (ರ) ಬೀವಿ ಬೆಳೆದದ್ದು.
ಖಲೀಫ ಉಮರ್ (ರ) ರವರ ಕಾಲದಲ್ಲೂ, ಆ ಮನೆ ಅದೇ ಸ್ಥಳದಲ್ಲಿತ್ತು. ಅದರ ಬಳಿಯಿದ್ದ ಮರದ ಒಂದು ಕೊಂಬೆಯು, ಕಅಬಾದ ಪ್ರದಕ್ಷಿಣೆ ಹಾಕುವವರಿಗೆ ತೊಂದರೆಯಾಗಿತ್ತು.
ಉಮರ್ (ರ) ರವರು ಅದನ್ನು ಕತ್ತರಿಸಿ ಬದಲಾಗಿ ಒಂದು ಹಸುವನ್ನು ನೀಡಿದ್ದರು. ಉಮರ್ (ಅ) ರವರ ಆಡಳಿತ ಕಾಲದ ಕೊನೆಯ ಸಂದರ್ಭಗಳಲ್ಲಿ, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮನೆಯನ್ನೇ ಕೆಡವಿ, ಸ್ಥಳವನ್ನು ಮಸೀದಿಗೆ ಸೇರಿಸಲಾಯಿತು.
ಬೀವಿಯವರು ಬೆಳೆದ ನಂತರ, ಕಅಬಾದ ಪರಿಸರದಲ್ಲೇ ಇನ್ನೊಂದು ಮನೆಗೆ ತೆರಳಿದರು. ಅಜ್’ಯಾದಿನ ‘ಜಬಲ್ ಖಲ್’ಅ’ ಎನ್ನುವ ಮನೆಯಲ್ಲಾಗಿತ್ತು ಮೊದಲ ವಿವಾಹ ನಡೆದದ್ದು.
ಅಭಿವೃದ್ಧಿಯ ಭಾಗವಾಗಿ ಇಂದು ಈ ಪ್ರದೇಶವನ್ನು ಕೆಡವಲಾಗಿದೆ.
ಪುಣ್ಯ ಪ್ರವಾದಿಯವರ ﷺ ಜೊತೆಗಿನ ಮದುವೆಯ ಸಂದರ್ಭದಲ್ಲಿ, ಮರ್ವಾದ ಬಳಿಯಿರುವ ಮನೆಯಲ್ಲಾಗಿತ್ತು ವಾಸವಾಗಿದ್ದದ್ದು. ಸುರಾತ್ ಬಿನ್ ನಬ್ಬಾಶ್’ರ ಮಗನಾದ ಹಿಂದ್ ಎನ್ನುವವರ ಜೊತೆಯಲ್ಲಾಗಿತ್ತು, ಖದೀಜರ (ರ) ಮೊದಲ ವಿವಾಹ ನಡೆದದ್ದು. ಅಬೂಹಾಲ ಎಂದಾಗಿತ್ತು ಅವರನ್ನು ಕರೆಯುತ್ತಿದ್ದದ್ದು. ತಮೀಮ್ ಜನಾಂಗದ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಹಿಂದ್ ಹಾಗೂ ಹಾಲ ಎಂಬ ಎರಡು ಮಕ್ಕಳು ಜನಿಸಿದರು.
ಆದರೆ ಅವರ ಪತಿ ಯೌವನದಲ್ಲಿಯೇ ಮರಣ ಹೊಂದಿದರು. ಅವರ ಮರಣದ ನಂತರ ಅವರ ಆಸ್ತಿ ಬೀವಿಯವರಿಗೆ ಲಭಿಸಿತು. ಅಧಿಕ ದಿನಗಳು ಅವರು ವಿದವೆಯಾಗಿರಲಿಲ್ಲ, ಮಖ್’ಸೂಮಿ ಜನಾಂಗದ ಆಬಿದಿನ ಮಗನಾದ ಅತಿಖಾರ ಜೊತೆಯಲ್ಲಿ ಇನ್ನೊಂದು ವಿವಾಹವಾದರು. ಅವರೂ ಕೂಡ ಹಿಂದ್ ಎನ್ನುವ ಮಗಳು ಜನಿಸಿದ ನಂತರ ಮರಣ ಹೊಂದಿದರು.
ಮೊದಲು ಹಿಂದನ್ನು ಮದುವೆಯಾಗಿದ್ದರೋ, ಅಥವಾ ಅತೀಖರನ್ನು ಮದುವೆಯಾಗಿದ್ದರೋ, ಎನ್ನುವುದರಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ.
ಎರಡು ಬಾರಿ ವಿದವೆಯಾಗಿ, ಮೂರು ಮಕ್ಕಳ ತಾಯಿಯಾಗಿದ್ದ ಖದೀಜ ತಕ್ಷಣಕ್ಕೆ ಯಾವುದೇ ಮದುವೆಯ ಕುರಿತು ಆಲೋಚಿಸಿರಲಿಲ್ಲ. ಖದೀಜರ ಉದಾತ್ತತೆ, ಸೌಂದರ್ಯ ಹಾಗೂ ಆರ್ಥಿಕ ಭದ್ರತೆಯ ಉದ್ದೇಶದಿಂದಾಗಿತ್ತು. ಬಹಳಷ್ಟು ಉನ್ನತ ಪರಿವಾರದ ವಿವಾಹನ್ವೇಷನೆ ಬಂದಿದ್ದರೂ, ಯಾರನ್ನೋ ಕಾದು ಕುಳಿತಿರುವ ಹಾಗೆ ಯಾವುದಕ್ಕೂ ಅನುಮತಿ ನೀಡಿರಲಿಲ್ಲ. ಅಂಧಕಾರದ ಕಾಲದಲ್ಲಿಯೂ ಪರಿಶುದ್ಧವಾದ ಜೀವನ ನಡೆಸಿದ, ಅಪರೂಪದ ಮಹಿಳೆಯಾಗಿದ್ದರು ಖದೀಜ (ರ ) ಬೀವಿ.
ಅವತ್ತಿನ ಯಾವುದೇ ಅನಾವಶ್ಯ ಕಾರ್ಯಗಳಲ್ಲಿ ಸೇರುತ್ತಿರಲಿಲ್ಲ. ಆಕೆಯನ್ನು ಶುದ್ದವತಿ ಅಥವಾ ತ್ವಾಹಿರ ಎಂದು ಕರೆಯಲಾಗುತ್ತಿತ್ತು. ಬುದ್ದಿವಂತೆಯಾಗಿದ್ದ ಬೀವಿ ತನ್ನ ಸಂಪತ್ತನ್ನು ವ್ಯಾಪಾರದಲ್ಲಿ ತೊಡಗಿಸಿದರು, ಕ್ರಮೇಣ ಮಕ್ಕಾದ ಪ್ರಸಿದ್ಧ ವ್ಯಾಪಾರಿಯಾದರು. ‘ಸೈಯ್ಯದತು ನಿಸಾಯಿ ಖುರೈಶ್’ ಅಥವಾ ಖುರೈಶ್ ವನಿತೆಯರ ನಾಯಕಿ ಎನ್ನುವ ಹೆಸರು ಕೂಡ ಪಡೆದುಕೊಂಡರು.
ಬೀವಿಯವರು ತಮ್ಮ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಂಡರು.
ಮಗನಿಗೂ, ಮಗಳಿಗೂ, ಪತಿಗೂ ಹಿಂದ್ ಎನ್ನುವ ಹೆಸರಾಗಿತ್ತು. ಇದೊಂದು ಕುತೂಹಲಕಾರಿ ಸಂಗತಿಯಾಗಿದೆ. ಹಿರಿಯ ಮಗನಾದ ಹಿಂದ್’ನ ಮಗ ಹಿಂದ್ ತಾಯಿಯ ಜೊತೆಯಲ್ಲೇ ಇದ್ದರು. ಅವರ ಮೂಲಕ ನಂತರದ ಕಾಲದಲ್ಲಿ ಪ್ರವಾದಿಯವರ ﷺ ಶಿಕ್ಷಣವೂ ಲಭಿಸಿತು. ಆರಂಭಿಕ ಹಂತದಲ್ಲೇ ಇಸ್ಲಾಮ್ ಸ್ವೀಕರಿಸಿದ್ದರು. ಪ್ರವಾದಿಯವರ ﷺ ಶರೀರದ ವರ್ಣನೆಯಲ್ಲೂ, ಸ್ವಭಾವದ ವರ್ಣನೆಯಲ್ಲೂ ಹಿಂದ್ ಮೊದಲಿನಲ್ಲಿ ಇರುತ್ತಿದ್ದರು. ನಂತರದ ಕಾಲದಲ್ಲಿ ಪ್ರವಾದಿಯವರ ﷺ ಮೊಮ್ಮಕ್ಕಳು ಕೂಡ ಪ್ರವಾದಿವರ್ಯರ ﷺ ವರ್ಣನೆಯನ್ನು ಕೇಳಲು ಹಿಂದ್’ರ ಬಳಿ ಹೋಗುತ್ತಿದ್ದರು.
ಜಮಲ್ ಯುದ್ಧದಲ್ಲಿ ಅಲಿಯವರ (ರ) ಜೊತೆಯಲ್ಲಿದ್ದರು, ಆದೇ ಯುದ್ಧದಲ್ಲೇ ಮರಣ ಹೊಂದಿದರು.
ಹಾಲ ಎನ್ನುವ ಮಗನೂ ನಂತರದ ದಿನಗಳಲ್ಲಿ ಇಸ್ಲಾಂ ಸ್ವೀಕರಿಸಿ ಮದೀನಕ್ಕೆ ಬಂದದ್ದು ಕಾಣಬಹುದು. ಆದರೆ ಅವರ ಕುರಿತಾದ ಚರಿತ್ರೆಗಳು ಲಭ್ಯವಿಲ್ಲ.
ಮಗಳು ಹಿಂದ್ ಕೂಡ ತಾಯಿಯ ಜೊತೆಯಲ್ಲೇ ಇದ್ದರು. ಚಿಕ್ಕಪ್ಪನ ಮಗನಾದ ಸ್ವಫಿಯ್ಯ್ ಬಿನ್ ಉಮಯ್ಯರನ್ನು ಮದುವೆಯಾಗಿ ‘ಮುಹಮ್ಮದ್’ ಎನ್ನುವ ಮಗನಿಗೆ ಜನ್ಮ ನೀಡಿದರು. ನಂತರದ ಕಾಲದಲ್ಲಿ ಅವರ ಕುಟುಂಬ ಪರಂಪರೆಯು ಬನೂತ್ವಾಹಿರ ಅಥವಾ ಖದೀಜರ ಮಕ್ಕಳು ಎನ್ನುವ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು.
ಬೀವಿಯವರ ಇತರ ಎರಡು ಮಕ್ಕಳ ಕುರಿತು ಚರಿತ್ರೆಯಲ್ಲಿ ಮಾಹಿತಿ ಲಭ್ಯವಿಲ್ಲ.
(ಮುಂದುವರಿಯುವುದು…)
Part-26/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 26
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವಧುವರರ ಹಿನ್ನೆಯ ಕುರಿತು ತಿಳಿದುಕೊಂಡೆವು. ಪ್ರತಿಯೊಬ್ಬರೂ ಈ ವಿವಾಹಕ್ಕೆ ಯಾಕಾಗಿ ತಯಾರಾಗಿದ್ದರೆಂದು, ಉದಾತ್ತ ಸೌಂದರ್ಯವಂತೆಯೂ, ಬುದ್ಧಿವಂತೆಯೂ, ಶ್ರೀಮಂತರೂವಾದ ಖದೀಜರಿಗಿದ್ದ ಕಾರಣಗಳು ಯಾವುದಾಗಿತ್ತೆಂದು.?
ಇತಿಹಾಸಕ್ಕೆ ಕೆಲವೊಂದು ವಿಷಯಗಳನ್ನು ತಿಳಿಸಲಿದೆ.
ಪ್ರವಾದಿಯವರಿಗಿದ್ದ ﷺ ಉದಾತ್ತತೆ, ಚಾರಿತ್ರ್ಯ ಶುದ್ದಿ, ಸ್ವೀಕಾರ, ಇದೆಲ್ಲದ್ದಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕ ಸಂದೇಶಗಳು ಲಭಿಸಿದ್ದಾಗಿತ್ತು, ನಿಯೋಗ ಪುರುಷನ ಅಂತಃಪುರಕ್ಕಾಗಿ ಸೃಷ್ಟಿಕರ್ತನು ಖದೀಜರನ್ನು ಕಾದಿರಿಸಿದ್ದು.
ಇದರ ನಡುವೆ ಒಂದು ಘಟನೆ ನಡೆದಿತ್ತು. ಖುರೈಷಿಗಳಿಗೊಂದು ಸಂಭ್ರಮದ ದಿನ ಬಂದಿತ್ತು. ಮಕ್ಕಾ ಪಟ್ಟಣದ ಎಲ್ಲಾ ಮಹಿಳೆಯರೂ ಕಅಬಾದ ಪರಿಸರದಲ್ಲಿ ಜೊತೆಸೇರಿದ್ದರು.
ಮಹಿಳೆಯರಿಗೆಂದು ವಿಶೇಷವಾಗಿ ಮೀಸಲಿರಿಸಿದ್ದ ಸ್ಥಳದಲ್ಲಿ ಖದೀಜ (ರ) ಕೂಡ ಜೊತೆಯಲ್ಲಿದ್ದರು. ಎಲ್ಲರೂ ಸಂಭ್ರಮದಲ್ಲಿ ಮೈಮರೆತಿದ್ದಾಗ, ತೀರ್ಥ ಯಾತ್ರೆಗೆಂದು ಮಕ್ಕಾ ಪಟ್ಟಣಕ್ಕೆ ಬಂದಿದ್ದ ಒಬ್ಬ ಯಹೂದಿಯು ಅಲ್ಲಿಗೆ ಆಗಮಿಸಿದರು. ಮಹಿಳೆಯರ ವೇಧಿಕೆಯತ್ತ ತೆರಳಿ ಆ ವ್ಯಕ್ತಿ ಹೀಗೆ ಹೇಳಿದರು. ಓ ಖುರೈಷಿ ಮಹಿಳೆಯರೇ.! ಶೀಘ್ರದಲ್ಲೇ ದೇವ ದೂತನೊಬ್ಬರು ನಿಮ್ಮ ನಡುವೆ ಪ್ರವೇಶಿಸುವರು. ನಿಮ್ಮಲ್ಲಿ ಯಾರಾಗಿರಬಹುದು ಆ ಮಹಾನ್ ವ್ಯಕ್ತಿಯ ಮನದರಸಿಯಾಗುವವರು.?
ಯಾರಾಗಿರಬಹುದು ಆ ಭಾಗ್ಯವಂತಳು.? ನೀವು ಬಯಸುದಾದರೆ ಒಮ್ಮೆ ಪರೀಕ್ಷಿಸೋಣ. ಈ ಮಾತನ್ನು ಕೇಳಿದ ಮಹಿಳೆಯರಲ್ಲಿ ಕೆಲವರು ನಕ್ಕರು, ಕೆಲವರು ಯಹೂದಿಯ ವಿರುದ್ಧ ಮಣ್ಣೆಸೆದರು, ಕೆಲವರು ಅವರನ್ನು ದೂಷಿಸಿದರು. ಆದರೆ ಖದೀಜ (ರ) ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ವೇದಜ್ಞಾನಿ ಹೇಳಿದ ಮಾತನ್ನು ಆಲೋಚಿಸುತ್ತಾ ಕುಳಿತಿದ್ದರು.
ದಿವಸಗಳ ನಂತರ ಮೈಸರ ಪ್ರವಾದಿಯವರ ﷺ ವಿಸ್ಮಯಗಳನ್ನು ತಿಳಿಸಿದಾಗ, ಆ ವೇದಜ್ಞಾನಿಯ ಮಾತುಗಳು ನೆನಪಿಗೆ ಬಂದವು.
ಶಾಮ್’ಗೆ ತೆರಳಿದ್ದ ಯಾತ್ರೆಯ ನಂತರ ಲಭಿಸಿದ್ದ ವಿವರಗಳು ಖದೀಜರ ಭರವಸೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿತ್ತು. ನೇರವಾಗಿ ಕೆಲವೊಂದು ವಿಸ್ಮಯಗಳನ್ನು ಕಂಡ ನಂತರ ಅಧಿಕವಾಗಿ ಯೋಚಿಸಲಿಲ್ಲ.
ನಲ್ವತ್ತು ವರ್ಷಗಳಿಂದ ಕಅಬಾದ ಪರಿಸರದಲ್ಲೇ ವಾಸವಾಗಿದ್ದ ಖದೀಜರಿಗೆ ಪ್ರವಾದಿಯವರ ﷺ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಕಾಣಲು ಅವಕಾಶ ಲಭಿಸಿತ್ತು. ಬರಗಾಲದ ಸಂದರ್ಭದಲ್ಲಿ ಅಬ್ದುಲ್ ಮುತ್ತಲಿಬರು ಮಾಡಿದ್ದ ಪ್ರಾರ್ಥನೆ, ಅವರ ಜೊತೆಯಲ್ಲಿದ್ದ ಮುಹಮ್ಮದರು ﷺ, ಮುಂತಾದ ಅನುಭವಗಳನ್ನು ಖದೀಜರಿಗೆ ಕಾಣಲು ಅವಕಾಶ ಲಭಿಸಿತ್ತು.
ಇಮಾಮ್ ಕುಲಾಯಿ ಉಲ್ಲೇಖಿಸಿದ ಒಂದು ಘಟನೆ ಈ ರೀತಿಯಾಗಿದೆ.
ಮೈಸರ ಹೇಳಿದ ವಿಷಯಗಳನ್ನೂ, ಖದೀಜ (ರ) ನೇರವಾಗಿ ವಿಸ್ಮಯಗಳನ್ನೂ, ಖದೀಜ (ರ) ನಂತರ ಆಲೋಚಿಸ ತೊಡಗಿದರು. ವಾಸ್ತವ ತಿಳಿಯಲೆಂದು ಬೀವಿಯವರ ಸಂಬಂಧಿಕರೂ, ವೇದಜ್ಞಾನಿಯಾಗಿದ್ದ ವರಕತ್ ಬಿನ್ ನೌಫಲರ ಬಳಿ ತೆರಳಿದರು. ಎಲ್ಲಾ ವಿಷಯಗಳನ್ನು ಗಮವಿಟ್ಟು ಕೇಳಿದ ನಂತರ “ಓ ಖದೀಜ.. (ರ) ನೀವು ಹೇಳಿದ್ದೆಲ್ಲವೂ ಸತ್ಯವಾಗಿದ್ದರೆ, ಮುಹಮ್ಮದ್ ﷺ ಖಂಡಿತ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯಾಗಿರುತ್ತಾರೆ ﷺ. ಇಂತಹ ಒಬ್ಬರು ಪ್ರವಾದಿಯವರನ್ನು ﷺ ನಿಯೋಗಿಸಲಿದೆಯೆಂದು, ನನಗೆ ಮೊದಲೇ ತಿಳಿದಿತ್ತು.
ಆ ಪ್ರವಾದಿಯವರ ﷺ ನಿಯೋಗದ ಸಮಯವು ಹತ್ತಿರವಾಗುತ್ತಿದೆ” ಎಂದು ಹೇಳಿದರು. ಈ ವಿವರಣೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಖದೀಜ ಸೌಭಾಗ್ಯವನ್ನು ನೆನೆದು ಒಂದು ಹೊಸ ಜೀವನವನ್ನು ಬಯಸಿದರು.
ನಂತರವೂ ಪ್ರವಾದಿಯವರ ﷺ ಕುರಿತಿರುವ ವಿಶೇಷತೆಗಳನ್ನು ವರಕತ್ ಖದೀಜರಿಗೆ (ರ) ತಿಳಿಸುತ್ತಿದ್ದರು. ಈ ವಿಷಯದಲ್ಲಿ ಕವಿತೆಯನ್ನು ರಚಿಸಿ ಅವರಿಗೆ ತಲುಪಿಸುತ್ತಿದ್ದರು. ಈ ಕವಿತೆಗಳನ್ನು ಚರಿತ್ರೆಗಳಲ್ಲಿ ಉಲ್ಲೇಖಿಸಲಾಗಿದೆ.
ಇಮಾಮ್ ಫಾಕಿಹಿ ಉಲ್ಲೇಖಿಸಿದ ಒಂದು ಘಟನೆಯು ಈ ರೀತಿಯಿದೆ.
ಖದೀಜರ ವಿವಾಹನ್ವೇಷಣೆ ಅಬೂತ್ವಾಲಿಬರಿಗೆ ತಲುಪಿತು, ಅವರು ತಕ್ಷಣವೇ ಅದಕ್ಕೆ ಸಮ್ಮತಿಸಿದರು, ನೇರವಾದ ಮಾತುಕತೆಗಾಗಿ ಮುಹಮ್ಮದರನ್ನು ﷺ ಹಾಗೂ ಸೇವಕ ನಬ್ಅಃರನ್ನು ಜೊತೆಗೆ ಖದೀಜರ ಮನೆಗೆ ಕಳುಹಿಸಿದರು. ನಬ್’ಅ ಹೇಳುತ್ತಾರೆ, ನಾವು ಖದೀಜರ (ರ) ಮನೆಗೆ ತಲುಪಿದೆವು. ಅವರು ನಮ್ಮನ್ನು ಬಾಗಿಲ ಬಳಿ ಬಂದು ಖುದ್ದಾಗಿ ಸ್ವೀಕರಿಸಿದರು. ನಂತರ ನನ್ನ ತಂದೆ ತಾಯಿಯವರು ಮುಹಮ್ಮದರ ﷺ ಸಂಬಂಧಿಕರಾಗಿತ್ತಾರೆ, ನಾನು ಈ ವಿವಾಹವನ್ನು ಒಪ್ಪಿಕೊಳ್ಳಲು ಕಾರಣವಿದೆ ಮುಹಮ್ಮದರು ﷺ ಈ ಸಮೂಹಕ್ಕೆ ನಿಯೋಗಿಸಲ್ಪಡುವ ಪ್ರವಾದಿಯಾಗಿದ್ದಾರೆ, ಎನ್ನುವ ಭರವಸೆ ನನಗಿದೆ.
ಹೀಗಿರುವಾಗ ಪ್ರವಾದಿಯಾದ ನಂತರ ನನ್ನನ್ನು ಅಂಗೀಕರಿಸಬಹುದಲ್ಲವೇ.? ಪ್ರವಾದಿಯಾಗಿ ನೇಮಿಸಿದ ಅಲ್ಲಾಹನಲ್ಲಿ ನನಗಾಗಿ ಪ್ರಾರ್ಥಿಸಬಹುದಲ್ಲವೇ ಎಂದು ಖದೀಜ ಹೇಳಿದಾಗ, ನೀವು ಹೇಳುವ ಆ ವ್ಯಕ್ತಿ ನಾನಾಗಿದ್ದರೆ.? ನಾವು ಎಂದಿಗೂ ಮುರಿಯದ ಭಾಧ್ಯತೆಯಲ್ಲಾಗಿದೆ ಒಟ್ಟು ಸೇರುತ್ತಿರುವುದು.? ಇನ್ನೂ ಆ ವ್ಯಕ್ತಿ ನಾನು ಆಗಿರದಿದ್ದರೆ ನೀವು ಬಯಸಿದ್ದನ್ನು ಖಂಡಿತ ಸೃಷ್ಟಿಕರ್ತನು ನಿರಾಶೆಗೊಳಿಸಲಾರನೆಂದು ಪ್ರವಾದಿಯವರು ﷺ ಹೇಳಿದರು.
(ಮುಂದುವರಿಯುವುದು…)
Part-27/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 27
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಇನ್ನು ನಾವು ಪ್ರವಾದಿಯವರ ﷺ ಬಳಿ ವಾಪಸು ಬರೋಣ.
ಇಡೀ ಪ್ರಪಂಚದಲ್ಲಿ ವಿಶ್ವ ಸುಂದರಿಯನ್ನೇ ಲಭಿಸುವ ಅವಕಾಶವಿದ್ದರೂ ಯಾಕಾಗಿ ಖದೀಜರನ್ನು (ರ) ಆರಿಸಿಕೊಂಡರು. ಅಲ್ಲಾಹುವಿನ ವಿಶೇಷವಾದ ಆಯ್ಕೆ ಏನಾಗಿತ್ತು ಎನ್ನುವುದಕ್ಕೆ ಉತ್ತರ. ಪ್ರವಾದಿಯವರ ﷺ ಬಾಲ್ಯ ಹಾಗೂ ಹದಿಹರೆಯದ ಜೀವನವೆಲ್ಲವೂ ವಿಶೇಷವಾದ ಆಧ್ಯಾತ್ಮಿಕ ಶಿಕ್ಷಣದ ಮೂಲಕವಾಗಿತ್ತಲ್ಲವೇ ಕಳೆದು ಬಂದದ್ದು. ಅದರ ಮುಂದುವರಿದ ಭಾಗವಾಗಿತ್ತದು. ಖದೀಜರೊಂದಿಗಿನ (ರ) ವಿವಾಹ, ನಂತರದ ಜೀವನದಲ್ಲಿ ಅವರು ನೀಡಿದ ಬೆಂಬಲಗಳೆಲ್ಲವೂ, ಈ ವಿಷಯವನ್ನು ಸ್ಪಷ್ಟವಾಗಿ ಮನಿವರಿಕೆಯಾಗಿಸುತ್ತದೆ.
ಅಂತ್ಯದಿನದವರೆಗೆ ವಿವಾಹದ ಕುರಿತು ಬರುವ ಎಲ್ಲಾ ಆರೋಪಗಳಿಗೂ, ಉತ್ತರವಾಗಿಯಾಗಿತ್ತು ಈ ವಿವಾಹ ನಿಶ್ಚಯಿಸಿದ್ದು.
ಇಪ್ಪತೈದು ವಯಸ್ಸಿನ ಪ್ರವಾದಿಯವರು ﷺ ನಲ್ವತ್ತು ವಯಸ್ಸಿನ ಖದೀಜರನ್ನು (ರ) ವರಿಸಿ, ಇಪ್ಪತ್ತೈದು ವರ್ಷಗಳ ಕಾಲ ಖದೀಜರ (ರ) ಮರಣದವರೆಗೂ ಸಂಪೂರ್ಣ ಸಂತೃಪ್ತಿಯೊಂದಿಗೆ ಜೀವಿಸಿದ್ದರು. ಬಹುಪತ್ನಿತ್ವ ಅಧಿಕವಾಗಿದ್ದ ಅರಬ್ ಜನತೆಯ ನಡುವೆ ಜೀವಿಸಿದ್ದರೂ ಕೂಡ, ಇನ್ನೊಂದು ವಿವಾಹದ ಕುರಿತು ಆಲೋಚಿಸಿಯೂ ಇರಲಿಲ್ಲ. ಒಬ್ಬ ಪುರುಷನು ತನ್ನ ಇಪ್ಪತೈದರಿಂದ ಐವತ್ತು ವರ್ಷಗಳ ವರೆಗಿನ ಪ್ರಾಯವನ್ನು, ನಲ್ವತ್ತರಿಂದ ಅರುವತ್ತೈದು ವರ್ಷದವರೆಗಿನ ಪತ್ನಿಯ ಜೊತೆಯಲ್ಲಿ, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಜೀವಿಸಿದ ವ್ಯಕ್ತಿಯ ಮೇಲೆ.
ಅತಿಯಾದ ಸ್ತ್ರೀ ಆಸಕ್ತಿಯನ್ನು ಆರೋಪಿಸುವವರು, ಯಾವ ಲೋಕದಲ್ಲಾಗಿದೆ ಜೀವಿಸುತ್ತಿರುವುದು.
ಇಲ್ಲಿ ಓರಿಯಂಟಲಿಸ್ಟ್’ಗಳು ಹೇಳುವ ಆರೋಪ ವಿಚಿತ್ರವಾಗಿದೆ. ಖದೀಜರಿಗಿದ್ದ (ರ) ಸಂಪತ್ತನ್ನು ಬಯಸಿಯಾಗಿತ್ತು ಪ್ರವಾದಿಯವರು ﷺ ವಿವಾಹವಾಗಿದ್ದೆಂದು. ಈ ಆರೋಪಕ್ಕೆ ಇತಿಹಾಸದಲ್ಲಿ ಯಾವುದೇ ಅಸ್ತಿತ್ವವಿಲ್ಲ. ಯಾಕೆಂದರೆ ಪ್ರವಾದಿಯವರ ﷺ ಜೀವನದಲ್ಲಿ ಒಮ್ಮೆಯೂ ಕೂಡ, ಹಣಕ್ಕಾಗಿ ಆಸೆಪಡುವ ಯಾವುದೇ ಘಟನೆಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ.
ಖದೀಜರ (ರ) ಸಂಪತ್ತು ಕೂಡ ಪ್ರಬೋಧನೆಯ ದಾರಿಯಲ್ಲೇ ಖರ್ಚಾಗಿತ್ತು. ಆದರೆ ಪ್ರವಾದಿಯವರು ﷺ ಯಾವತ್ತೂ ಐಷಾರಾಮಿ ಜೀವನ ಕಳೆಯಲೋ, ಖದೀಜರ ವ್ಯಾಪಾರ ಸಾಮ್ರಾಜ್ಯವನ್ನು ಸ್ವಾಧೀನ ಪಡಿಸಿಕೊಳ್ಳಲೋ ಪ್ರಯತ್ನಿಸಿರಲಿಲ್ಲ. ಅರಮನೆಯನ್ನು, ಸಿಂಹಾಸನವನ್ನು ಬಯಸುತ್ತಿದ್ದ ಕಾಲದಲ್ಲಿ ಗುಡಿಸಲನ್ನು, ಸರಳತೆಯ ಜೀವನವನ್ನಾಗಿತ್ತು ಬಯಸಿದ್ದು. ಸಿಕ್ಕಿದ್ದೆಲ್ಲವನ್ನೂ ಕಷ್ಟದಲ್ಲಿರುವವರಿಗೆ ಕೊಟ್ಟು ಉದಾರತೆಯ ಜೀವನವನ್ನು ಪ್ರೋತ್ಸಾಹಿಸಿದ್ದರು.
ಯುವಕನಾಗಿದ್ದಾಗ ಅವರು ಸ್ವತಃ ಆಯ್ಕೆಮಾಡಿದ್ದು ಸರಳವಾದ ಪಶುಪಾಲನೆ ಉದ್ಯೋಗವನ್ನಾಗಿತ್ತು. ನಂತರ ದೊಡ್ಡಪ್ಪ ಹೇಳಿದ ಕಾರಣಕ್ಕಾಗಿತ್ತು ವ್ಯಾಪಾರಕ್ಕೆ ಇಳಿದದ್ದು ಕೂಡ. ಅದರ ಮೂಲಕ ಲಭಿಸಿದ ಎಲ್ಲಾ ಸಂಪತ್ತನ್ನು ದೊಡ್ಡಪ್ಪನ ಕುಟುಂಬಕ್ಕೆ ನೀಡಿದ್ದರು
ಖದೀಜರೊಂದಿಗಿನ (ರ) ವಿವಾಹವು ಪ್ರವಾದಿಯವರ ﷺ ಕಡೆಯಿಂದ ಬಂದ ಅನ್ವೇಷಣೆಯಾಗಿರಲಿಲ್ಲ. ಇದನ್ನು ಉಲ್ಲೇಖಿಸಿದ ಯಾವುದೇ ಪುರಾವೆಯೂ ಇಲ್ಲ, ಇದು ಸಂಪೂರ್ಣವಾಗಿ ಖದೀಜರ (ರ) ಭಾಗದಿಂದ ಬಂದ ವಿವಾಹನ್ವೇಷಣೆಯಾಗಿತ್ತಷ್ಟೇ.
ಸಂಪತ್ತನ್ನು, ಶರೀರವನ್ನು, ಎಲ್ಲಾ ಆಸಕ್ತಿಗಳನ್ನು ಕೇವಲ ಜವಾಬ್ದಾರಿ ನಿರ್ವಹಿಸಲು ಮಾತ್ರ ಉಪಯೋಗಿಸಿದ್ದರು.
ಇತಿಹಾಸವನ್ನು ಸರಿಯಾಗಿ ತಿಳಿದರೆ ಅಂತಹ ಒಂದು ತ್ಯಾಗಿಯನ್ನಾಗಿದೆ ಕಾಣಲು ಸಾಧ್ಯವಾಗುವುದು.
ಯಾವುದೇ ಕನ್ಯೆಯನ್ನು ಮದುವೆಯಾಗಬಹುದಾಗಿದ್ದ ಕಾಲದಲ್ಲಿ, ತನ್ನ ಜವಾಬ್ದಾರಿಯನ್ನು ಸಂಪೂರ್ಣಗೊಳಿಸುವಲ್ಲಿ ಸಹಕರಿಸುವ ಪ್ರಬುದ್ಧರಾದ ಮಹಿಳೆಯನ್ನಾಗಿತ್ತು ಆಯ್ಕೆಮಾಡಿದ್ದು. ಎರಡು ಬಾರಿ ವಿದೆವೆಯಾಗಿದ್ದ, ಮೂರು ಮಕ್ಕಳ ತಾಯಿಯಾದ ನಲವತ್ತು ವಯ್ಯಸಿನ ಮಹಿಳೆಯನ್ನು ವಿವಾಹವಾದ ಈ ನಿರ್ಧಾರವನ್ನು ಇತಿಹಾಸ ಎಷ್ಟೊಂದು ಭವ್ಯತೆಯಿಂದಾಗಿದೆ ತಿಳಿಯಬೇಕಾದದ್ದು.
ಖದೀಜರ (ರ) ಸಂಪತ್ತನ್ನು ಆಸೆಪಟ್ಟರು ಎಂದು ತಾವೇ ಸ್ವತಃ ಬರೆದ ದಾಖಲೆಗಳಲ್ಲಿ ಕೆಲವು ಸಂಗತಿಗಳನ್ನು ಮರೆತಿದ್ದಾರೆ.
ಯಾವುದೆಂದರೆ ಬೀವಿಯವರ ಇತರ ಮಹತ್ವಗಳು, ಬುದ್ಧಿವಂತಿಕೆ, ಸೌಂದರ್ಯ, ದಕ್ಷತೆ, ಸ್ವೀಕಾರತೆ, ಹಾಗೂ ಇತರ ಜೀವನದ ಅನುಭವಗಳು ಹೀಗೆ ಅದರ ಪಟ್ಟಿ ಮುಂದುವರಿಯುತ್ತದೆ.
ಇನ್ನು ಮದುವೆಯ ದಿನದ ಕಡೆಗೆ. ನಿಶ್ಚಯಿಸಿದ ವಿವಾಹದ ನಿರ್ವಹಣೆಯ ಕುರಿತಿರುವ ಚರ್ಚೆಗಳಾಗಿದೆ. ಪ್ರವಾದಿಯವರ ﷺ ಕಡೆಯಿಂದ ಎಲ್ಲವನ್ನು ಅಬೂತ್ವಾಲಿಬ್ ವ್ಯವಸ್ಥೆ ಮಾಡಿದರು. ವಧುವಿನ ಮನೆಯಲ್ಲಾಗಿದೆ ವಿವಾಹ ನಡೆಯಲಿರುವುದು, ವರ ಹಾಗೂ ಅವರ ಕುಟುಂಬಸ್ಥರು ವಧುವಿನ ಮನೆಗೆ ಬಂದು ಪ್ರತಿಜ್ಞೆ ಸ್ವೀಕರಿಸುವುದು.
ಎನ್ನುವುದಾಗಿತ್ತು ತೀರ್ಮಾನ.
(ಮುಂದುವರಿಯುವುದು)
Part-28/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 28
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಗಣ್ಯ ವ್ಯಕ್ತಿಗಳೆಲ್ಲರನ್ನು ಅಬೂತ್ವಾಲಿಬ್ ಆಮಂತ್ರಿಸಿದರು. ಮಕ್ಕ ಪಟ್ಟಣದ ಸುಮಾರು ಹತ್ತರಷ್ಟು ಗಣ್ಯವಕ್ತಿಗಳು ಮದುಮಗನ ಜೊತೆಯಲ್ಲಿ ವಧುವಿನ ಮನೆಗೆ ತೆರಳಿದರು.
ವಿವಾಹ ವೇಧಿಕೆಯನ್ನು ಬಹಳ ಸೊಗಸಾಗಿ ಸಜ್ಜಿಕರಿಸಲಾಗಿತ್ತು. ವಧುವಿನ ಕಡೆಯ ಗಣ್ಯರು ಜೊತೆಸೇರಿದ್ದರು. ಮುಖ್ಯ ಅತಿಥಿಯಾಗಿ ವೇದ ಜ್ಞಾನಿಯಾದ ವರಕತ್ ಬಿನ್ ನೌಫಲ್ ಬಂದಿದ್ದರು. ಪ್ರಥಮವಾಗಿ ವಿವಾಹ ಖುತುಬವನ್ನು (ವಿಶೇಷವಾದ ಭಾಷಣ) ಆರಂಭಿಸಲಾಯಿತು. ಅಬೂತ್ವಾಲಿಬರಾಗಿದ್ದರು ಖುತುಬ ನಿರ್ವಹಿಸಿದ್ದು. ಖುತುಬದಲ್ಲಿದ್ದ ವಿಷಯ ಈ ರೀತಿಯಾಗಿದೆ. ಎಲ್ಲಾ ಸ್ತುತಿಯೂ ಅಲ್ಲಾಹನಿಗಾಗಿದೆ, ಅವನು ನಮ್ಮನ್ನು ಇಬ್ರಾಹಿಮರ ಸಂತಾನದಲ್ಲಿಯೂ, ಇಸ್ಮಾಯಿಲರ ಪರಂಪರೆಯಲ್ಲಿಯೂ ಜೊತೆ ಸೇರಿಸಿದನು, ನಾವು ಮಅದ್ದ್’ರ ವಂಶಸ್ಥರೂ, ಮುಳಿರ್’ರವರ ದಾರಿಯಲ್ಲಾಗಿದೆ ಚಲಿಸುತ್ತಿರುವುದು.
ಅಲ್ಲಾಹನು ಅವನ ಭವನವಾದ ಕಅಬಾದ ಪಾಲಕರನ್ನಾಗಿಯೂ, ಹರಮ್’ನ ರಕ್ಷಕರನ್ನಾಗಿಯೂ ನಮ್ಮನ್ನು ಆರಿಸಿಕೊಂಡಿದ್ದಾನೆ. ಅವನು ನಮಗೆ ಸುರಕ್ಷಿತ ಪವಿತ್ರ ನಗರವನ್ನೂ, ಯಾತ್ರಿಕರು ಬಂದು ತಲುಪುವ ಪವಿತ್ರ ಸ್ಥಳವನ್ನು ನೀಡಿದನು. ಅವನು ನಮ್ಮನ್ನು ಜನರೆಡೆಯಲ್ಲಿ ನ್ಯಾಯಾಧೀಶರಾಗಿ ನೇಮಕ ಮಾಡಿರುತ್ತಾನೆ.
ನನ್ನ ಅಣ್ಣ ಅಬುಲ್ಲಾಹ್’ರ (ರ) ಮಗನಾದ ಮುಹಮ್ಮದ್ ﷺ ಇತರ ಯಾವುದೇ ವ್ಯಕ್ತಿಗಳಿಗಿಂತ ಎಲ್ಲಾ ರೀತಿಯಲ್ಲೂ ಉತ್ತಮ ವ್ಯಕ್ತಿಯಾಗಿರುವವರು.
ಯಾರೊಂದಿಗೆ ಹೋಲಿಕೆ ಮಾಡಿದರೂ ಮುಹಮ್ಮದರಾಗಿರುತ್ತಾರೆ ﷺ ಉತ್ತಮ ಸ್ಥಾನದಲ್ಲಿ ನಿಲ್ಲುವುದು. ಮಹತ್ವ, ಬುದ್ದಿವಂತಿಕೆ, ಸಾಮರ್ಥ್ಯ, ಹೀಗೆ ಏನನ್ನು ನೋಡಿದರೂ ಅವರೇ ಆಗಿದ್ದಾರೆ ಉತ್ತಮ ವ್ಯಕ್ತಿ. ಆರ್ಥಿಕವಾಗಿ ಅವರಿಗೆ ಸಣ್ಣ ಕೊರತೆಯಿದೆ, ಅದೊಂದು ಸ್ಥಾನ ಬದಲಿಸುವ ನೆರಳು ಮಾತ್ರವಾಗಿದೆಯಲ್ಲವೇ.
ಆದರೆ ನಾನು ಘೋಷಿಸುತ್ತೇನೆ ನನ್ನ ಅಣ್ಣನ ಮಗನಿಗೆ ಎಲ್ಲವನ್ನೂ ಮೀರಿಸುವ ಸುವಾರ್ತೆ ಬರಲಿದೆ.
ಒಂದು ಮಹತ್ವವಾದ ವಿಷಯ ಬರಲಿದೆ.
ನನ್ನ ಅಣ್ಣ ಮಗ ನಿಮ್ಮ ಪ್ರೀತಿಯ ಮಗಳಾದ ಖದೀಜರನ್ನು (ರ) ಮದುವೆಯಾಗುತ್ತಿದ್ದಾರೆ. ಮದುವೆಗೆ ವಧುದಕ್ಷಿಣೆಯಾಗಿ (ಮಹ್’ರ್) ಹನ್ನೆರಡುವರೆ ಊಖಿಯವಾಗಿದೆ (500 ದಿರ್ಹಂ) ನೀಡುತ್ತಿರುವುದು.
ಅಬೂತ್ವಾಲಿಬರ ಭಾಷಣ ಕಳೆದ ತಕ್ಷಣವೇ ವಧುವಿನ ಭಾಗದಿಂದ ಅಂರ್ ಬಿನ್ ಅಸದ್ ಎದ್ದು ನಿಂತರು. ಖದೀಜರ ಚಿಕ್ಕಪ್ಪನ ಮಗನಾಗಿದ್ದರು ಅವರು. ಅಬೂತ್ವಾಲಿಬರ ಮಾತಿಗೆ ಉತ್ತರವಾಗಿ ನೀವು ಹೇಳಿದ ಯುವಕ ನಿಜವಾಗಿಯೂ ಸಂಪೂರ್ಣ ವ್ಯಕ್ತಿಯಾಗಿರುವರು.
ಈ ವಿನಂತಿಯನ್ನು ನಿರಾಕರಿಸಲಾಗದು, ನಾವು ಖದೀಜರನ್ನು ಮುಹಮ್ಮದರಿಗೆ ﷺ ಮದುವೆ ಮಾಡಿ ಕೊಟ್ಟೆವು. ಎಂದು ಹೇಳಿದ ನಂತರ ವರಕತ್ ಬಿನ್ ನೌಫಲ್ ಮಾತು ಮುಂದುವರಿಸಿದರು , ಸರ್ವ ಸ್ತುತಿಯು ಅಲ್ಲಾಹನಿಗಾಗಿ, ನೀವು ಹೇಳಿದ ಎಲ್ಲಾ ಸ್ಥಾನಗಳನ್ನು ಅಲ್ಲಾಹು ನಮಗೂ ನೀಡಿದ್ದಾನೆ. ನಾವು ಕೂಡ ಅರಬಿಗಳ ನಡುವೆ ಉನ್ನತ ಸ್ಥಾನದಲ್ಲಿದ್ದೇವೆ, ನೀವೂ ಕೂಡ ಅದಕ್ಕೆ ಅರ್ಹರಾಗಿದ್ದೀರಿ, ನಿಮ್ಮ ಉನ್ನತ ಸ್ಥಾನವನ್ನು ಅರಬಿಗಳು ಪರಿಗಣಿಸದೆ ಇರಲಾರರು.
ನಿಮ್ಮ ವೈಭವ ಹಾಗೂ ಘನತೆಯನ್ನು ಯಾರೂ ಪ್ರಶ್ನಿಸುವುದಿಲ್ಲ. ನಿಮ್ಮ ಕುಟುಂಬದೊಂದಿಗೆ ಸಂಬಂಧ ಬೆಳೆಸಲು ನಾವು ಆಗ್ರಹಿಸುತ್ತೇವೆ. ಓ ಖುರೈಶಿಗಳೇ ನಿವಾಗಿರುತ್ತೀರಿ ಇದಕ್ಕೆ ಸಾಕ್ಷಿ. ಅಬ್ದುಲ್ಲಾರ (ರ) ಮಗನಾದ ಮುಹಮ್ಮದರಿಗೂ, ಖುವೈಲಿದ್’ರ ಮಗಳಾದ ಖದೀಜರಿಗೂ ಮೇಲೆ ತಿಳಿಸಿದ ಮಹ್’ರ್’ಗೆ (ವಧು ದಕ್ಷಿಣೆ) ವಿವಾಹಿತರಾದರು ಎಂದು ಘೋಷಿಸುತ್ತಿದ್ದೇನೆ.
ಖದೀಜರ (ರ) ಸಂತೋಷಕ್ಕೆ ಪಾರವೇ ಇಲ್ಲ.
ಇಡೀ ಪ್ರಪಂಚದಲ್ಲೇ ಒಂದು ಹೆಣ್ಣಿಗೆ ಲಭಿಸಬಹುದಾದ ಅತ್ಯುತ್ತಮ ಭಾಗ್ಯವಾಗಿದೆ ಲಭಿಸಿದ್ದು. ವಿಧವತ್ವದ ಕತ್ತಲಾಗಲಿ, ತಾಯ್ತನದ ಧಣಿವಾಗಲಿ ಇರಲಿಲ್ಲ. ಅದೃಷ್ಟದ ಸಂತೋಷದಲ್ಲಿ ತನ್ನ ರಾಜಕುಮಾರನನ್ನು ಸ್ವೀಕರಿಸಲು ಸಿದ್ಧರಾದರು. ಮಕ್ಕಾ ನಿವಾಸಿಗಳೆಲ್ಲರೂ ಆ ಸಂಭ್ರಮವನ್ನು ಕೊಂಡಾಡಿದರು, ಖದೀಜರ ಗೆಳೆತಿಯರು ಹಾಡು ಹಾಡತೊಡಗಿದರು. ಖುರೈಶಿ ಮಹಿಳೆಯರ ನಾಯಕಿಗೆ ಅಲ್ ಅಮೀನ್ ವರನಾಗಿದ್ದಾರೆ, ಎಲ್ಲಿ ಹೋದರೂ ಅದೃಷ್ಟ ಮಾತ್ರ, ಎಂದು ಹೇಳತೊಡಗಿದರು.
ಕವಿಗಳು ಶುಭಾಶಯ ಕವಿತೆಗಳನ್ನು ರಚಿಸಿದರು, ಹಲವರು ಅದನ್ನು ವಾಚಿಸಿದರು. ಅದರ ಕೆಲವು ಸಾಲುಗಳು ಈ ರೀತಿಯಾಗಿದೆ.
“ಲಾ ತಸ್’ಹದೀ ಖದೀಜು ಫೀ ಮುಹಮ್ಮದೀ- ನಜ್’ಮುನ್ ಯುಳೀಉ ಕಮಾ ಅಳಾ ಅಲ್ ಫರ್’ಖದು” ದಾರಿ ಕಾಣುತ್ತೆ ಮಿನುಗುವ ನಕ್ಷತ್ರದ ಹಾಗೆ, ಹೊರಟು ಹೋಗಿರಿ ಮುಹಮ್ಮದರ ಜೊತೆಯಲ್ಲಿ , ಯಾವುದೇ ವಿಷಾದವಿಲ್ಲದೆ ಆನಂದಿಸಿರಿ ಯುವತಿ ಖದೀಜರೇ ನೀವು. (ಸಂತೋಷದಿಂದ)
(ಮುಂದುವರಿಯುವುದು…)
Part-29/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 29
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಬಹಳ ಉತ್ತಮವಾಗಿ ವಿವಾಹ ಸಮಾರಂಭ ಸಮಾಪ್ತಿಯಾದ ಕಾರಣ ಅಬೂತ್ವಾಲಿಬರಿಗೆ ಬಹಳ ಸಂತೋಷವಾಯಿತು.
ಅಲ್ಲಾಹನಿಗೆ ಸ್ತುತಿಸುತ್ತಾ ಅವರು ಹೀಗೆ ಹೇಳಿದರು, “ಅಲ್ಲಾಹನಿಗಾಗಿದೆ ಸರ್ವ ಸ್ತುತಿಯು, ಅವನು ನಮ್ಮೆಲ್ಲಾ ಸಮಸ್ಯೆಗಳನ್ನು ನಿವಾರಿಸಿದನು. ಬೇಸರವನ್ನು ದೂರೀಕರಿಸಿದನು.”
ಮದುವೆಯ ನಿಮಿತ್ತ ವಧುವಿನ ಮನೆಯಲ್ಲಿ ಅದ್ದೂರಿ ಔತಣ ಏರ್ಪಡಿಸಲಾಗಿತ್ತು. ಮಾಂಸದ ಆಹಾರ ತಯಾರಿಸಲಾಗಿತ್ತು. ಮಧುಚಂದ್ರದ ಆಹಾರವನ್ನು (ವಲೀಮ) ಪ್ರವಾದಿಯವರು ﷺ ಆಯೋಜಿಸಿದ್ದರು, ಎರಡು ಒಂಟೆಯ ಮಾಂಸದಿಂದ ಆಹಾರ ತಯಾರಿಸಲಾಗಿತ್ತು.
ಪ್ರವಾದಿಯವರು ﷺ ಅತೀ ಹೆಚ್ಚು ಮಹರ್ ನೀಡಿದ್ದು ಖದೀಜರಿಗಾಗಿತ್ತು (ರ). ಇಪ್ಪತ್ತು ಒಂಟೆಯನ್ನಾಗಿತ್ತು ನೀಡಿದ್ದು ಎನ್ನುವ ಅಭಿಪ್ರಾಯವೂ ಇದೆ. ಎರಡು ಅಭಿಪ್ರಾಯಗಳನ್ನು ಪರಿಗಣಿಸಿ ಈ ರೀತಿಯೂ ಹೇಳಬಹುದು. ಮಹರ್ ಮೊದಲು ಹೇಳಿದ್ದು ಹನ್ನೆರಡುವರೆ ಊಖಿಯವಾಗಿದ್ದರೂ, ನಂತರ ನೀಡಿದ್ದು ಮಾತ್ರ ಅದರ ಬೆಲೆಗೆ ಸಮಾನವಾದ ಇಪ್ಪತ್ತು ಒಂಟೆಯನ್ನಾಗಿತ್ತು ಎಂದು.
ಖದೀಜರನ್ನು (ರ) ವಿವಾಹವಾದ ಕಾರಣ ಪ್ರವಾದಿಯವರಿಗೆ ﷺ ಲಭಿಸಿದ್ದು, ಕೇವಲ ಒಬ್ಬರು ಪತ್ನಿಯನ್ನು ಮಾತ್ರವಾಗಿರಲಿಲ್ಲ.
ಬದಲಾಗಿ ಪ್ರಬುದ್ಧರಾದ ಒಬ್ಬರು ಒಡನಾಡಿಯನ್ನಾಗಿತ್ತು, ತಬ್ಬಲಿತನವನ್ನು ದೂರ ಮಾಡಲು ಸಿಕ್ಕಿದ ಜೊತೆಗಾರ್ತಿಯಾನ್ನಾಗಿತ್ತು. ಅವರು ಪರಸ್ಪರ ಪ್ರೀತಿ, ಗೌರವ ಹಾಗೂ ಸಮಾನ ಭಾವನೆಯಿಂದ ಕಾಣುತ್ತಿದ್ದರು, ಇಪ್ಪತ್ತೈದು ವರ್ಷಗಳ ವೈವಾಹಿಕ ಜೀವನದ ನಂತರವೇ, ಪ್ರವಾದಿಯವರು ﷺ ಇತರ ವಿವಾಹವಾಗಿದ್ದರು. ಅದರಲ್ಲಿ ಕನ್ಯೆಯಾದ ಆಯಿಷ (ರ) ಬೀವಿಯವರಿದ್ದರೂ, ಖದೀಜರ (ರ) ಮೇಲಿನ ಪ್ರೀತಿಯನ್ನು ಹಾಗೂ ಅವರ ನೆನಪುಗಳನ್ನು ತಮ್ಮ ಜೀವನದ ಕೊನೆಯವರೆಗೂ ಉಳಿಸಿಕೊಂಡಿದ್ದರು.
ಮದುವೆಯ ನಂತರವೂ ಪ್ರವಾದಿಯವರು ﷺ ವ್ಯಾಪಾರಕ್ಕೆ ತೆರಳುತ್ತಿದ್ದರು, ಅದಕ್ಕೆ ಪುರಾವೆಯಾಗಿ ಕೆಲವೊಂದು ಘಟನೆಗಳಿವೆ.
ಅವುಗಳಲ್ಲಿ ಒಂದನ್ನು ಹೀಗೆ ವಿವರಿಸಬಹುದು. ಮಕ್ಕಾ ಪಟ್ಟಣದ ಗಣ್ಯ ವ್ಯಕ್ತಿಯಾಗಿದ್ದ ಉಮಯ್ಯತ್ ಬಿನ್ ಅಬಿಸಲ್’ತ್ವ್ ಎನ್ನುವವರು, ತನ್ನ ಗೆಳೆಯನಾಗಿದ್ದ ಅಬೂಸೂಫಿಯಾನ್’ರೊಂದಿಗೆ ಮಾತುಕತೆಯ ನಡೆಸುತ್ತಿದ್ದಾಗ ಹೇಳಿದ ಮಾತು ಈ ರೀತಿಯಾಗಿತ್ತು. ನಾನು ಯಮನ್’ನಿಂದ ವ್ಯಾಪಾರ ಮುಗಿಸಿ ಮನೆಗೆ ತಲುಪಿದೆನು. ಎಲ್ಲರೂ ನನ್ನನ್ನು ಭೇಟಿಯಾಗಿ ಶುಭಾಶಯ ತಿಳಿಸಿ ವ್ಯಾಪಾರ ಸರಕುಗಳನ್ನು ವಾಪಸು ನೀಡಿ, ವ್ಯಾಪಾರದ ಲಾಭದಲ್ಲಿ ಪಾಲು ಕೇಳಿದ್ದರು.
ಅವರ ಜೊತೆಯಲ್ಲಿ ಮುಹಮ್ಮದ್ ﷺ ಕೂಡ ಇದ್ದರು, ಅವರು ನನ್ನ ಬಳಿ ಬಂದು ಶುಭಾಶಯ ತಿಳಿಸಿ, ಯೋಗಕ್ಷೇಮ ವಿಚಾರಿಸಿ ಹಿಂತಿರುಗಿ ಹೋದರು ಆದರೆ ಲಾಭದಲ್ಲಿ ಪಾಲು ಕೇಳಿರಲಿಲ್ಲ. ನನ್ನ ಮಡದಿ ಹಿಂದ್’ಕೂಡ ಜೊತೆಯಲ್ಲಿದ್ದರು, ಅದನ್ನು ಕಂಡು ಇದೆಂಥ ಅದ್ಭುತ ಎಲ್ಲರೂ ಅವರ ಲಾಭದಲ್ಲಿ ಪಾಲು ಕೇಳಿದರೆ ಮುಹಮ್ಮದರು ﷺ ಮಾತ್ರ ಯೋಗಕ್ಷೇಮ ವಿಚಾರಿಸಿ ಹಿಂತಿರುಗಿದರೆಂದು ಹಿಂದ್ ಹೇಳಿದರು.
ಉಮಯ್ಯತ್ತಿನ ವಿವರಣೆ ಕೇಳಿದ ಅಬೂಸುಫಿಯಾನ್ ನನಗೂ ಕೂಡ ಮುಹಮ್ಮದರೊಂದಿಗಿರುವ ﷺ ಕೆಲವು ಅನುಭವಗಳನ್ನು ಹೇಳಲಿದೆ.
ನಾನು ಕೂಡ ವ್ಯಾಪಾರ ಯಾತ್ರೆ ಕಳೆದು ಕಅಬಾದ ಪ್ರದಕ್ಷಿಣೆ ಹಾಕಲು ತೆರಳಿದ್ದಾಗ ಅಲ್ಲಿ ಮುಹಮ್ಮದರನ್ನು ﷺ ಭೇಟಿಯಾದೆನು. ನೀವು ಹಿಂತಿರುಗಿಸಿದ ಸರಕುಗಳು ಅಧಿಕವಾಗಿತ್ತು, ಒಳ್ಳೆಯ ಲಾಭ ಲಭಿಸಿದೆ, ನೀವು ಯಾರನ್ನಾದರೂ ಮನೆಗೆ ಕಳುಹಿಸಿದರೆ ಲಾಭಾಂಶವನ್ನು ನೀಡುತ್ತೇನೆ. ನಾನು ಇತರರಿಂದ ಪಡೆಯುವಷ್ಟು ಲಾಭಾಂಶವನ್ನು ನೀವು ನನಗೆ ನೀಡಬೇಕಾಗಿಲ್ಲ ಎಂದು ಹೇಳಿದೆನು. ತಕ್ಷಣವೇ ಎಲ್ಲರಿಂದ ಪಡೆಯುವಷ್ಟು ಲಾಭಾಂಶವನ್ನು ನನ್ನಿಂದಲೂ ಪಡೆಯುದಾದರೆ ಮಾತ್ರ ಲಾಭಾಂಶ ಪಡೆಯಲು ವ್ಯಕ್ತಿಯನ್ನು ಕಳುಹಿಸುತ್ತೇನೆಂದು ಮುಹಮ್ಮದ್ ﷺ ಉತ್ತರಿಸಿದರು.
ನಾನು ಅದಕ್ಕೆ ಒಪ್ಪಿದೆನು, ಅವರು ವ್ಯಕ್ತಿಯನ್ನು ಕಳುಹಿಸಿದಾಗ ನನ್ನ ಲಾಭಾಂಶವನ್ನು ತೆಗೆದು ನಂತರ ಬಾಕಿರುವ ಪಾಲನ್ನು ಅವರಿಗೆ ಕೊಟ್ಟು ಕಳುಹಿಸಿದೆನು.
ವಿವಾಹದ ನಂತರವೂ ಸ್ವಾಭಿಮಾನದಿಂದಲೇ ಸಂಸಾರ ನಡೆಸುತ್ತಿದ್ದರು. ವ್ಯಾಪಾರ ವಹಿವಾಟುಗಳಲ್ಲಿ ನ್ಯಾಯ, ನೀತಿಯನ್ನು ತನ್ನ ಸ್ವಂತ ಜೀವನದ ಮೂಲಕ ತೋರಿಸಿಕೊಟ್ಟರು. ಪತ್ನಿ ಖದೀಜರ (ರ) ಜೊತೆಯಲ್ಲಿ ಕಳೆದ ಜೀವನವು, ಪ್ರವಾದಿಯವರ ﷺ ಸುತ್ತಮುತ್ತಲಿನ ವಾತಾವರಣವನ್ನು ಸುಧಾರಿಸಿತು.
ಸಂತೋಷವಾದ ದಾಂಪತ್ಯ ಜೀವನವನ್ನು ನಡೆಸಿದರು. ಖದೀಜರ (ರ) ಕನಸುಗಳು ವಿಧವೆಯ ಪ್ರಪಂಚವನ್ನು ತೊರೆದು ಭರವಸೆಯ ಹೊಸ ನಾಳೆಗಳಿಗಾಗಿ ಕಾಯುತ್ತಿದ್ದವು. ತನ್ನ ರಾಜಕುಮಾರನ ಎಲ್ಲಾ ಆಸಕ್ತಿಯಲ್ಲೂ ಜೊತೆಯಲ್ಲಿದ್ದರು. ಪ್ರವಾದಿಯವರ ﷺ ಪತ್ನಿಯಾದ ನಂತರ ಖದೀಜರು (ರ) ಮಕ್ಕಾ ಪಟ್ಟಣದಲ್ಲಿ ಬಹಳಷ್ಟು ಗೌರವಿಸಲ್ಪಟ್ಟರು.
ನವದಂಪತಿಗಳ ದಾಂಪತ್ಯದಲ್ಲಿ ಜೇನು ಸವಿಯಲು ಚಿಟ್ಟೆಗಳು ಮುಗಿಬಿದ್ದಿದ್ದವು, ಜೋಡಿ ಹಕ್ಕಿಗಳಿಗಾಗಿ ಸಮಯವು ಕಾಯುತ್ತಿತ್ತು…
(ಮುಂದುವರಿಯುವುದು…)
Part-30/365
ಪ್ರವಾದಿ ಮುಹಮ್ಮದ್ ﷺ ತಂಙಳವರ ಜೀವನ ಚರಿತ್ರೆ
ಭಾಗ – 30
ಲೇಖಕ: ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ
ಕನ್ನಡಕ್ಕೆ: ಮುಹಮ್ಮದ್ ಇಲ್ಯಾಸ್ ಪಿಲಿಕೂರು
ಸಂತೋಷದ ವಸಂತದಲ್ಲಿ ದಾಂಪತ್ಯ ಜೀವನವು ಅರಳಲು ತೊಡಗಿತು.
ಪ್ರವಾದಿಯವರ ﷺ ಪತ್ನಿ ಖದೀಜ (ರ) ಗರ್ಭಿಣಿಯಾದರು, ಇಬ್ಬರಿಗೂ ಸಂತೋಷ ಇಮ್ಮಡಿಯಾಯಿತು. ಇತಿಹಾಸದ ಪ್ರಮುಖ ಉಲ್ಲೇಖದ ಪ್ರಕಾರ, ಮುಹಮ್ಮದ್ ﷺ ಖದೀಜ (ರ) ದಂಪತಿಗಳಿಗೆ ಆರು ಮಕ್ಕಳು ಜನಿಸಿದವು. ಎರಡು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು.
ಮೊದಲು ಹುಟ್ಟಿದ ಮಗನಿಗೆ ಅಲ್ ಖಾಸಿಂ ಎಂದು ಹೆಸರಿಟ್ಟರು. ಅದರೊಂದಿಗೆ ಪ್ರವಾದಿಯವರನ್ನು ﷺ ಖಾಸಿಮರ ತಂದೆ “ಅಬುಲ್ ಖಾಸಿಂ” ಎನ್ನುವ ಹೆಸರಿನಿಂದ ಕರೆಯಲ್ಪಟ್ಟರು. ಆದರೆ ಅಧಿಕ ಸಮಯದವರೆಗೆ ಆ ಸಂತೋಷ ಬಾಕಿಯಾಗಲಿಲ್ಲ, ಎರಡು ವರ್ಷ ಪೂರ್ತಿಯಾದಾಗ ಖಾಸೀಮ್ ಎಂಬ ಮಗು ಮರಣ ಹೊಂದಿತು.
ಜನಿಸಿದಾಗಲೇ ತಂದೆಯನ್ನು ಕಳೆದುಕೊಂಡು, ಆರನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ನೋವನ್ನೂ ಸಹಿಸಿಕೊಂಡವರಲ್ಲವೇ ಪ್ರವಾದಿಯವರು ﷺ. ಈಗ ಹಿರಿಯ ಮಗ ಖಾಸಿಂ ಬಾಲ್ಯದಲ್ಲೇ ಮರಣ ಹೊಂದಿದ ನೋವನ್ನೂ ಕೂಡ ಸಹಿಸಿಕೊಂಡರು. ಗುಲಾಮನು ತನ್ನ ಯಜಮಾನನ ತೀರ್ಪುಗಳಲ್ಲಿ ಹೇಗೆ ತೃಪ್ತನಾಗಬೇಕು ಎಂಬುದನ್ನು ತನ್ನ ಜೀವನದ ಮೂಲಕ ಪ್ರವಾದಿಯವರು ﷺ ತೋರಿಸಿಕೊಟ್ಟರು. ಖದೀಜರನ್ನು ಸಮಾಧಾನ ಪಡಿಸಿದರು. ಖಾಸೀಮರ ಮರಣ ಎರಡು ವಯಸ್ಸಿನಲ್ಲಿ ಅಲ್ಲ, ಒಂಟೆಯ ಮೇಲೆ ಸವಾರಿ ಮಾಡಲು ಸಾಧ್ಯವಾಗುವ ಪ್ರಾಯದಲ್ಲಾಗಿತ್ತು ಎನ್ನುವ ಅಭಿಪ್ರಾಯ ಕೂಡ ಇತಿಹಾಸದಲ್ಲಿ ಕಾಣಬಹುದು.
ಎರಡನೇ ಬಾರಿ ಜನಿಸಿದ್ದು ಝೈನಬ್ (ರ) ಮಗಳಾಗಿತ್ತು ಎನ್ನುವ ಅಭಿಪ್ರಾಯವೂ ಇದೆ.
ಅಂದು ಪ್ರವಾದಿಯವರಿಗೆ ﷺ ಮೂವತ್ತು ವರ್ಷ ಪ್ರಾಯವಾಗಿತ್ತು. ಎಂದು ಇಬ್’ನು ಅಬ್ದುಲ್ ಬರ್ರ್ ಉಲ್ಲೇಖಿಸಿದ್ದಾರೆ. ಝೈನಬ್ (ರ) ತಂದೆತಾಯಿಯೊಂದಿಗೆ ಸಂತೋಷದೊಂದಿಗೆ ಬೆಳೆದರು. ದೊಡ್ಡವಳಾದ ನಂತರ ಖದೀಜರ (ರ) ಚಿಕ್ಕಪನ ಮಗನಾದ ಅಬ್ದುಲ್ ಆಸ್ ಬಿನ್ ರಬೀಅರ ಜೊತೆಯಲ್ಲಿ ವಿವಾಹ ನಡೆಸಿದರು. ಅವರಿಗೆ ಅಲಿ ಎಂಬ ಮಗನೂ, ಉಮಾಮ ಎಂಬ ಮಗಳು ಜನಿಸಿದರು. ಅಲಿ ಬಾಲ್ಯದಲ್ಲಿ ಮರಣ ಹೊಂದಿದರು. ಪ್ರವಾದಿಯವರ ﷺ ಮಗಳು ಫಾತಿಮರ ವಿಯೋಗದ ನಂತರ ಅವರ ಪತಿ ಅಲಿ (ರ) ಉಮಾಮರನ್ನು ವಿವಾಹವಾದರು.
ಅದೂ ಕೂಡ ಫಾತಿಮರ (ರ) ನಿರ್ದೇಶನದ ಮೇರೆಗೆಯಾಗಿತ್ತು.
ಝೈನಬ್ (ರ) ಪ್ರಾರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದರು. ಆದರೆ ಅವರ ಪತಿ ಅಬ್ದುಲ್ ಆಸ್ ಸ್ವಕರಿಸಿರಲಿಲ್ಲ, ಝೈನಬ್ (ರ) ತಂದೆಯ ಜೊತೆಯಲ್ಲಿ ಮದೀನಕ್ಕೆ ಪಲಾಯನ (ಹಿಜ್’ರ) ನಡೆಸಿದರು. ಅಬ್ದುಲ್ ಆಸ್ ಬದ್ರ್ ಯುದ್ಧದಲ್ಲಿ ವಿರೋಧಿಗಳ ಪಕ್ಷದಲ್ಲಿದ್ದರು, ಯುದ್ಧ ಖೈದಿಯಾಗಿ ಮುಸ್ಲಿಮರು ಅವರನ್ನು ಬಂಧಿಸಿದ್ದರು. ಬಂಧನದಿಂದ ಮುಕ್ತಿ ಲಭಿಸಿದ ನಂತರವಾಗಿತ್ತು ಝೈನಬರಿಗೆ (ರ) ಪಲಾಯನಕ್ಕೆ ಅನುಮತಿ ಕೊಟ್ಟದ್ದು.
ಬಹಳ ವರ್ಷಗಳ ನಂತರವಾಗಿತ್ತು ಅವರು ಇಸ್ಲಾಂ ಸ್ವೀಕರಿಸಿದ್ದು. ನಂತರ ಝೈನಬರ (ರ) ಜೊತೆಯಲ್ಲಿ ಜೀವಿಸತೊಡಗಿದರು, ಆದರೆ ಅವರ ದಾಂಪತ್ಯ ಜೀವನ ಅಧಿಕ ಸಮಯ ಉಳಿಯಲಿಲ್ಲ, ಹಿಜ್’ರಾದ ಎಂಟನೇ ವರ್ಷ ಪ್ರವಾದಿಯವರ ﷺ ಜೀವಿತ ಕಾಲದಲ್ಲೇ ಮರಣ ಹೊಂದಿದರು.
(ಅಬುಲ್ ಆಸ್’ರ ಇತಿಹಾಸಕ್ಕೆ ನಂತರ ಬರೋಣ)
ಪುಣ್ಯ ಪ್ರವಾದಿಯವರ ﷺ ಮೂವತ್ಮೂರನೇ ವಯಸ್ಸಿನಲ್ಲಿ ಮೂರನೇ ಮಗುವಾದ ರುಖಿಯ ಜನಿಸಿದರು. ಬೆಳೆದು ದೊಡ್ಡವಳಾದ ನಂತರ ಅಬೂಲಹಬರ ಮಗನಾದ ಉತ್’ಬರ ಜೊತೆಯಲ್ಲಿ ವಿವಾಹ ನಡೆಸಿದರು.
ಆದರೆ ಮಧುಚಂದ್ರದ ಮೊದಲೇ ತಂದೆ ಅಬೂಲಹಬರ ನಿರ್ದೇಶನದ ಮೇರೆಗೆ ವಿವಾಹ ವಿಚ್ಛೇದನ ನಡೆಸಿದರು. ನಂತರ ಅವರನ್ನು ಉಸ್ಮಾನ್ ಬಿನ್ ಅಫ್ಫಾನ್’ರವರ (ರ) ಜೊತೆಯಲ್ಲಿ ವಿವಾಹ ನಡೆಸಲಾಯಿತು. ಅವರೂ ಕೂಡ ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿ ಮದೀನಕ್ಕೆ ಪಲಾಯನ ನಡೆಸಿದ್ದರು. ರುಖಿಯ, ಉಸ್ಮಾನ್ ದಂಪತಿಗಳಿಗೆ ಅಬ್ದುಲ್ಲಾ ಎಂಬ ಗಂಡು ಮಗು ಜನಿಸಿತು. ಆದರೆ ಆರನೇ ವಯಸ್ಸಿನಲ್ಲಿ ಅವರು ಕೂಡ ಮರಣ ಹೊಂದಿದರು. ಹಿಜ್’ರಾದ ಎರಡನೇ ವರ್ಷ ಬದ್ರ್ ಯುದ್ಧದ ನಂತರ ಮದೀನಾದಲ್ಲಿ ಬೀವಿ ರುಖಿಯ ಕೂಡ (ರ) ಮರಣ ಹೊಂದಿದರು.
ಅಂದು ಇಪ್ಪತ್ತು ವಯಸ್ಸಾಗಿತ್ತು ಬೀವಿಯವರಿಗಿದ್ದ ಪ್ರಾಯ. ರುಖಿಯರನ್ನು (ರ) ಮೊದಲು ಮದುವೆಯಾಗಿದ್ದ ಉತ್’ಬ ಮಕ್ಕಾವಿಜಯದ ದಿನ ಇಸ್ಲಾಮ್ ಸ್ವೀಕರಿಸಿದರು.
ಪ್ರವಾದಿಯವರ ﷺ ನಾಲ್ಕನೇ ಮಗುವಾಗಿ ಉಮ್ಮು ಕುಲ್ಸ್ ಜನಿಸಿದರು. ಅಬೂಲಹಬಿನ ಮಗನಾದ ಉತೈಬತ್ ವಿವಾಹವಾದರು. ಮಧುಚಂದ್ರದ ಮೊದಲೇ ತಂದೆಯ ಆದೇಶದ ಮೇರೆಗೆ ಅವನು ಕೂಡ ವಿವಾಹ ವಿಚ್ಛೇದನ ನಡೆಸಿದನು. ಉತೈಬತ್ ಪ್ರವಾದಿಯವರ ﷺ ವಿರೋಧಿಗಳ ಪಕ್ಷದಲ್ಲಿ ಸಜೀವರಾಗಿ ಕಿರಿಕಿರಿಯುಂಟಾಗುವ ಚಟುವಟಿಕೆಗಳನ್ನು ಮಾಡತೊಡಗಿದನು.
ನಂತರ ಅದರ ಪರಿಣಾಮವಾಗಿ ಬಹಳಷ್ಟು ದುಃಖದ ಫಲವನ್ನು ಅನುಭವಿಸಬೇಕಾಯಿತು.
ಬೀವಿ ರುಖೀಯರ (ರ) ಮರಣದ ನಂತರ ಉಸ್ಮಾನ್ (ರ) ರವರಿಗೆ ಹಿಜ್’ರಾದ ಮೂರನೇ ವರ್ಷ ರಬಿವುಲ್ ಅವ್ವಲ್ ತಿಂಗಳಲ್ಲಿ ಉಮ್ಮು ಕುಲ್ಸುರವರನ್ನು (ರ) ವಿವಾಹ ನಡೆಸಿದರು. ಆದರೆ ಆ ದಾಂಪತ್ಯ ಜೀವನವೂ ಅಧಿಕ ಸಮಯ ಬಾಕಿಯಾಗಲಿಲ್ಲ, ಹಿಜ್’ರಾ ಒಂಬತನೇ ವರ್ಷ ಶಅಬಾನ್ ತಿಂಗಳಲ್ಲಿ ಉಮ್ಮು ಕುಲ್ಸು ಕೂಡ ಮರಣ ಹೊಂದಿದರು. ಈ ಸಂದರ್ಭದಲ್ಲಿ ಉಸ್ಮಾನ್’ರವರನ್ನು (ರ) ಹೋಗಳುತ್ತಾ ಹೀಗೆ ಹೇಳಿದರು ” ನನಗೆ ಹತ್ತು ಹೆಣ್ಣು ಮಕ್ಕಳಿರುತಿದ್ದರೆ ಒಂದರ ಹಿಂದೆ ಒಂದರಂತೆ ಸಾಲಾಗಿ ಉಸ್ಮಾನರಿಗೆ ವಿವಾಹ ನಡೆಸಿ ಕೊಡುತ್ತಿದ್ದೆ.”
(ಮುಂದುವರಿಯುವುದು…)